ಬೆಂಗಳೂರು: ವೈದ್ಯಕೀಯ ಕ್ಷೇತ್ರ ಸೇವಾ ಮನೋಭಾವದ್ದು ಎಂಬ ಮೂಲ ಉದ್ದೇಶವನ್ನ ನಾವು ಮರೆಯಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh GunduRao) ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ವಿಧಾನ ಸೌಧದಲ್ಲಿಂದು ರಾಷ್ಟ್ರೀಯ ವೈದ್ಯರ ದಿನಾಚರಣೆಯ (National Doctors Day) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾನವೀಯತೆ ಅತಃಕರಣದಿಂದ ವೈದ್ಯರು ಬಡವರಿಗೆ ಚಿಕಿತ್ಸೆ ನೀಡಲು ಮುಂದಾಗಬೇಕು. ಸೇವಾ ಮನೋಭಾವ ಇದ್ದಾಗ ಮಾತ್ರ ಒಬ್ಬ ಡಾಕ್ಟರ್ ಒಳ್ಳೆಯ ಡಾಕ್ಟರ್ ಎನಿಸಿಕೊಂಡು ಜನರಿಗೆ ಹತ್ತಿರವಾಗಲು ಸಾಧ್ಯ. ಡಾ. ಬಿಧಾನ್ ಚಂದ್ರ ರಾಯ್ ಅವರನ್ನೇ ಎಲ್ಲ ವೈದ್ಯರು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಡಾ. ಬಿ.ಸಿ ರಾಯ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ನಾಯಕರಲ್ಲಿ ಒಬ್ಬರಾಗಿ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದವರು. ಬಿ.ಸಿ ರಾಯ್ ಅವರು ರಾಜಕಾರಣದಲ್ಲಿ ಉನ್ನತ ಸ್ಥಾನ ಅಲಂಕರಿಸಿದರೂ, ತಮ್ಮ ವೈದ್ಯ ವೃತ್ತಿಯನ್ನು ಮರೆತಿರಲಿಲ್ಲ. ಸಿಎಂ ಆಗಿದ್ದಾಗಲೂ ಸಂಜೆಯ ವೇಳೆ 1 ಗಂಟೆ ಕೊಳಗೆರಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದರು. ಅವರ ಸ್ಮರಣಾರ್ಥವಾಗಿಯೇ ನಮ್ಮ ದೇಶದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚಾರಣೆ ಆಚರಣೆಗೆ ಬಂದಿದೆ ಎಂದರು. ಇದನ್ನೂ ಓದಿ: Maharashtra Bus Accident – ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ
ಆರೋಗ್ಯ ಇಲಾಖೆಯಲ್ಲಿ ಅಂಗಾಂಗ ತಜ್ಞ ವೈದ್ಯರ ಪ್ರಾವೀಣ್ಯತೆ ಬಡಜನರಿಗೂ ಸಿಗುವಂತಾಗಬೇಕು. ಈ ಬಗ್ಗೆ ಸರ್ಕಾರ ಕಾರ್ಯಕ್ರಮಗಳನ್ನ ಹಾಕಿಕೊಳ್ಳಲಿದೆ. ಅಲ್ಲದೇ ಸರ್ಕಾರಿ ಕುಂದು ಕೊರತೆಗಳನ್ನ ನಿವಾರಿಸಲು ಸರ್ಕಾರ ಪ್ರಮಾಣಿಕ ಪ್ರಯತ್ನ ಮಾಡಲಿದೆ ಎಂದು ಗುಂಡೂರಾವ್ ಇದೇ ವೇಳೆ ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಆರೋಗ್ಯ ಇಲಾಖೆಯ ಮೇಲೆ ವಿಶೇಷ ಕಾಳಜಿ ಇದೆ. ಬಡವರ ಆರೋಗ್ಯ ರಕ್ಷಣೆಗೆ ಸಿದ್ದರಾಮಯ್ಯ ಅವರು ಬದ್ಧತೆ ಹೊಂದಿರುವವರು. ಆರೋಗ್ಯ, ಅಹಾರ, ಶಿಕ್ಷಣದ ವಿಚಾರದಲ್ಲಿ ಬಡವರು ವಂಚಿತರಾಗಬಾರದು ಎಂಬ ಮನೋಭಾವ ಸಿದ್ದರಾಮಯ್ಯ ಅವರು ಹೊಂದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಘಾಟನಾ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ, ಬಡವರ ವಿಚಾರದಲ್ಲಿ ವೈದ್ಯರು ಅತಃಕರಣದಿಂದ ಕೆಲಸ ಮಾಡಲು ಕರೆ ನೀಡಿದರು.
ಡಾ. ಬಿ.ಸಿ ರಾಯ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ನಮನ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ, ಹಳ್ಳಿಗಳಲ್ಲಿ ಆರೋಗ್ಯ ಸೇವೆ ನೀಡಲು ಬಿ.ಸಿ ರಾಯ್ ಅವರನ್ನ ಪ್ರೇರಣೆಯಾಗೆ ತೆಗೆದುಕೊಳ್ಳಿ ಎಂದು ಸಿಎಂ ಮನವಿ ಮಾಡಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]