ಮಂಡ್ಯ: ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ (Governor) ದೂರು ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ (Chaluvarayaswamy) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಕೃಷಿ ಅಧಿಕಾರಿಗಳ ಹೆಸರಿನಲ್ಲಿ ದೂರು ಕೊಟ್ಟಿರುವವರು ನಮ್ಮ ಇಲಾಖೆಯಲ್ಲಿಯೇ ಇಲ್ಲ. ಅದರಲ್ಲಿರುವ ಯಾರ ವಿಳಾಸವೂ ಅಸಲಿ ಅಲ್ಲ. ಅವರ ನಂಬರ್ ಗಳು ಕೂಡಾ ಸಿಕ್ಕಿಲ್ಲ ಎಂದರು. ಇದನ್ನೂ ಓದಿ: ಮಂತ್ರಿಗಳ ಮಾನಗೇಡಿ ಕೃತ್ಯಗಳನ್ನೂ ಸಮರ್ಥಿಸಿಕೊಳ್ಳೋ ಲಜ್ಜೆಗೇಡಿ ಸಿಎಂ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ: ಹೆಚ್‍ಡಿಕೆ
Advertisement
Advertisement
ಗವರ್ನರ್ ಕಚೇರಿಗೆ ಪತ್ರ ತಲುಪಿದ್ದು ಹೇಗೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. 7 ಸಹಿಗಳು ಒಂದೇ ರೀತಿಯಲ್ಲಿ ಇದೆ. ಕುಮಾರಸ್ವಾಮಿ ಅವರು ನಾನೇ ಪತ್ರ ಮಾಡಿದ್ದು, ಪತ್ರಕ್ಕೆ ನಾನೇ ಸಹಿ ಮಾಡಿದ್ದು ಅಂತ ಹೇಳಲಿ. ಆಗ ಅದು ಅಸಲಿ ಅಂತ ಒಪ್ಪಬಹುದು. ಇದು ಫೇಕ್ ಅಲ್ಲದೇ ಮತ್ತೇನೂ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾನು ಯಾರಿಗೂ ಪ್ರಮಾಣ ಮಾಡ್ಬೇಕಾದ ಅವಶ್ಯಕತೆ ಇಲ್ಲ, ಕೆಲಸ ಮಾಡಿದ್ರೆ ಹಣ ಬಿಡುಗಡೆ ಆಗುತ್ತೆ, ಇಲ್ಲ ಅಂದ್ರೆ ಹಣ ಇಲ್ಲ: ಡಿಕೆಶಿ
Advertisement
ಮಾಜಿ ಸಿಎಂ ಆಗಿರುವ ಕುಮಾರಸ್ವಾಮಿಗೆ ಜ್ಞಾನ ಇರಬೇಕು, ತಿಳುವಳಿಕೆ ಇರಬೇಕು. ಅವರು ಒಕ್ಕಲಿಗರನ್ನ ಸಹಿಸಲ್ವೋ, ಇನ್ನೊಬ್ಬರನ್ನ ಸಹಿಸಲ್ವೋ ಅದು ಅವರಿಗೆ ಬಿಟ್ಟಿದ್ದು. ಅವರು ಮಂಡ್ಯ ಜಿಲ್ಲೆಯನ್ನ ಏನಾದ್ರೂ ದತ್ತು ತೆಗೆದುಕೊಂಡಿದ್ದಾರಾ ಎಂದು ಚೆಲುವರಾಯಸ್ವಾಮಿ ಪ್ರಶ್ನಿಸಿದರು.
Advertisement
ಕುಮಾರಸ್ವಾಮಿಗೆ ಮಂಡ್ಯದಲ್ಲಿ ಬೇರೆ ಯಾರೂ ರಾಜಕಾರಣ ಮಾಡಬಾರದು. ಮಂಡ್ಯ ಅಭಿವೃದ್ಧಿ ಆಗಬಾರದು ಅಂತ ಅವರ ಅಭಿಲಾಷೆ. ಅವರ ಬೆದರಿಕೆಗಳಿಗೆ ಯಾರೂ ಹೆದರೋದಿಲ್ಲ. ಈ ಸರ್ಕಾರವನ್ನಾ ನಾನು ಏನೋ ಮಾಡ್ತೀನಿ ಅನ್ಕೊಂಡಿದ್ದಾರೆ. ಅವರು ಸಿಎಂ ಆಗಿದ್ದಾಗ ಏನೇನು ಮಾಡಿದ್ರು ಅಂತ ಎಲ್ಲಾ ನೋಡಿದ್ದಾರೆ ಎಂದು ತಿಳಿಸಿದರು.
ಹೆಚ್‍ಡಿಕೆಗಿಂತ 100ಪಟ್ಟು ಬಹಳ ಗೌರವಯುತವಾಗಿ ಸರ್ಕಾರ ಮಾಡ್ತೀವಿ. ಕುಮಾರಸ್ವಾಮಿಗೆ ಹಳೇ ಮೈಸೂರು ಭಾಗದಲ್ಲಿ ಶಕ್ತಿ ಕುಂದುತ್ತೆ ಅನ್ನೋ ಭಯ ಇದೆ. ಅದಕ್ಕಾಗಿ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಗರಂ ಆದರು.
Web Stories