ಯಾದಗಿರಿ: ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಆಗಮಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಸ್ಕ್ ಹಾಕದ ವಿದ್ಯಾರ್ಥಿಗಳ ಮೇಲೆ ಗರಂ ಆಗಿ ಬಳಿಕ, ಕಾಲೇಜ್ ವಿದ್ಯಾರ್ಥಿಗಳಿಗೆ ಮಾಸ್ಕ್ ಬಗ್ಗೆ ಪಾಠ ಮಾಡಿದ್ದಾರೆ.
Advertisement
ಧ್ವಜಾರೋಹಣಕ್ಕೆ ಯಾದಗಿರಿಗೆ ಆಗಮಿಸಿದ ನಾಗೇಶ್ ಅವರು ನಗರದ ಸ್ವಪ್ನಾ ಮೈದಾನದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಮಾಸ್ಕ್ ಧರಿಸದ ವಿದ್ಯಾರ್ಥಿಗಳನ್ನು ಕಂಡು ಗರಂ ಆಗಿದ್ದು, ಕೋಪದಿಂದ ಮಕ್ಕಳಿಗೆ ಮಾಸ್ಕ್ ಹಾಕೋಳಿ ಎಂದು ಗದರಿಸಿದ್ದಾರೆ. ಇದನ್ನೂ ಓದಿ: ರಾಹುಲ್‍ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು: ಡಿಸಿಪಿ ಅನುಚೇತ್
Advertisement
Advertisement
ವೇದಿಕೆಯಿಂದ ಇಳಿದು ಮಕ್ಕಳ ಬಳಿ ತೆರಳಿ ನಿಮಗೆ ಸ್ಕೂಲ್ ಆರಂಭ ಮಾಡಬೇಕಾ ಬೇಡ್ವಾ, ಮಾಸ್ಕ್ ಹಾಕಿಲ್ಲ ಎಂದರೆ ಸ್ಕೂಲ್ ಓಪನ್ ಮಾಡಲ್ಲ ಎಂದು ಮಕ್ಕಳಿಗೆ ಎಚ್ಚರಿಕೆ ನೀಡಿ ಮಾಸ್ಕ್ ಜಾಗೃತಿ ಮೂಡಿಸಿದ್ದಾರೆ. ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಕ್ಷೇತ್ರವಾರು ಶಾಸಕರ ಜೊತೆ ಸಭೆ ಮಾಡಿ ಲಸಿಕೆ ಅಭಿಯಾನ ಮಾಡ್ತೇವೆ: ಆರ್.ಅಶೋಕ್
Advertisement
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ನಾಳ್, ಜಿಲ್ಲಾಧಿಕಾರಿ, ಎಸ್‍ಪಿ ಉಪಸ್ಥಿತರಿದ್ದರು.