ಬಳ್ಳಾರಿ ಜನತೆ ಕಂಠಿಹಾರವನ್ನು ಕೊಟ್ಟ ಕಥೆ ಹೇಳಿದ ಡಿಕೆ ಶಿವಕುಮಾರ್

Public TV
2 Min Read
DKSHI 1

ಬಳ್ಳಾರಿ: ಸಂಡೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಉಗ್ರಪ್ಪನವರನ್ನು ಗೆಲ್ಲಿಸಿದ ವಿಚಾರವನ್ನು ಕೃಷ್ಣದೇವರಾಯನ ಕಾಲದ ಕುಸ್ತಿ ಸ್ಪರ್ಧೆಗೆ ಹೋಲಿಸಿ ಬಳ್ಳಾರಿ ಜನರನ್ನು ಅಭಿನಂದಿಸಿದ್ದಾರೆ.

ಕನಕಪುರದ ಕೆಂಪೇಗೌಡರು ಈ ಹಿಂದೆ ಶ್ರೀಕೃಷ್ಣದೇವರಾಯರ ಕಾಲದಲ್ಲಿ ಕುಸ್ತಿ ಆಡಿ ಕಂಠಿಹಾರ ಗೆದ್ದಿದ್ದರು. ಅಲ್ಲಿಂದ ಬಂದೂ ಹಂಪಿಯಲ್ಲಿ ಕುಸ್ತಿಯಲ್ಲಿ ಗೆದ್ದು, ಕಂಠಿಹಾರ ಗೆದ್ದುಕೊಂಡು ಹೋಗಿದ್ದರು. ನಾನು ಬಳ್ಳಾರಿಗೆ ಚುನಾವಣೆಗೆ ಬಂದಾಗ, ಕೋಟೆ ಮಲ್ಲಯ್ಯನಿಗೆ ಪೂಜೆ ಸಲ್ಲಿಸಿ ಉಗ್ರಪ್ಪರನ್ನ ಗೆಲ್ಲಿಸಿಕೊಟ್ಟೆ. ಉಗ್ರಪ್ಪರನ್ನ ಗೆಲ್ಲಿಸುವ ಮೂಲಕ ನೀವೂ ನನಗೆ ಕಂಠಿಹಾರವನ್ನು ಕೊಟ್ಟಿದೀರಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

vlcsnap 2019 03 24 15h05m07s277

ಮೇಲೆ ಕೂತಿರುವವರು ಎಷ್ಟು ಮುಖ್ಯವೂ, ಅಷ್ಟೇ ಕೆಳಗೂ ಕೂತಿರುವವರು ಮುಖ್ಯವಾಗಿದ್ದೀರಿ. ನಮ್ಮ ಶ್ರೀರಾಮುಲು ಅಣ್ಣನವರು ರಾಜಕಾರಣದಲ್ಲಿ ನಮ್ಮ ಪ್ರತಿಸ್ಪರ್ಧಿಗಳಾಗಿದ್ದಾರೆ. ಅವರು ಕನಕಪುರದ ಗೌಡರಿಗೆ ಎನು ಸಂಬಂಧ, ಅವರು ಯಾಕೆ ಇಲ್ಲಿ ಬಂದಿದ್ದಾರೆ ಎಂದು ಕೇಳಿದ್ದರು. ಕನಕಪುರದಲ್ಲಿ ಕಲ್ಲು ಒಡೆದುಕೊಂಡು ಇರೋದು ಬಿಟ್ಟು ಇಲ್ಲಿ ಏನು ಕೆಲಸ ಎಂದು ನಮ್ಮ ಶ್ರೀರಾಮುಲು ಅಣ್ಣನವರು ಕೇಳಿದ್ದರು ಎಂದು ಹೇಳಿದರು.

ಕಾಂಗ್ರೆಸ್ಸಿನಲ್ಲಿ ನಿನ್ನ ಹೆಣ ಹೊರುವವನೂ ನಾನೇ, ನಿನ್ನ ಪಲ್ಲಕ್ಕಿ ಹೊರುವವನೂ ನಾನೇ ಎಂದು ಈಗಾಗಲೇ ನಾಗೇಂದ್ರನಿಗೆ ಹೇಳಿದ್ದೇನೆ. ಅಂದರೆ ನಿನ್ನ ಕಷ್ಟಕಾಲಕ್ಕೂ, ಸುಖಕ್ಕೂ ಆಗುವವನು ನಾನೇ ಎಂದು ಅರ್ಥ. ಅವನು ನಮ್ಮ ಹುಡುಗ, ತಪ್ಪು ಮಾಡಿರಬಹುದು. ಯಾರು ಯಾರನ್ನೂ ಬಿಡುವ ಪ್ರಶ್ನೆ ಇಲ್ಲ. ನಾನು ಇಂದು ಹೋಗಿ ನಾಗೇಂದ್ರ ಅವರನ್ನ ಭೇಟಿ ಮಾಡಿ ಬರುತ್ತೇವೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

vlcsnap 2019 03 24 14h22m33s223

ಅಂದು ಶಾಂತಕ್ಕ ದೆಹಲಿಗೆ, ಡಿಕೆಶಿ ಜೈಲಿಗೆ ಎಂದು ಶ್ರೀರಾಮುಲು ಹೇಳಿದ್ದರು. ಆದರೆ ನಾನು ಇಂದು ಸಂಡೂರಿನಲ್ಲಿ ನಿಮ್ಮ ಸೇವೆ ಮಾಡಲು ಬಂದು ವೇದಿಕೆಯ ಮೇಲೆ ನಿಂತಿದ್ದೇನೆ. ಅಂದು ಬಜೆಟ್‍ನಲ್ಲಿ ಸುಮಾರು 5 ಸಾವಿರ ಕೋಟಿ ಅನುದಾನವನ್ನು ಬಳ್ಳಾರಿಗೆ ನೀಡಿದ್ದೇವೆ. ಬಡವರಿಗಾಗಿ ಮನೆಯನ್ನು ಕಟ್ಟಿಸಿಕೊಟ್ಟಿದ್ದೇವೆ. ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಬಳ್ಳಾರಿಗೆ 2 ಸಚಿವ ಸ್ಥಾನ ನೀಡಿದ್ದೇವೆ. ಆನಂದಸಿಂಗ್‍ರಿಗೆ ನಿಗಮ ಕೊಡುತ್ತೇವೆ. ಅದೇ ರೀತಿ ನಾಗೇಂದ್ರ ಸಹ ನಿಗಮ ಸ್ಥಾನ ಕೊಡುತ್ತೇವೆ ಎಂದು ಹೇಳಿದ್ದೇವೆ ಎಂದರು.

ಕನಕಪುರದ ಕೆಂಪೇಗೌಡರು ಈ ಹಿಂದೆ ಶ್ರೀಕೃಷ್ಣದೇವರಾಯರ ಕಾಲದಲ್ಲಿ ಕುಸ್ತಿ ಆಡಿ ಕಂಠಿಹಾರ ಗೆದ್ದಿದ್ದರು. ಅಲ್ಲಿಂದ ಬಂದೂ ಹಂಪಿಯಲ್ಲಿ ಕುಸ್ತಿಯಲ್ಲಿ ಗೆದ್ದು, ಕಂಠಿ ಹಾರ ಗೆದ್ದುಕೊಂಡು ಹೋಗಿದ್ದರು. ನಾನು ಉಗ್ರಪ್ಪರ ಚುನಾವಣೆಗೆ ಬಂದಾಗ, ಕೋಟೆ ಮಲ್ಲಯ್ಯನ ಪೂಜೆ ಸಲ್ಲಿಸಿ ಉಗ್ರಪ್ಪರನ್ನ ಗೆಲಿಸಿ ಕೊಟ್ಟೆ. ಉಗ್ರಪ್ಪರನ್ನ ಗೆಲ್ಲಿಸುವ ಮೂಲಕ ನೀವೂ ನನಗೆ ಕಂಠಿಹಾರ ಕೊಟ್ಟಿದೀರಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *