ಬೆಂಗಳೂರು: ಬಿಜೆಪಿ (BJP) ಅವರು ಈ ದೇಶದ ರಾಜಕೀಯ ವ್ಯವಸ್ಥೆಯನ್ನೇ ಹಾಳು ಮಾಡ್ತಿದ್ದಾರೆ ಅಂತ ಬಿಜೆಪಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯಿಂದ ಆಪರೇಷನ್ ಕಮಲ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಪರೇಷನ್ ಕಮಲ ಪ್ರಯತ್ನ ಕೇವಲ ರಾಜ್ಯದಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲಿ ಮಾಡುತ್ತಿದ್ದಾರೆ. ಅವರ ಉದ್ದೇಶ ವಾಮಮಾರ್ಗದಲ್ಲೋ, ನ್ಯಾಯುಯುತವಾಗಿಯೋ ಹೇಗಾದ್ರು ಮಾಡಿ ಸರ್ಕಾರದಲ್ಲಿ ಇರಬೇಕು ಅಂತ ಅವರ ಉದ್ದೇಶ. ಬಿಜೆಪಿ ಅವರು ಈ ದೇಶದ ರಾಜಕೀಯ ವ್ಯವಸ್ಥೆ ನಾಶ ಮಾಡ್ತಿದ್ದಾರೆ ಅಂತ ಕಿಡಿಕಾರಿದರು.
Advertisement
Advertisement
ಜನ ಅವರನ್ನ ತಿರಸ್ಕಾರ ಮಾಡಿ ಸೋಲಿಸಿ ಮನೆಗೆ ಕಳಿಸಿದ್ದಾರೆ. ಅವರು ಜವಾಬ್ದಾರಿಯುತ ವಿಪಕ್ಷವಾಗಿ ಕೆಲಸ ಮಾಡಬೇಕು. ವಿರೋಧ ಪಕ್ಷದ ನಾಯಕನನ್ನೇ ಅವರು ಆಯ್ಕೆ ಮಾಡಿಕೊಳ್ಳೊದೆ ಬೇಜಾವಾಬ್ದಾರಿಯಾಗಿ ನಡೆದುಕೊಳ್ತಿದ್ದಾರೆ. ಬಿಜೆಪಿ ಅವರು ವಿರೋಧ ಪಕ್ಷಕ್ಕೆ ಕಳಂಕ. ಇದು ನಾಚಿಕೆಗೇಡಿನ ಸಂಗತಿ. ವಿರೋಧಿ ಪಕ್ಷ ನಾಯಕ ಇಲ್ಲ. ಮೇಲ್ಮನೆ ನಾಯಕ ಇಲ್ಲ. 4 ವರ್ಷ ಸರ್ಕಾರ ಮಾಡಿದ್ರು ಜನ ಅವರನ್ನ ಹೀನಾಯವಾಗಿ ಸೋಲಿಸಿದ್ದಾರೆ. ಇದನ್ನ ಅರಿತುಕೊಂಡು ಈಗಲಾದ್ರು ಸರಿಯಾಗಿ ಕೆಲಸ ಮಾಡೋದು ಬಿಟ್ಟು ಆಪರೇಷನ್ ಕಮಲಕ್ಕೆ (Operation Kamala) ಹೈ ಹಾಕಿದ್ದಾರೆ. ಇಂತಹ ಕೆಳಮಟ್ಟಕ್ಕೆ ಇಳಿದಿದೆ ಅನ್ನೋದಕ್ಕೆ ಇದಕ್ಕಿಂತ ಉದಾಹರಣೆ ಇಲ್ಲ ವಾಗ್ದಾಳಿ ನಡೆಸಿದರು.
Advertisement
Advertisement
ಜನ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ. ಅವರು ಏನೇ ಪ್ರಯತ್ನ ಮಾಡಲಿ. ಅವರ ಬಳಿ ಬೇಕಾದಷ್ಟು ಹಣ ಇದೆ. ಎಷ್ಟು ಕೋಟಿ ಬೇಕಾದ್ರು ಅವರಿಗೆ ಕೊಡೋಕೆ ಹಣ ಇದೆ. 100 ಕೋಟಿ, 1000 ಕೋಟಿ ಬೇಕಾದ್ರು ಖರ್ಚು ಮಾಡ್ತಾರೆ. ದುಡ್ಡಿನ ಅಹಂ, ಅಧಿಕಾರದ ಅಹಂ ಇದೆ. ಕೇಂದ್ರ ಸರ್ಕಾರ ಐಟಿ, ಇಡಿ, ಸಿಬಿಐ ನಮ್ಮ ಜೇಬಿನಲ್ಲಿ ಇದೆ. ಎಲ್ಲರನ್ನು ಏನ್ ಬೇಕಾದ್ರು ಮಾಡಬಹುದು ಅಂತ ತಿಳಿದುಕೊಂಡಿದ್ದಾರೆ.ಪಂಚರಾಜ್ಯ ಚುನಾವಣೆ ಆಗಲಿ. ಆಗ ಇನ್ನು ಹೆಚ್ಚು ಮಾತಾಡೋಣ. ಜನ ಬಿಜೆಪಿ, ಮೋದಿ ಆಡಳಿತ ನೋಡಿ ಆಯ್ತು. ಜನರ ಬದುಕಲ್ಲಿ ಏನು ಬದಲಾವಣೆ ಆಗಿದೆ ಅಂತ ಜನರಿಗೆ ಗೊತ್ತಾಗಿದೆ. ಜನರೇ ಸರಿಯಾದ ಪಾಠ ಅಂತ ಕಿಡಿಕಾರಿದರು.
ಬಿಜೆಪಿ ನಾಯಕರ ಜೊತೆ ಕಾಂಗ್ರೆಸ್ (Congress) ಶಾಸಕರ ಮಾತುಕತೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರ ಜೊತೆ ಮಾತಾಡಬಾರದು ಅಂತ ಎಲ್ಲೂ ಇಲ್ಲ.ಅವರು ನಮ್ಮ ವಿರೋಧಿಗಳು ಅಲ್ಲ. ವೈರಿಗಳು ಅಲ್ಲ. ಅವರು ವಿರೋಧ ಪಕ್ಷದವರು ಮಾತ್ರ. ಬೇರೆ ಪಕ್ಷದಲ್ಲೂ ಅನೇಕ ಸ್ನೇಹಿತರು ಇರ್ತಾರೆ. ಅವರ ಜೊತೆ ಮಾತಾಡಬಾರದು ಅಂದರೆ ಹೇಗೆ. ಬೇರೆ ಪಕ್ಷದವರ ಜೊತೆ ಮಾತಾಡೋದು ತಪ್ಪಲ್ಲ. ಮನೆಗೆ ಹೋಗಿ ಮೀಟ್ ಮಾಡೋದು ತಪ್ಪಲ್ಲ. ಯಾವ ಶಾಸಕರು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ. ಆದರೆ ಅವರು ಕರೆದು ಹೀಗೆ ಆಪರೇಷನ್ ಮಾಡೋದು ತಪ್ಪು. ಸರ್ಕಾರ ಬೀಳಿಸುವ ಪ್ರಯತ್ನ ಮಾಡೋದು,ಹಣ ಕೊಡ್ತೀವಿ ಅನ್ನೋದು. ಇದೆಲ್ಲವೂ ಖಂಡನೀಯ ವಿಚಾರ ಎಂದರು.
Web Stories