ಬೆಂಗಳೂರು: ರಾಜ್ಯ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿಯಿದ್ದು, ಈ ಬಾರಿ ಬಿಜೆಪಿಗೆ(Karnataka BJP) ಹಿಂದೂ ಅಸ್ತ್ರದ ಜೊತೆಗೆ ಸಾವರ್ಕರ್(Savarkar) ಕೂಡ ಒಂದು ಅಜೆಂಡಾ ಆಗುವ ಸಾಧ್ಯತೆ ಇದೆ.
ಸೋಮವಾರದಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ(Belagavi Winter Session) ನಡೆಯಲಿದ್ದು, ಮತ್ತೆ ಸಾವರ್ಕರ್ ಸಮರ ಜೋರಾಗುವಂತಿದೆ. ವಿಧಾನಸಭೆಯಲ್ಲಿ ಗಾಂಧೀಜಿ, ನೆಹರೂ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಜೊತೆಗೆ ಸಾವರ್ಕರ್ ಫೋಟೋ ಅನಾವರಣ ಮಾಡಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ.
Advertisement
Advertisement
ಈಗಾಗಲೇ ವಿಧಾನಸಭೆಯ ಸಿಬ್ಬಂದಿ ಎಲ್ಲಾ ಫೋಟೋಗಳಿಗೆ ಕರ್ಟನ್ ಹಾಕಿ ಮುಚ್ಚಿದ್ದಾರೆ. ಬೆಳಗ್ಗೆ 10:30ಕ್ಕೆ ಸ್ಪೀಕರ್ ಕಾಗೇರಿ ನೇತೃತ್ವದಲ್ಲಿ ಅಧಿವೇಶನ ಆರಂಭಕ್ಕೂ ಮುನ್ನವೇ ಸಾವರ್ಕರ್ ಫೋಟೋ ಅನಾವರಣವಾಗಲಿದೆ.
Advertisement
ಈ ಬಗ್ಗೆ ಸ್ಪೀಕರ್ ಕಾಗೇರಿ ಪ್ರತಿಕ್ರಿಯಿಸಿ, ಕಾರಣಾಂತರಗಳಿಂದ ಫೋಟೋ ಅನಾವರಣ ವಿಳಂಬವಾಗಿದೆ. ಯಾರ ಭಾವಚಿತ್ರ ಎನ್ನುವುದು ನಾಳೆ ಬನ್ನಿ ನೋಡ್ತೀರಾ ಅಂತ ಕುತೂಹಲ ಉಳಿಸಿದ್ದಾರೆ. ಇದನ್ನೂ ಓದಿ: ಸಾವರ್ಕರ್ ಗಾಂಧೀಜಿ ಮರ್ಡರ್ ಕೇಸಲ್ಲಿ ಇರೋ ವ್ಯಕ್ತಿ – ಸದನದಲ್ಲಿ ಅವರ ಫೋಟೋ ಅಗತ್ಯವಿಲ್ಲ: ಸಿದ್ದರಾಮಯ್ಯ
Advertisement
ಸಚಿವ ಸಿಸಿ ಪಾಟೀಲರು, ಸಾವರ್ಕರ್ ದೇಶಾಭಿಮಾನಿ ಅಂತ ಎದೆ ತಟ್ಟಿ ಹೇಳ್ತೀನಿ ಅಂದ್ರೆ ವಿರೋಧಿಸೋದು ಮುಟ್ಟಾಳತನ ಎಂದರೆ ವಿಪಕ್ಷದವರು ಸಹಕರಿಸಲಿ ಅಂತ ಎಂಎಲ್‍ಸಿ ರವಿಕುಮಾರ್ ಆಗ್ರಹಿಸಿದ್ದಾರೆ.
ಓಟರ್‌ಗೇಟ್-ಚಿಲುಮೆ ಹಗರಣ ಪ್ರಸ್ತಾಪಿಸಿ ಸಚಿವರ ರಾಜೀನಾಮೆಗೆ ಕಾಂಗ್ರೆಸ್(Congress) ಪ್ಲಾನ್ ಮಾಡಿತ್ತು. ಬೆಳಗಾವಿ ಗಡಿ ವಿಚಾರದಲ್ಲಿ ಸರ್ಕಾರ ವಿಫಲ ಅಂತ ಬಿಂಬಿಸಲು ಕಾಂಗ್ರೆಸ್ ಮುಂದಾಗಿತ್ತು. ಈಗ ಸಾವರ್ಕರ್ ಭಾವಚಿತ್ರ ಅಳವಡಿಕೆಯಿಂದ ಬಿಜೆಪಿ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ತಂತ್ರ ಮಾಡಿದೆ ಎನ್ನಲಾಗುತ್ತಿದೆ. ಸಾವರ್ಕರ್ ಫೋಟೋವನ್ನು ಕಾಂಗ್ರೆಸ್ ವಿರೋಧಿಸಲು ಬಂದರೆ ಡಿಕೆಶಿಯ `ಕುಕ್ಕರ್’ ಬಾಂಬ್ ಪ್ರಯೋಗ ಮಾಡಲು ಮುಂದಾಗಿದೆ. ಬೆಳಗಾವಿಯಲ್ಲೇ ಸಾವರ್ಕರ್ ಕಿಡಿ ಹೊತ್ತಿಸಿ ಹಿಂದುತ್ವ ಅಜೆಂಡಾ ಫಿಕ್ಸ್ ಪ್ಲಾನ್ ಮಾಡಿದ ಎಂಬ ವಿಶ್ಲೇಷಣೆ ಬಂದಿದೆ.