ಬೆಂಗಳೂರು: ತನ್ನ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಸಚಿವ ರಮೇಶ್ ಜಾರಕಿಹೊಳಿ ಪರ ಸಚಿವ ಡಿಕೆ ಶಿವಕುಮಾರ್ ಬ್ಯಾಂಟಿಂಗ್ ಮಾಡಿದ್ದಾರೆ.
ವಿಧಾನಸೌಧದಲ್ಲಿ ರಮೇಶ್ ಜಾರಕಿಹೊಳಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮೇಲೆ ಯಾರು ಬೇಕಾದರೂ ಪ್ರಹಾರ ಮಾಡಲಿ. ನೀವು ಮಾಧ್ಯಮದವರು ಸುಮ್ಮನೆ ಸೃಷ್ಟಿ ಮಾಡಬೇಡಿ. ರಮೇಶ್ ನನ್ನ ಪರ್ಸನಲ್ ಫ್ರೆಂಡ್. ಪಾಪ ಅವರ ಇಮೇಜ್ ಯಾಕೆ ಹಾಳು ಮಾಡುತ್ತೀರಿ ಎಂದು ಅನುಕಂಪದ ಮಾತನ್ನು ಆಡಿದರು.
Advertisement
Advertisement
ರಮೇಶ್ ಜಾರಕಿಹೊಳಿ ಲಾಯಲ್ ಕಾಂಗ್ರೆಸ್ ಮ್ಯಾನ್. ಯೂಥ್ ಕಾಂಗ್ರೆಸ್ ನಿಂದ ಬೆಳೆದವರು. ಪಕ್ಷದ ವಿರುದ್ಧ ಹಾಗೆಲ್ಲ ಅವರು ಮಾಡುವುದಿಲ್ಲ. ಮಾಧ್ಯಮಗಳು ಸುಮ್ಮನೆ ಸೃಷ್ಟಿ ಮಾಡ್ತಿದ್ದೀರಾ ಅಂತ ರಮೇಶ್ ಜಾರಕಿಹೋಳಿ ಪರವೇ ಬ್ಯಾಟಿಂಗ್ ಮಾಡಿದರು.
Advertisement
ರಮೇಶ್ ಜಾರಕಿಹೋಳಿ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ಎಲ್ಲದರಲ್ಲೂ ತಪ್ಪು ಹುಡುಕುವುದು ಬೇಡ. ಸರ್ಕಾರ ಕೆಲಸ ಮಾಡಲು ಅವಕಾಶ ಕೊಡಬೇಕು. ಏನೇ ವಿಚಾರ ಇದ್ದರೂ ಬಗೆಹರಿಸಲು ರಾಜ್ಯ, ರಾಷ್ಟ್ರ ನಾಯಕರು ಇದ್ದಾರೆ. ಕೂತು ಚರ್ಚೆ ಮಾಡಬೇಕು. ಜಿಲ್ಲೆ, ಕ್ಷೇತ್ರದ ವಿಚಾರ ಏನೇ ಇದ್ದರು ಕುಳಿತು ಮಾತನಾಡಬೇಕು. ಬೇರೆ ಏನೇ ವಿಚಾರ ಇದ್ದರು ಅವರು ನಾಯಕರ ಬಳಿ ಮಾತನಾಡಬಹುದು ಎಂದು ರಮೇಶ್ ಜಾರಕಿಹೊಳಿ ಹೆಸರನ್ನು ಹೇಳದೇ ಡಿಕೆಶಿ ಟಾಂಗ್ ಕೊಟ್ಟರು. ಇದನ್ನೂ ಓದಿ: ನನ್ನ ವಿರುದ್ಧ ಸ್ವಯಂಘೋಷಿತ ಕೈ ಪ್ರಭಾವಿ ನಾಯಕರಿಂದ ಷಡ್ಯಂತ್ರ – ರಮೇಶ್ ಜಾರಕಿಹೊಳಿ
Advertisement
ರಾಜಕೀಯ ಮಾಡಬಾರದು: ಮೇಕೆದಾಟು ವಿಚಾರದಲ್ಲಿ ತಮಿಳುನಾಡು ರಾಜಕೀಯ ಮಾಡಬಾರದು. ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನವರು ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ ಅಂತ ಕೆಲವರು ಹೇಳಿದ್ದಾರೆ. ಆದರೆ ಅದು ಎಷ್ಟು ನಿಜ, ಎಷ್ಟು ಸುಳ್ಳೋ ಗೊತ್ತಿಲ್ಲ. ನಮ್ಮಲ್ಲಿ ಜಗಳ ಬೇಡ. ಕೇಂದ್ರ ಸರ್ಕಾರ ನಮಗೆ ಸಮಗ್ರ ಯೋಜನಾ ವರದಿ(ಡಿಪಿಆರ್) ಮಾಡಲು ಹೇಳಿದೆ. ನಾವು ಡಿಪಿಆರ್ ಮಾಡುತ್ತೇವೆ. ಪ್ರಾಜೆಕ್ಟ್ ಅನ್ನ ನೀವು ನೋಡಿ. ಕರ್ನಾಟಕಕ್ಕೆ ಇದರಿಂದ ದೊಡ್ಡ ಲಾಭವಿಲ್ಲ. ತಮಿಳುನಾಡಿಗೆ ಹೆಚ್ಚು ಲಾಭ ಇರುವ ಕಾರಣ ವಿರೋಧ ಬೇಡ ಎಂದು ತಮಿಳುನಾಡು ಸರ್ಕಾರದ ಜೊತೆ ಮನವಿ ಮಾಡಿಕೊಂಡರು.
ನ್ಯಾಯ ಮಂಡಳಿ ಆದೇಶ ಪಾಲನೆ ಮಾಡೋದು ನಮ್ಮ ಕೆಲಸ. ವ್ಯರ್ಥ ಆಗುವ ಮಳೆ ನೀರು ತಡೆಯಲು ಈ ಯೋಜನೆ ಮಾಡುತ್ತಿದ್ದೇವೆ. ನಮ್ಮ ಹಣದಿಂದ ಯೋಜನೆ ಮಾಡುತ್ತಿದ್ದೇವೆ. ಈ ವಿಚಾರದ ಬಗ್ಗೆ ಚರ್ಚೆ ಮಾಡೋಕೆ ಡಿಸೆಂಬರ್ 6 ಕ್ಕೆ ಸಭೆ ಇದೆ. ಸಿಎಂ, ಮಾಜಿ ಸಿಎಂ ಗಳು ಸಭೆಯಲ್ಲಿ ಭಾಗವಹಿಸುತ್ತಾರೆ. ನಮ್ಮ ರಾಜ್ಯದ ಹಕ್ಕು, ರಾಜ್ಯದ ಹಿತವನ್ನು ತಮಿಳುನಾಡು ರೈತರ ಹಿತವನ್ನು ಕಾಪಾಡಲು ನಾವು ಬದ್ಧ ಎಂದರು.
ಪ್ರಾಜೆಕ್ಟ್ ಬಗ್ಗೆ ತಮಿಳುನಾಡು ಜೊತೆ ಮಾತನಾಡಲು ನಾನು ಸಿದ್ಧನಿದ್ದೇನೆ. ನಮ್ಮ ಪ್ರಾಜೆಕ್ಟ್ ಬಗ್ಗೆ ತಿಳಿಸಲು ಸಮಯ ಕೇಳಿದ್ದೇವೆ. ಕೇಂದ್ರದ ಮಂತ್ರಿ ಗಳಿಗೂ ಸಮಯ ಕೇಳಿದ್ದೇನೆ. ಇಬ್ಬರು ಕರೆಸಿ ಮಾತಾಡಿ ಅಂತ ಹೇಳಿದ್ದೇನೆ ಅಂತ ತಿಳಿಸಿದರು. ಇದನ್ನೂ ಓದಿ: ಮೇಕೆದಾಟು ಡ್ಯಾಂ – ಕರ್ನಾಟಕಕ್ಕೆ ಆರಂಭಿಕ ಗೆಲುವು, ತಮಿಳುನಾಡಿಗೆ ಮುಖಭಂಗ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv