Connect with us

Districts

ಕುಮಾರ್ ಬಂಗಾರಪ್ಪ ಮೀಟರ್, ಮೋಟ್ರು ಎಲ್ಲಾ ನೋಡಿದ್ದೀವಿ: ಡಿಕೆಶಿ

Published

on

ಶಿವಮೊಗ್ಗ: ಕುಮಾರ್ ಬಂಗಾರಪ್ಪ ಅವರ ಮೀಟರ್ ಮತ್ತು ಮೋಟ್ರು ಎಲ್ಲಾ ನೋಡಿದ್ದೀವಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೇಲೆ ಮೀಟೂ ಆರೋಪ ಮಾಡಿದ್ದ ಕುಮಾರ್ ಬಂಗಾರಪ್ಪಗೆ ಜನಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಟಾಂಗ್ ಕೊಟ್ಟಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ ಅವರು, ಕುಮಾರಸ್ವಾಮಿ ಅಥವಾ ಇನ್ನೊಬ್ಬರು ಯಾರೇ ಆಗಲಿ, ಅವರ ವೈಯಕ್ತಿಕ ವಿಚಾರವನ್ನು ಮಾತನಾಡಿಕೊಂಡು ಕೂರಬಾರದು. ಕುಮಾರ್ ಬಂಗಾಪ್ಪ ಅವರನ್ನು ಮುಂದೆ ಬಿಟ್ಟು ಕೆಲವರು ಈ ಪ್ರಯತ್ನ ಮಾಡುತ್ತಿದ್ದಾರೆ. ಅದು ನಮಗೆ ಅರ್ಥವಾಗುತ್ತದೆ. ನಾವು ಕುಮಾರ್ ಬಂಗಾರಪ್ಪ ಅವರನ್ನು ಹತ್ತಿರದಿಂದ ನೋಡಿದ್ದೇವೆ. ಅವರಿಗಿರುವ ಮೀಟರ್ ಮೋಟ್ರು ಎಲ್ಲವನ್ನು ನಾವು ಗಮನಿಸಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ಪರ್ಸನಲ್ ವಿಚಾರ ನಿಮಗ್ಯಾಕ್ರಿ – ಕುಮಾರ್ ಬಂಗಾರಪ್ಪ ಮೀಟೂ ಆರೋಪಕ್ಕೆ ಸಿಎಂ ಕಿಡಿ

ಚುನಾವಣೆಯಲ್ಲಿ ಏನಾದರೂ ಸಾಧನೆ ಮಾಡಿ ವೋಟು ಕೇಳಪ್ಪ. ಇಲ್ಲವಾದರೆ ಪೆಟ್ರೋಲ್, ಡೀಸೆಲ್, ಗೊಬ್ಬರದ ಬೆಲೆ ಕಡಿಮೆ ಮಾಡಿ ವೋಟು ಕೇಳು. ಆದರೆ ಈ ಮೀಟೂ ವೀಟೂ ಆಗುತ್ತದೆ. ಇದರ ಬಗ್ಗೆ ಅವರಿಗೆ ಇನ್ನು ಗೊತ್ತಿಲ್ಲ ಎಂದು ಡಿಕೆಶಿ ವ್ಯಂಗ್ಯವಾಡಿದರು.

ಮಂಗಳವಾರ ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಪ, ಸುಳ್ಳಿಗೆ ಯಾವತ್ತೂ ಸಾಕ್ಷಿಗಳಿರುವುದಿಲ್ಲ. ಇದೇ ತರದ ಮಾತುಗಳನ್ನು ಆಡಿದ್ರೆ ನಿಮ್ಮ ವೈಯಕ್ತಿಕ ವಿಚಾರಗಳನ್ನು ನೀವು ಅನೇಕ ಕಡೆ ಸಾಕ್ಷಿ ಸಮೇತ ಮಾತನಾಡಿದ್ದೀರೋ, ಎಲ್ಲಾದರೂ ನೀವು ಹೆಚ್ಚು ಕಮ್ಮಿ ಮಾತನಾಡಿದ್ದರೆ ಮೀಟೂ ನಲ್ಲಿ ನೀವು ಪ್ರಸ್ತಾಪ ಆಗುತ್ತೀರಾ. ಮೀಟೂ ನಲ್ಲಿ ನೀವು ನೇರವಾಗಿ ಬಂದು ಸಿಕ್ಕಿ ಹಾಕಿಕೊಳ್ಳುತ್ತೀರಿ ಅಂತಹ ಕೆಲಸಗಳನ್ನು ನೀವು ಮಾಡಿದ್ದೀರಾ ಅಂತ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *