ವಾಷಿಂಗ್ಟನ್: ಮೊಬೈಲ್ ಆಪರೇಟಿಂಗ್ ಸಿಸ್ಟಂ ಬಗ್ಗೆ ನಾವು ಗಮನ ನೀಡದ್ದು ಮೈಕ್ರೋಸಾಫ್ಟ್ ಕಂಪನಿಯ ಅತಿ ದೊಡ್ಡ ತಪ್ಪು ಎಂದು ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ.
ವಾಷಿಂಗ್ಟನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ವೇಳೆ ಮೊಬೈಲ್ ಆಪರೇಟಿಂಗ್ ಸಿಸ್ಟಂ ಯುದ್ಧದಲ್ಲಿ ಮೈಕ್ರೋಸಾಫ್ಟ್ ಹಿಡಿತ ಹೊಂದಿದ್ದರೆ ಮತ್ತಷ್ಟು ಮೌಲ್ಯಯುತ ಕಂಪನಿಯಾಗುತಿತ್ತು ಎಂದು ತಿಳಿಸಿದರು.
Advertisement
Advertisement
ಪರ್ಸನಲ್ ಕಂಪ್ಯೂಟರ್ ಗಳಿಗೆ ಅಪರೇಟಿಂಗ್ ಸಿಸ್ಟಂ ನೀಡುವ ಕ್ಷೇತ್ರದಲ್ಲಿ ನಾವಿದ್ದೇವೆ. ಆದರೆ ಮೊಬೈಲ್ ಓಎಸ್ ಕ್ಷೇತ್ರದಲ್ಲಿ ಕಡಿಮೆ ಮೊತ್ತದಲ್ಲಿ ನಾವು ಅವಕಾಶವನ್ನು ಕಳೆದುಕೊಂಡಿದ್ದೇವೆ. ಉತ್ತಮ ಜನರನ್ನು ನಿಯೋಜಿಸದ ಕಾರಣ ಈ ಕ್ಷೇತ್ರದಲ್ಲಿ ನಾವು ಅಭಿವೃದ್ಧಿಯಾಗಲಿಲ್ಲ ಎಂದು ಹೇಳಿದರು.
Advertisement
ಮೊಬೈಲ್ ಆಪರೇಟಿಂಗ್ ಸಿಸ್ಟಂ ಮಾಡುವ ವಿಚಾರದಲ್ಲಿ ನಮ್ಮಲ್ಲಿ ಕೌಶಲ್ಯವಿತ್ತು. ಎಲ್ಲ ಸಂಪನ್ಮೂಲಗಳಿದ್ದರೂ ನಾವು ಈ ಕ್ಷೇತ್ರದಲ್ಲಿ ಸಾಧನೆ ಮಾಡದೇ ಇರುವುದು ಮೈಕ್ರೋಸಾಫ್ಟ್ ಅತಿ ದೊಡ್ಡ ತಪ್ಪು ಎಂದು ಎಂದರು.
Advertisement
ಆಂಡ್ರಾಯ್ಡ್ ಗೂಗಲ್‍ನ ಅತಿ ದೊಡ್ಡ ಸಂಪತ್ತು ಎಂದ ಗೇಟ್ಸ್ ಹಾಲಿ ಸಿಇಒ ಸತ್ಯ ನಾದೆಲ್ಲಾ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
2015ರಲ್ಲಿ ಗೂಗಲ್ ಕಂಪನಿ 50 ದಶಲಕ್ಷ ಡಾಲರ್(ಅಂದಾಜು 347 ಕೋಟಿ ರೂ.) ನೀಡಿ ಆಂಡ್ರಾಯ್ಡ್ ಖರೀದಿಸಿತ್ತು. ಆರಂಭದಲ್ಲಿ ಮೊಬೈಲ್ ಆಪರೇಟಿಂಗ್ ಸಿಸ್ಟಂ ರೀತಿ ಆಂಡ್ರಾಯ್ಡ್ ಬೆಳೆಸಬೇಕೆಂಬ ಯಾವುದೇ ಪ್ರಸ್ತಾಪ ಇರಲಿಲ್ಲ. ಆದರೆ ಆಂಡ್ರಾಯ್ಡ್ ಸಹ ಸಂಸ್ಥಾಪಕ ಆಂಡಿ ರುಬಿನ್ ನೇತೃತ್ವದ ತಂಡದ ಕೆಲಸದಿಂದಾಗಿ ವಿಶ್ವದ ನಂಬರ್ ಒನ್ ಮೊಬೈಲ್ ಆಪರೇಟಿಂಗ್ ಸಿಸ್ಟಂ ಆಗಿ ಹೊರ ಹೊಮ್ಮಿದೆ.
ಗೂಗಲ್ ಆಂಡ್ರಾಯ್ಡ್ ಓಎಸ್ ಅಭಿವೃದ್ಧಿ ಪಡಿಸುತ್ತಿದ್ದರೆ 2010ರ ಬಳಿಕ ಮೈಕ್ರೋಸಾಫ್ಟ್ ವಿಂಡೋಸ್ ಫೋನ್ ಓಎಸ್ ಅಭಿವೃದ್ಧಿ ಪಡಿಸುತಿತ್ತು. ಮೈಕ್ರೋಸಾಫ್ಟ್ ಮಾಜಿ ಸಿಇಒ ಸ್ವೀವ್ ಬಲ್ಮರ್ ಆಂಡ್ರಾಯ್ಡ್ ಸ್ಪರ್ಧೆ ನೀಡಲೆಂದೇ ವಿಂಡೋಸ್ ಫೋನ್‍ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು. ಆದರೆ ಆಂಡ್ರಾಯ್ಡ್ ಮುಂದೆ ಮಾರುಕಟ್ಟೆಯಲ್ಲಿ ಸೋಲನ್ನು ಅನುಭವಿಸಿತ್ತು. 2017ರಲ್ಲಿ ಮೈಕ್ರೋಸಾಫ್ಟ್ ಅಧಿಕೃತವಾಗಿ ವಿಂಡೋಸ್ ಫೋನ್ ಓಎಸ್‍ಗೆ ಸಪೋರ್ಟ್ ನೀಡುವುದಿಲ್ಲ ಎಂದು ತಿಳಿಸಿತ್ತು.