ಬೆಳಗಾವಿ: ಹಾಲು ಕುಡಿದವರೇ ಬದಕಲ್ಲ, ಇನ್ನು ವಿಷ ಕುಡಿದವರು ಬದುಕ್ತಾರಾ? ಅನ್ನೋ ಗಾದೆ ಮಾತಿದೆ. ಬೆಳಗಾವಿ ಜಿಲ್ಲೆಯ ನಗರ ಪ್ರದೇಶದ ಜನ ಹಾಲಿನ ಹೆಸರಲ್ಲಿ ವಿಷವನ್ನೇ ಕುಡೀತಿದ್ದಾರೆ.
ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರೋ ಹಾಲಿಗೆ ರಾಸಾಯನಿಕ ಬೆರೆಸುತ್ತಿದ್ದು, ಬೆಳಗಾವಿಯ ಅಥಣಿ ಮತ್ತು ರಾಯಬಾಗ ತಾಲೂಕಿನ ಹಾಲಿನ ದಂಧೆಯ ಬಗ್ಗೆ ಜನರಿಗೆ ಆತಂಕ ಶುರುವಾಗಿದೆ. ಇದ್ರಿಂದ ಭಯಾನಕ ರೋಗಗಳ ಭೀತಿನೂ ಎದುರಾಗಿದೆ.
Advertisement
Advertisement
ರೈತರಿಂದ ಹಾಲು ಪಡೆಯೋ ಡೈರಿಯವರು, ಹಾಲಿನ ಫ್ಯಾಟ್ ಹಾಗೂ ಡಿಗ್ರಿ ಹೆಚ್ಚಳ ಮಾಡೋಕೆ ಇಂಥ ಅಕ್ರಮ ಹಾದಿ ಹಿಡಿದಿದ್ದಾರೆ. 50 ಲೀಟರ್ ಹಾಲಿಗೆ ಎಣ್ಣೆ, ಯೂರಿಯಾ ಸೇರಿದಂತೆ ವಿಷಪೂರಿತ ಕೆಮಿಕಲ್ ಮಿಕ್ಸ್ ಮಾಡಿ ಅದನ್ನ 100 ಲೀಟರ್‍ಗೆ ಹೆಚ್ಚಿಸ್ತಾರೆ. ಬಳಿಕ ಗ್ರಾಹಕರಿಗೆ ಹಾಲನ್ನ ಮಾರಾಟ ಮಾಡ್ತಿದ್ದಾರೆ. ಈ ಹಾಲಾಹಲದ ದಂಧೆ ಹಿಂದೆ ಭ್ರಷ್ಟ ಅಧಿಕಾರಿಗಳ ಕುಮ್ಮಕ್ಕೂ ಇದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.
Advertisement
Advertisement
ಶುಭ್ರ, ಶುದ್ಧ ಹಾಲಿನಲ್ಲಿ ಪಾತಕಿಗಳು ವಿಷ ತುಂಬಿ ಅಕ್ರಮವಾಗಿ ಲಾಭ ಪಡೀತಿದ್ದಾರೆ. ಈ ಮಿಲ್ಕ್ ಮಾಫಿಯಾ ಹೀಗೆ ಮುಂದುವರಿದ್ರೆ ನಗರದ ಜನ ಆಸ್ಪತ್ರೆಗಳಲ್ಲಿ ಸಾಲು ನಿಲ್ಲೋದು ತಪ್ಪಲ್ಲ.