ಬೀದರ್: ಜಿಲ್ಲೆಯ ಹುಚುಕನಹಳ್ಳಿಯಲ್ಲಿ ಹಾಗೂ ಸೀರಕಟಹಳ್ಳಿಯಲ್ಲಿ 1.8 ತೀವ್ರತೆಯ ಲಘು ಭೂಕಂಪನ (Earthquake) ಸಂಭವಿಸಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಇಂದು (ಜ.28) ಮಧ್ಯಾಹ್ನ 1:34ರ ಸುಮಾರಿಗೆ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 1.8 ತೀವ್ರತೆ ದಾಖಲಾಗಿದೆ. ಬೀದರ್ ತಾಲೂಕಿನ ರಂಜೋಲಖೇಣಿ ಜಿಪಿಯ ಹುಚುಕನಹಳ್ಳಿಯ ಗ್ರಾಮದ 1.0 ಕಿ.ಮೀ ವಾಯವ್ಯ ದಿಕ್ಕಿನಲ್ಲಿ ಭೂಕಂಪದ ಕೇಂದ್ರಬಿಂದುವಿದೆ. ಇದನ್ನೂ ಓದಿ: ಜಾತ್ರೆಗೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ – ಯುವ ಉದ್ಯಮಿಯ ದುರಂತ ಅಂತ್ಯ
ಲಘು ಭೂಕಂಪನದಿಂದಾಗಿ ಭೂಮಿಯಿಂದ ವಿಚಿತ್ರ ಶಬ್ದ ಹೊರಬಂದಿದ್ದು, ಜನರು ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಬೀದರ್ ತಹಶೀಲ್ದಾರ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಲಘು ಭೂಕಂಪನಕ್ಕೆ ಭಯ ಪಡಬೇಡಿ ಎಂದು ತಿಳಿಸಿದ್ದಾರೆ.


