ತೃಣಮೂಲ ಕಾಂಗ್ರೆಸ್ ಸಂಸದ ಸ್ಥಾನಕ್ಕೆ ಮಿಮಿ ಚಕ್ರವರ್ತಿ ರಾಜೀನಾಮೆ

Public TV
1 Min Read
mimi chakraborty

ಕೋಲ್ಕತ್ತಾ: ನಟಿ ಮತ್ತು ಸಂಸದೆ ಮಿಮಿ ಚಕ್ರವರ್ತಿ (Mimi Chakraborty) ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ರಾಜೀನಾಮೆಯನ್ನು ಇನ್ನೂ ಅಂಗೀಕರಿಸಲಾಗಿಲ್ಲ. ಪಕ್ಷದ ಸ್ಥಳೀಯ ನಾಯಕರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ರಾಜೀನಾಮೆ ನೀಡಿರುವುದಾಗಿ ಜಾದವ್‌ಪುರದ ಸಂಸದೆ ಹೇಳಿದ್ದಾರೆ. ಇದನ್ನೂ ಓದಿ: ದೂರು ಕೊಟ್ಟು ಶಿಕ್ಷಕಿ ತಪ್ಪು ಮುಚ್ಚಿ ಹಾಕಲು ಸಾಧ್ಯವಿಲ್ಲ: ಸಿ.ಟಿ.ರವಿ

Mamata Banerjee

ನಾನು ಜಾದವ್‌ಪುರ ಅಭಿವೃದ್ಧಿಗಾಗಿ ಕನಸು ಕಂಡಿದ್ದೆ. ಆದರೆ ನಾನು ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದೇನೆ. ಚಲನಚಿತ್ರದ ಹಿನ್ನೆಲೆಯಿಂದ ಬಂದವರು ಕೆಲಸ ಮಾಡುವುದಿಲ್ಲ ಎಂದು ಹೇಳುವುದು ತುಂಬಾ ಸುಲಭ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬಂಗಾಳದ ಜನಪ್ರಿಯ ಚಲನಚಿತ್ರ ತಾರೆಯಾದ ಮಿಮಿ ಚಕ್ರವರ್ತಿ, 2019 ರಲ್ಲಿ ಜಾದವ್‌ಪುರದಿಂದ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾದರು. ಅವರು ರಾಜಕೀಯ ಪ್ರಮುಖರಾದ ಬಿಜೆಪಿಯ ಅನುಪಮ್ ಹಜ್ರಾ ಮತ್ತು ಸಿಪಿಎಂನ ಬಿಕಾಶ್ ರಂಜನ್ ಭಟ್ಟಾಚಾರ್ಯರನ್ನು ಸೋಲಿಸಿದ್ದರು. ಇದನ್ನೂ ಓದಿ: ಜಮ್ಮು & ಕಾಶ್ಮೀರದಲ್ಲಿ ಏಕಾಂಗಿಯಾಗಿ ಸ್ಪರ್ಧೆ- NDA ಸೇರುವ ಸುಳಿವು ಕೊಟ್ರಾ ಫಾರೂಕ್ ಅಬ್ದುಲ್ಲಾ?

ಬಂಗಾಳದ ಮತ್ತೊಬ್ಬ ನಟ ಸಂಸದೆ ನುಸ್ರತ್ ಜಹಾನ್ ಅವರು ಸಂದೇಶಖಾಲಿಯಲ್ಲಿ ತೃಣಮೂಲ ನಾಯಕರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇದೇ ಹೊತ್ತಿನಲ್ಲಿ ಮಿಮಿ ಚಕ್ರವರ್ತಿ ಸ್ಥಳೀಯ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಮಸ್ಯೆಗಳ ಬಗ್ಗೆ ಗಮನ ಹರಿಸುವುದಾಗಿ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

Share This Article