ಬೆಂಗಳೂರು: ಘಟನೆ ಸಂಬಂಧ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ. ಒಂದು ವೇಳೆ ಘೋಷಣೆ ಕೂಗಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ತಿಳಿಸಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಆರೋಪ ಸಂಬಂಧ ಮಾತನಾಡಿದ ಅವರು, ಆ ಕ್ಲಿಪಿಂಗ್ ಸೆಕ್ಯುರ್ ಮಾಡುತ್ತಿದ್ದೇವೆ. ಅಧಿಕೃತವಾಗಿ ಟೆಲಿಕಾಸ್ಟ್ ಆಗಿರೋ ಕ್ಲಿಪಿಂಗ್ ಪಡೆದು ತನಿಖೆಗೆ ಒಳಪಡಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಪಾಕ್ ಪರ ಘೋಷಣೆ ಆರೋಪ; ಎಫ್‌ಎಸ್‌ಎಲ್‌ಗೆ ವೀಡಿಯೋ ಕಳುಹಿಸಲು ಪೊಲೀಸರ ತಯಾರಿ
ಈಗಾಗಲೇ ಸುಮೋಟೋ ಕೇಸ್ ದಾಖಲಾಗಿದೆ. ಬಿಜೆಪಿ ಕೊಟ್ಟಿರುವ ದೂರನ್ನ ಅದಕ್ಕೆ ಸೇರಿಸಿದ್ದೇವೆ. ಮೊದಲು ಟೆಲಿಕಾಸ್ಟ್ ಮಾಡಿದವರ ವಿಡಿಯೋ ಪಡೆದು ತನಿಖೆ ಮಾಡ್ತೇವೆ. ಎಫ್‌ಎಸ್‌ಎಲ್‌ಗೆ ಕಳುಹಿಸುವ ಪ್ರಕಿಯೆಗಳು ಆರಂಭವಾಗಿವೆ. ಘೋಷಣೆ ಕೂಗಿದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ವೀಡಿಯೋ ಚಿತ್ರೀಕರಣ, ವಿಧಾನಸೌಧ ಸಿಸಿ ಕ್ಯಾಮೆರಾ ಎಲ್ಲವನ್ನೂ ಪಡೆದು ತನಿಖೆ ಮಾಡ್ತೇವೆ. ಕೆಲವರು ನಾಸಿರ್ ಸಾಬ್ ಅಂತಾರೆ, ಕೆಲವರು ಪಾಕಿಸ್ತಾನ ಅಂತಾರೆ. ಇದರ ಸತ್ಯತೆ ವೈಜ್ಞಾನಿಕವಾಗಿ ತಿಳಿಯಬೇಕು ಅಂತ ಎಫ್ಎಸ್‌ಎಲ್‌ಗೆ ಕಳುಹಿಸುತ್ತಿದ್ದೇವೆ. ಒಂದು ವೇಳೆ ಕೂಗಿದ್ರೆ ಕಾನೂನು ಕ್ರಮ ಆಗೇ ಆಗುತ್ತೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ಪಾಕ್ ಜಿಂದಾಬಾದ್ ಘೋಷಣೆ – ಸುಮೊಟೋ ಕೇಸ್ ದಾಖಲಿಸಿದ ಪೊಲೀಸರು
ಸದನದ ಒಳಗೆ, ಹೊರಗೆ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಅವರು ಮಾಡಲಿ. ನಾವು ತಪ್ಪು ಅಂತ ಹೇಳಲ್ಲ. ಕಾನೂನು ಚೌಕಟ್ಟಿನಲ್ಲಿ ಮಾಡಲಿ. ಇದರಲ್ಲಿ ಕಾಂಗ್ರೆಸ್ ತಪ್ಪೇನಿದೆ. ಮುಸ್ಲಿಂ ತುಷ್ಠೀಕರಣ ಮಾಡ್ತಾರೆ ಅಂತ ಹೇಳ್ತಾನೆ ಬಂದಿದ್ದಾರೆ. ಅದು ಹೋಸದೇನಲ್ವಲ್ಲ ಎಂದರು.