ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ದೋಸ್ತಿ ರಾಜ್ಯ ರಾಜಕೀಯದಲ್ಲಿ ಸದ್ಯ ಚರ್ಚಿತ ವಿಷಯವಾಗಿದೆ. ಈ ಸಂಬಂಧ ಇದೀಗ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಅವರು ನಾವು ಹೇಳಿದ ಮಾತನ್ನು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಿಜ ಮಾಡಲು ಹೊರಟಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿ ಬಿ ಟೀಂ ಜೆಡಿಎಸ್ ಎಂದು ನಾವು ಅನೇಕ ಬಾರಿ ಹೇಳಿದ್ದೆವು. ಈಗ ಹೆಚ್‍ಡಿಕೆ ನಮ್ಮ ಮಾತು ಸತ್ಯ ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ. ಕೋಮುವಾದಿ ಪಕ್ಷ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಹೊರಟಿರುವ ಜೆಡಿಎಸ್‍ಗೆ ಯಾವ ಸಿದ್ಧಾಂತವಿದೆ?. ಅದೊಂದು ಅವಕಾಶವಾದಿ ಪಕ್ಷ. ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಸೈ ಎಂದಿದ್ದಾರೆ. ಇದನ್ನೂ ಓದಿ: ಲೋಕಸಮರಕ್ಕಾಗಿ BJP- JDS ದೋಸ್ತಿ- NDA ಸಭೆಯಲ್ಲಿ ಭಾಗಿಯಾಗ್ತಾರಾ ಹೆಚ್‍ಡಿಕೆ?
2
JDS ಮುಂದಿರುವ ಜಾತ್ಯಾತೀತ ಎಂಬ ಪದ ಕೇವಲ ಸೋಗಲಾಡಿತನವಷ್ಟೆ.
2006 ರಲ್ಲಿ BJP ಜೊತೆ ಸೇರಿ 20-20 ಸರ್ಕಾರ ಮಾಡಿದಾಗಲೇ ಜಾತ್ಯಾತೀತ ತತ್ವಕ್ಕೆ HDK ಎಳ್ಳು ನೀರು ಬಿಟ್ಟಿದ್ದರು.
ಆಗಲೇ JDSನ ಅವನತಿ ಶುರುವಾಗಿದ್ದು.
2004ರಲ್ಲಿ 59 ಸ್ಥಾನ ಗೆದ್ದಿದ್ದ JDS ಈ ಬಾರಿ 19 ಸ್ಥಾನಕ್ಕೆ ಕುಸಿಯಲು ಈ ನಕಲಿ ಜಾತ್ಯಾತೀತ ಸಿದ್ದಾಂತವೇ ಕಾರಣ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 16, 2023
ಜೆಡಿಎಸ್ ಮುಂದಿರುವ ಜಾತ್ಯಾತೀತ ಎಂಬ ಪದ ಕೇವಲ ಸೋಗಲಾಡಿತನವಷ್ಟೆ. 2006 ರಲ್ಲಿ ಬಿಜೆಪಿ ಜೊತೆ ಸೇರಿ 20-20 ಸರ್ಕಾರ ಮಾಡಿದಾಗಲೇ ಜಾತ್ಯಾತೀತ ತತ್ವಕ್ಕೆ ಹೆಚ್‍ಡಿಕೆ ಎಳ್ಳು ನೀರು ಬಿಟ್ಟಿದ್ದರು. ಆಗಲೇ ಜೆಡಿಎಸ್‍ನ ಅವನತಿ ಶುರುವಾಗಿದ್ದು. 2004ರಲ್ಲಿ 59 ಸ್ಥಾನ ಗೆದ್ದಿದ್ದ ಜೆಡಿಎಸ್ ಈ ಬಾರಿ 19 ಸ್ಥಾನಕ್ಕೆ ಕುಸಿಯಲು ಈ ನಕಲಿ ಜಾತ್ಯಾತೀತ ಸಿದ್ದಾಂತವೇ ಕಾರಣ ಎಂದು ಸಚಿವರು ವಾಗ್ದಾಳಿ ನಡೆಸಿದರು.
ಬಿಜೆಪಿಗೆ (BJP) ವಿಪಕ್ಷ ನಾಯಕನ ಎರವಲು ಸೇವೆ ನೀಡುತ್ತಿರುವ ಹೆಚ್‍ಡಿಕೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬದಲು ವಿಲೀನ ಮಾಡಿಕೊಳ್ಳಲಿ. ಆಗ ತಾವೇ ಅಧಿಕೃತವಾಗಿ ವಿಪಕ್ಷ ನಾಯಕನಾಗಬಹುದು. ಈ ಮೂಲಕವಾದರೂ ಹೆಚ್‍ಡಿಕೆಯವರ ಸುಳ್ಳು ಜಾತ್ಯಾತೀತತೆಯ ನಕಲಿ ಶ್ಯಾಮನ ಅವತಾರ ಕೊನೆಯಾಗಲಿ ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಬಿಜೆಪಿ-ಜೆಡಿಎಸ್ ಡೀಲ್?: ಬಿಜೆಪಿ ಜೆಡಿಎಸ್ ದೋಸ್ತಿ ಮಾತುಕತೆ ಫೈನಲ್ ಆದ್ರೆ ಚುನಾವಣೆ ಪೂರ್ವ ಅಥವಾ ಚುನಾವಣೆ ನಂತರ ಮೈತ್ರಿ ಆಗಬಹುದು. ಚುನಾವಣೆ ಪೂರ್ವ ಮೈತ್ರಿಯಾದರೆ 28 ಕ್ಷೇತ್ರಗಳಲ್ಲಿ ಸೀಟು ಹಂಚಿಕೆ ಮಾತುಕತೆ ಆಗಬಹುದು. 28 ಕ್ಷೇತ್ರಗಳಲ್ಲಿ 23+5 ಸೀಟು ಅಥವಾ 20+8 ಸೀಟು ಹೊಂದಾಣಿಕೆ ಸೂತ್ರ ಆಗಬಹುದು. ದೋಸ್ತಿ ಮಾತುಕತೆ ಫೈನಲ್ ಆದರೆ ಕುಮಾರಸ್ವಾಮಿಗೆ ಕೇಂದ್ರದಲ್ಲಿ ಸ್ಥಾನಮಾನಗಳು ಸಿಗಬಹುದು. ಸೀಟು ಹಂಚಿಕೆ ಸೂತ್ರ ಯಶಸ್ವಿಯಾದರೆ ವಿಪಕ್ಷ ಸ್ಥಾನ ಕೊಡುವ ಬಗ್ಗೆಯೂ ಚರ್ಚೆಗಳು ಆಗಬಹುದು ಎನ್ನಲಾಗಿದೆ.
ಒಟ್ಟಿನಲ್ಲಿ ಜಾತ್ಯಾತೀತ ನಿಲುವ ಹೊಂದಿರೋ ಮಾಜಿ ಪ್ರಧಾನಿ ಜೆಡಿಎಸ್ (JDS) ವರಿಷ್ಠ ದೇವೇಗೌಡರ (HD Devegowda) ಒಪ್ಪಿಗೆಯೇ ಈಗ ಸವಾಲಾಗಿದೆ. ಮಗ ಒಪ್ಪಿದರೂ ಬಿಜೆಪಿ ಜೊತೆ ದೋಸ್ತಿಗೆ ಅಪ್ಪ ಒಪ್ತಾರಾ ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]