ಗದಗ: ಸ್ವಂತ ನೀರು ತಂದು ಸ್ನಾನ (ಜಳಕ) ಮಾಡಬೇಕೇ ಹೊರತು ಬೇರೆಯವರು ಸ್ನಾನ ಮಾಡುವಾಗ ಅವರ ಕೆಳಗೆ ಕೂತು ಮಾಡಬಾರದು ಎಂದು ಸಚಿವ ಸಿ.ಸಿ.ಪಾಟೀಲ್ (CC Patil ) ಕಾಂಗ್ರೆಸ್, ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದಾರೆ.
ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ಎಸ್ಸಿ-ಎಸ್ಟಿ ಮೀಸಲಾತಿ (SCST Reservation) ಸಮಾವೇಶ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ `ಮೋದಿ-ಮೋದಿ’, `AAP ನಾಯಕರು ಚೋರ್-ಚೋರ್’ ಘೋಷಣೆ
Advertisement
Advertisement
ಎಸ್ಸಿ-ಎಸ್ಟಿ ಮೀಸಲಾತಿ ಮಾಡಿದ್ದು ಬಿಜೆಪಿ (BJP), ಮೀಸಲಾತಿ ಮಾಡಿದ್ದು ಬಿಎಸ್‌ವೈ (BS Yediyurappa), ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai). ಅದಕ್ಕೆ ಬೆನ್ನೆಲುಬಾಗಿ ನಿಂತಿದ್ದು ಶ್ರೀರಾಮುಲು ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರು. ಆದರೀಗ ಮೀಸಲಾತಿ ಕೀರ್ತಿಗಾಗಿ ಕಾಂಗ್ರೆಸ್ (Congress), ಜೆಡಿಎಸ್ (JDS) ಗುದ್ದಾಡುತ್ತಿವೆ. ಕೀರ್ತಿ ಬೇಕಾದ್ರೆ ನಿಮ್ಮ ಸರ್ಕಾರ ಇದ್ದಾಗ ನೀವ್ಯಾಕೆ ಆ ನಿರ್ಧಾರ ತೆಗೆದುಕೊಳ್ಳಲಿಲ್ಲ? ನಾವು ನಿರ್ಧಾರ ತೆಗೆದುಕೊಂಡಾಗ ಅದರ ಲಾಭ ಪಡಿಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Advertisement
Advertisement
ಎಸ್ಸಿ-ಎಸ್ಟಿ ಸಮುದಾಯದ ಜನ ಮುಗ್ಧರೇ ಇರಬಹುದು. ಆದ್ರೆ ಹುಚ್ಚರು, ಬುದ್ಧಿಗೇಡಿಗಳಲ್ಲ ಎಂಬುದು ಜ್ಞಾಪಕವಿರಲಿ. ಹಿಂದುಳಿದ ಜನರನ್ನು ತಮ್ಮ ಮತ ಬ್ಯಾಂಕ್ ಮಾಡಿಕೊಂಡು ಆಸೆ ಆಮಿಷ ತೋರಿಸುತ್ತಾ ಚುನಾವಣೆಯಲ್ಲಿ ಮತ ಹಾಕಿಸಿಕೊಂಡರು. ಆ ಸಮುದಾಯಕ್ಕೆ ಯಾವೊಂದು ಕೆಲಸವನ್ನೂ ಮಾಡಿಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೋದಿ ಹೆಬ್ಬುಲಿ, ಅಮಿತ್ ಶಾ ಹುಲಿ, ಇವರೊಂದಿಗೆ ಹೆಜ್ಜೆ ಹಾಕೋ ಮತ್ತೊಂದು ಹುಲಿ ಪ್ರಹ್ಲಾದ್ ಜೋಶಿ: ಜಗ್ಗೇಶ್
ಪೂರ್ವಭಾವಿ ಸಭೆಯಲ್ಲಿ ಸಚಿವ ಬಿ.ಶ್ರೀರಾಮುಲು, ಶಾಸಕ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ ಸೇರಿದಂತೆ ಬಿಜೆಪಿ ಮುಖಂಡ ರಾಜು ಕುರುಡಗಿ, ಎಮ್.ಎಸ್ ಕರಿಗೌಡ್ರ, ನಗರಸಭೆ ಅಧ್ಯಕ್ಷೆ ಉಷಾ ದಾಸರ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.