ಬೆಂಗಳೂರು: ಜಗಜ್ಯೋತಿ ಬಸವೇಶ್ವರರ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳನ್ನು ವಿಧಾನಸೌಧದ ಎದುರು ಪ್ರತಿಷ್ಠಾಪಿಸುವ ಸಂಬಂಧ ಸ್ಥಳ ಪರಿಶೀಲನೆ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆಯಂತೆ ಕಂದಾಯ ಸಚಿವ ಆರ್. ಅಶೋಕ್ (R Ashok) ಮತ್ತು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ (CC Patil) ಅವರು ಶನಿವಾರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀಲನಕ್ಷೆ ಪರಿಶೀಲಿಸಿ, ಸ್ಥಳಕ್ಕೆ ಜಂಟಿಯಾಗಿ ಭೇಟಿ ನೀಡಿ ತಪಾಸಣೆ ನಡೆಸಿದರು.
ಬಸವಣ್ಣನವರ ಮತ್ತು ಕೆಂಪೇಗೌಡರ ಪ್ರತಿಮೆಗಳ ಮಾದರಿಯನ್ನು ಸಿದ್ಧಪಡಿಸಿ ವಿಧಾನಸೌಧದ (Vidhan Soudha) ಮುಂಭಾಗದಲ್ಲಿ ಸೂಕ್ತ ಸ್ಥಳ ನಿಗದಿಪಡಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿತ್ತು. ಅದರಂತೆ ಅವರು ಇಂದು ಸಿದ್ಧಪಡಿಸಿಕೊಂಡು ತಂದಿರುವ ನೀಲನಕ್ಷೆ ಮತ್ತು ಪ್ರತಿಮೆಗಳ ಮಾದರಿಗಳನ್ನು ಉಭಯ ಸಚಿವರೂ ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
Advertisement
Advertisement
ಈ ಪ್ರತಿಮೆಗಳನ್ನು ಆದಷ್ಟು ಶೀಘ್ರವೇ ನಿರ್ಮಿಸಿ, ವಿಧಾನಸೌಧದ ಮುಂಭಾಗ ಈ ತಿಂಗಳಿನಲ್ಲಿಯೇ ಶಂಕುಸ್ಥಾಪನೆ ನೆರವೇರಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಉಭಯ ಸಚಿವರು ಸೂಚಿಸಿದರು.
Advertisement
Advertisement
ತಲಾ 4 ಮೀ. ಎತ್ತರದ ಈ ಎರಡು ಪ್ರತಿಮೆಗಳನ್ನು ಅಶ್ವಾರೂಢ ಭಂಗಿಗಳಲ್ಲಿ ಸ್ಥಾಪಿಸಬೇಕು ಮತ್ತು ಸುತ್ತಮುತ್ತ ಹಸಿರು ಸೂಸುವ ಪರಿಸರವನ್ನು ಕಾಪಾಡಿಕೊಳ್ಳಬೇಕೆಂದು ಸಚಿವ ಅಶೋಕ್ ತಿಳಿಸಿದರು. ಇದನ್ನೂ ಓದಿ: ಗಣರಾಜೋತ್ಸವ ಪರೇಡ್‍ನಲ್ಲಿ ರಾಜ್ಯದ ಸ್ತಬ್ಧ ಚಿತ್ರಕ್ಕೆ ಅವಕಾಶ ಸಿಗುತ್ತೆ: ಸಿಎಂ
ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಡಾ. ಕೃಷ್ಣಾರೆಡ್ಡಿ ಮತ್ತಿತರ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆಯಲ್ಲಿದ್ದರು. ಇದನ್ನೂ ಓದಿ: ಸ್ತಬ್ಧ ಚಿತ್ರಕ್ಕೆ ಅವಕಾಶ ಕೊಡದಿದ್ರೆ ಕೇಂದ್ರ ಸಚಿವರಿಗೆ ಘೇರಾವ್ ಹಾಕ್ತೇವೆ: ಡಿಕೆ ಸುರೇಶ್ ಎಚ್ಚರಿಕೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k