ಯಾದಗಿರಿ: ಹಿಂದುತ್ವದ ಹೆಸರು ಹೇಳಿಕೊಂಡು ಸರ್ಕಾರ ಅಧಿಕಾರಕ್ಕೆ ಬಂದಿದೆ ಅಂತಲ್ಲ, ಈ ದೇಶದ ಸಂಸ್ಕೃತಿ ಉಳಿಸುವ ಸರ್ಕಾರ ನಮ್ಮದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
Advertisement
ನಗರದ ಸ್ವಪ್ನ ಕಾಲೇಜು ಮೈದಾನದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಹಿಂದೂ ದೇವಸ್ಥಾನಗಳ ತೆರವು ವಿಚಾರವಾಗಿ ಮಾತನಾಡಿದರು. ಇದು ಸುಪ್ರೀಂ ಕೋರ್ಟ್ ನ ಆದೇಶವಾಗಿದೆ. ಮೈಸೂರುನಲ್ಲಿ ದೇವಾಲಯ ತೆರವು ಮಾಡಿದ ಘಟನೆ ನಂತರ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಧ್ಯ ಪ್ರವೇಶಿಸಿ, ತೆರವುಗೊಳಿಸಬಾರದೆಂದು ಸೂಚನೆ ಕೊಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಗೈಡ್ ಲೈನ್ಸ್ ಆಧಾರದ ಮೇಲೆ ಜಿಲ್ಲಾಧಿಕಾರಿ ದೇವಸ್ಥಾನ ತೆರವುಗೊಳಿಸಿದ್ದಾರೆ. ಮೈಸೂರು ಹೊರತು ಮತ್ತೆ ಎಲ್ಲಿಯೂ ದೇವಸ್ಥಾನ ತೆರವು ನಡೆದಿಲ್ಲ ಎಂದರು. ಇದನ್ನೂ ಓದಿ: ಮಾಸ್ಕ್ ಹಾಕದ ವಿದ್ಯಾರ್ಥಿಗಳ ಮೇಲೆ ಸಚಿವ ನಾಗೇಶ್ ಗರಂ
Advertisement
Advertisement
ಯಾದಗಿರಿಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೂನ್ಯ ಸ್ಥಾನದಲ್ಲಿದೆ, ವೈರಲ್ ಫೀವರ್ ಮಕ್ಕಳಿಗೆ ಜಾಸ್ತಿ ಆಗಿರಬಹುದು. ಮಳೆಗಾಲದ ವಾತಾವರಣದ ಬದಲಾವಣೆಯಿಂದ ಮಕ್ಕಳಿಗೆ ಜ್ವರ ಕಾಣಿಸಿಕೊಳ್ಳುತ್ತಿದೆ. ಡೆಂಘೀ ಜ್ವರ ಹಾಗೂ ಚಿಕನ್ ಗುನ್ಯಾ ಹೊಸದೇನಲ್ಲ, ಅದಕ್ಕೆ ಚಿಕಿತ್ಸೆ ಇದೆ, ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಕೆಲಸ ಆಗಿದೆ ಎಂದರು.