ಕೊಪ್ಪಳ: ಮಾಜಿ ಸಚಿವ ಜನಾರ್ದನ ರೆಡ್ಡಿ(Janardhana Reddy) ಅವರು ಡಿ.25ರಂದು ಹೊಸ ಪಕ್ಷ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಸುಳಿವು ನೀಡಿರುವ ಅವರು, ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮುಂದಿನ ವಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಡಿ.25ರಂದು ಬೆಂಗಳೂರಿನಲ್ಲಿ(Bengaluru) ಜನಾರ್ದನ ರೆಡ್ಡಿ ಸುದ್ದಿಗೋಷ್ಠಿ ಕರೆದಿದ್ದಾರೆ. ಒಂದು ವಾರದ ವಿಶ್ರಾಂತಿ ಬಳಿಕ ಮತ್ತೆ ಓಡಾಟ ಶುರು ಮಾಡಿರುವ ರೆಡ್ಡಿ, ತಮ್ಮ ಪ್ರವಾಸದ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
Advertisement
ಡಿ.18 ರಂದು ಗಂಗಾವತಿಯಲ್ಲಿ ಸುದ್ದಿಗೋಷ್ಠಿ ಕರೆಯುವುದಾಗಿ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ತಿಳಿಸಿದ್ದು, ತೀವ್ರ ಕುತೂಹಲ ಕೆರಳಿಸಿತ್ತು. ಆದರೆ ಇದೀಗ ಸ್ವತಃ ಜನಾರ್ದನ ರೆಡ್ಡಿ ಅವರು ಡಿ.25ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದು, ಬಾರೀ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಒಂದೇ ಏಟಿಗೆ ಎರಡು ಹಕ್ಕಿ – ಬಿಜೆಪಿ `ಸಾವರ್ಕರ್’ ಅಸ್ತ್ರ ಸೀಕ್ರೆಟ್ ಏನು?
Advertisement
ತಮ್ಮ 1 ವಾರದ ಪ್ರವಾಸದ ಭಾಗವಾಗಿ ನಾಳೆಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಗಾಲಿ ಜನಾರ್ದನ ರೆಡ್ಡಿ ಸಂಚರಿಸಲಿದ್ದಾರೆ. ಪಕ್ಷ ಘೋಷಣೆಗೂ ಮುನ್ನ ರೆಡ್ಡಿ ರಾಜ್ಯದ ಮಠ-ಮಂದಿರಗಳಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
Advertisement
Advertisement
ಡಿ.19ರಂದು ತುಮಕೂರಿನ ಸಿದ್ದಗಂಗಾ ಮಠ ಮತ್ತು ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ, ಡಿ.20ಕ್ಕೆ ಗದಗಿನ ಪುಟ್ಟರಾಜ ಗವಾಯಿಗಳು ಮತ್ತು ತೋಂಟದಾರ್ಯ ಶ್ರೀಗಳ ಗದ್ದುಗೆ ದರ್ಶನ, ಡಿ.21ಕ್ಕೆ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಭಾಗದ ಮುಖಂಡರನ್ನು ಭೇಟಿ ಮಾಡಲಿರುವ ರೆಡ್ಡಿ ಚರ್ಚೆ ನಡೆಸಲಿದ್ದಾರೆ. ಡಿ.22ರಂದು ಗಂಗಾವತಿಯ ದುರ್ಗಾದೇವಿ ಜಾತ್ರೆಯಲ್ಲಿ ರೆಡ್ಡಿ ಭಾಗಿಯಾಗಲಿದ್ದಾರೆ.
ಕೊನೆಗೆ ಡಿ.25ರಂದು ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಲಿರುವ ರೆಡ್ಡಿ ತಮ್ಮ ರಾಜಕೀಯ ಪಕ್ಷದ ಹೆಸರು ಪ್ರಕಟ ಮಾಡಲಿದ್ದಾರೆಂದು ತಿಳಿದು ಬಂದಿದೆ.