ಗ್ಯಾಂಗ್ಟಾಕ್: ಜನವರಿ 1ರಿಂದ ಸಿಕ್ಕಿಂನಲ್ಲಿ ಮಿನರಲ್ ವಾಟರ್ ಬಾಟಲಿಗಳನ್ನು ಬ್ಯಾನ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪಿ.ಎಸ್.ತಮಂಗ್ ಹೇಳಿದ್ದಾರೆ.
ಗಾಂಧಿ ಜಯಂತಿ ಅಂಗವಾಗಿ ಮಾತನಾಡಿದ ಅವರು, ಮಿನರಲ್ ವಾಟರ್ ಬಾಟಲ್ ಬ್ಯಾನ್ ಮಾಡಿದ ಬಳಿಕ ಜನತೆಗೆ ನೈಸರ್ಗಿಕ, ಶುದ್ಧ ಕುಡಿಯುವ ನೀರನ್ನು ನಿಡಲಾಗುವುದು. ಪ್ಲಾಸ್ಟಿಕ್ ಬಾಟಲ್‍ನಲ್ಲಿ ದೊರೆಯುವ ನೀರಿಗಿಂತ ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ. ಇದನ್ನೂ ಓದಿ: 200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ
ಸಿಕ್ಕಿಂನಲ್ಲಿ ಪ್ರತಿಯೊಬ್ಬರೂ ಮಿನರಲ್ ವಾಟರ್ ಬಾಟಲ್ ತೊರೆದು, ನೈಸರ್ಗಿಕವಾಗಿ ದೊರೆಯುವ ಶುದ್ಧ ನೀರನ್ನು ಕುಡಿಯಬೇಕು. ಅಲ್ಲದೆ ಈಗಿರುವ ನೀರಿನ ಬಾಟಲಿಗಳ ಸ್ಟಾಕ್ ಖಾಲಿ ಮಾಡಲು ಮೂರು ತಿಂಗಳ ಬಫರ್ ಟೈಮ್ ನೀಡಲಾಗಿದೆ. ಬಳಿಕ ಯಾವುದೇ ಮಿನರಲ್ ವಾಟರ್ ಬಾಟಲ್ ಮಾರಾಟ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಗಮನಿಸಬೇಕಾದ ಅಂಶವೆಂದರೆ ಪ್ರವಾಸಿ ತಾಣಗಳಾದ ಉತ್ತರ ಸಿಕ್ಕಿಂನ ಲಾಚೆನ್ ನಲ್ಲಿ ಈಗಾಗಲೇ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಬ್ಯಾನ್ ಮಾಡಲಾಗಿದೆ. ಸಿಕ್ಕಿಂ ಉತ್ತಮ ಜಲ ಸಂಪನ್ಮೂಲವನ್ನು ಹೋಂದಿದ್ದು, ಇವುಗಳನ್ನು ಪರಿಸರ ಸ್ನೇಹಿಯಾಗಿ ಜನರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.