ರಾಮನಗರ: ನಿವೃತ್ತಿ ಅಂಚಿನಲ್ಲಿರೋ ಸಿದ್ದರಾಮಯ್ಯ ಹಾಗೂ ಯೋಗ್ಯತೆ ಬೆಳೆಸಿಕೊಳ್ಳದ ಡಿ.ಕೆ.ಶಿವಕುಮಾರ್ ಅವರನ್ನ ಸಿಎಂ ಮಾಡಿ ಜನ ಏನು ಮಾಡ್ಬೇಕು ಎಂದು ಸಚಿವ ಅಶ್ವಥ್ ನಾರಾಯಣ ಅವರು ಪ್ರಶ್ನಿಸಿದ್ದಾರೆ.
ತಾಯಿ ಚಾಮುಂಡೇಶ್ವರಿ ಮಹಾಮಸ್ತಕಾಭಿಷೇಕ ಹಿನ್ನೆಲೆ ಚನ್ನಪಟ್ಟಣದ ಗೌಡಗೆರೆ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅಪರೂಪದ ಬ್ಲ್ಯಾಕ್ ಟೈಗರ್ ಪತ್ತೆ – ವೀಡಿಯೋ ಕಂಡು ಬೆರಗಾದ ನೆಟ್ಟಿಗರು
Advertisement
Advertisement
ಡಿಕೆಶಿಗೆ ಒಂದು ಅವಕಾಶ ಕೊಡಿ ಎಂಬ ಮಾಜಿ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಸ್ಥಾನ ಪಡೆಯಲು ಬದ್ಧತೆ, ವಿಶ್ವಾಸ ಇರಬೇಕು. ಅದೇನು ಅಂಗಡಿಯಲ್ಲಿ ಖರೀದಿ ಮಾಡುವ ಸಾಮಾನು ಅಲ್ಲ. ಸಿಎಂ ಆಗಬೇಕೆಂದು ಬಯಸುವುದು ತಪ್ಪಲ್ಲ. ಆದರೆ ಅದಕ್ಕೆ ಯೋಗ್ಯತೆ, ಅರ್ಹತೆ ಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸರ್ಕಾರಿ ವಸತಿ ಶಾಲೆಯಲ್ಲಿ ‘ವಿಕ್ರಾಂತ್ ರೋಣ ‘ ಪೈರಸಿ ಸಿನಿಮಾ ವೀಕ್ಷಣೆ : ಕ್ರಮಕ್ಕೆ ಒತ್ತಾಯ
Advertisement
Advertisement
ರಿಟೈರ್‌ಮೆಂಟ್‌ನಲ್ಲಿರುವ ಸಿದ್ದರಾಮಯ್ಯ ಒಂದು ಕಡೆ, ಯೋಗ್ಯತೆ ಬೆಳೆಸಿಕೊಳ್ಳದ ಡಿ.ಕೆ.ಶಿವಕುಮಾರ್ ಒಂದು ಕಡೆ, ನಾಡಿನ ಜನ ಇವರನ್ನ ಸಿಎಂ ಮಾಡಿ ಏನ್ ಮಾಡ್ಬೇಕು. ಸಿಎಂ ಮಾಡಿದ್ರೆ ಅಬ್ಬೇಪಾರಿಯಾಗಿ ನೋಡ್ಬೇಕಾಗುತ್ತೆ. ಜನರ ಕಷ್ಟಕ್ಕೆ ಸ್ಪಂದಿಸುವವರು ಸಿಎಂ ಆಗಬೇಕು. ನಮ್ಮ ಜನರು ಕರ್ಮ ಮಾಡಿಲ್ಲ. ಪುಣ್ಯ ಮಾಡಿರುವ ನಾಡಿದು. ಸತ್ಯ, ನ್ಯಾಯ, ಧರ್ಮ ಸ್ಥಾಪನೆಯಾಗಬೇಕು. ಪಾಪಿಗಳು ನಿರ್ನಾಮ ಆಗಬೇಕು ಎಂದು ಅಶ್ವಥ್ ನಾರಾಯಣ ಅವರು ಕುಟುಕಿದ್ದಾರೆ.