ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಅಂಕುಶ – ಸಂಜೆ 5 ಗಂಟೆಯ ನಂತರ ವಸೂಲಿ ಮಾಡುವಂತಿಲ್ಲ

Public TV
1 Min Read
Micro finance harassment No collection after 5 pm Helpline will launched CM Siddaramaiah

ಬೆಂಗಳೂರು:ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಅಂಕುಶ‌ ಬಿದ್ದಿದೆ. ಮೈಕ್ರೋ ಫೈನಾನ್ಸ್ ಮತ್ತು ಹಣವನ್ನು ಸಾಲವಾಗಿ ನೀಡುವ ಕಂಪನಿಗಳಿಗೆ ಕಾನೂನು ಜಾರಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

ಮೈಕ್ರೋ ಫೈನಾನ್ಸ್ ಇನ್‌ಸ್ಟಿಟ್ಯೂಷನ್‌, ಅಸೋಸಿಯೇಷನ್ ಪದಾಧಿಕಾರಿಗಳು, ಆರ್‌ಬಿಐ ಅಧಿಕಾರಿಗಳು, ನಬಾರ್ಡ್ ಅಧಿಕಾರಿಗಳ ಜೊತೆ ಸಹಕಾರ, ಕಂದಾಯ, ಗೃಹ, ಕಾನೂನು, ಹಣಕಾಸು ಇಲಾಖೆ ಸಭೆ ಮಾಡಿದ ನಂತರ ಸರ್ಕಾರ ಕೈಗೊಂಡ ನಿರ್ಧಾರಗಳನ್ನು ಸಿದ್ದರಾಮಯ್ಯ ತಿಳಿಸಿದರು. ಇದನ್ನೂ ಓದಿ: ನಕಲಿ ಫೈನಾನ್ಸ್ ರಿಕವರಿ ಟೀಂನಿಂದ ವಸೂಲಿ ದಂಧೆ – ನಾಲ್ವರು ಆರೋಪಿಗಳ ಬಂಧನ

ಸದ್ಯ ಏನು ಕ್ರಮಕೈಗೊಳ್ಳಲಾಗಿದೆ?
– ಹಣವನ್ನು ವಸೂಲಿ ಮಾಡುವಾಗ ಆರ್‌ಬಿಐ ನಿಯಮ ಪಾಲನೆ ಮಾಡಬೇಕು.
– ಕಾನೂನು ಏನು ಹೇಳುತ್ತದೋ ಅದಕ್ಕಿಂತ ಹೆಚ್ಚು ಬಡ್ಡಿ ವಸೂಲಿ ಮಾಡಬಾರದು.
– ಸಂಜೆ 5 ಗಂಟೆ ನಂತರ ವಸೂಲಿ ಮಾಡುವಂತಿಲ್ಲ.
– ಗೂಂಡಾ, ರೌಡಿಗಳನ್ನ ಬಿಟ್ಟು ವಸೂಲಿ ಮಾಡಬಾರದು.
– ಕಾನೂನು ಉಲ್ಲಂಘನೆ ಮಾಡಿದ್ರೆ ಮುಲಾಜಿಲ್ಲದೇ ಕ್ರಮ
– ಪ್ರತಿ ಡಿಸಿ ಕಚೇರಿಯಲ್ಲಿ ಸಹಾಯವಾಣಿ ಪ್ರಾರಂಭ

Share This Article