ಮಳೆ ನಿಂತರು ಮಳೆ ಹನಿ ನಿಲ್ಲದು ಎಂಬ ಮಾತಿದೆ. ರಾಪರ್ ಇಶಾನಿ (Ishani) ಮತ್ತು ಮೈಕಲ್ (Michael) ಮಧ್ಯ ನಿಜವಾದ ಪ್ರೀತಿ ಶುರುವಾಗಿದೆಯೋ ಇಲ್ಲ, ಮಕ್ಕಳ ಮಾಡಿಕೊಳ್ಳೋ ಬಗ್ಗೆ ಮಾತನಾಡಿದ್ದಾರೆ. ಈ ವಿಷಯವನ್ನು ಸ್ವತಃ ಸುದೀಪ್ ಮುಂದೆಯೇ ತೆರೆದಿಟ್ಟಿದ್ದಾರೆ ಇಶಾನಿ. ಮೈಕಲ್ ನನ್ನ ಜೊತೆ ಮಾತಾಡ್ತಾ, ಮೂರು ಮಕ್ಕಳನ್ನು ಮಾಡಿಕೊಳ್ಳೋಣ ಎಂದು ಹೇಳಿದ್ದಾರೆ ಎನ್ನೋ ಮಾತನ್ನ ಬಿಗ್ ಬಾಸ್ (Bigg Boss Kannada) ವೇದಿಕೆಯ ಮೇಲೆ ಇಶಾನಿ ಮಾತನಾಡಿದ್ದಾರೆ.
ಇಶಾನಿ ಈಗಾಗಲೇ ಇಬ್ಬರ ಜೊತೆ ರಿಲೇಷನ್ ಶಿಪ್ ಇತ್ತು ಎಂದು ಮಾತನಾಡಿದ್ದಾರೆ. ಆ ಸಂಬಂಧ ತುಂಬಾ ಕೆಟ್ಟದಾಗಿತ್ತು ಎಂದು ಬಹಿರಂಗ ಪಡಿಸಿದ್ದಾರೆ. ಇನ್ಮುಂದೆ ಪ್ರೀತಿ ಹುಟ್ಟಿದರೆ ಅದು ನಿಜ ಆಗಿರಬೇಕು ಎಂದು ನಮ್ರತಾ ಮುಂದೆ ಆಡಿಯೂ ಆಗಿದೆ. ಆ ನಿಜ ಪ್ರೀತಿ ಮೈಕಲ್ ನಿಂದ ಸಿಗತ್ತಾ ಕಾದು ನೋಡಬೇಕು. ಆದರೂ, ಇಬ್ಬರೂ ತಮ್ಮ ಖಾಸಗಿ ಬದುಕಿನ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಟ್ರೂ ರಿಲೇಶನ್ ಶಿಪ್ ನನಗೆ ಬೇಕಿದೆ ಎಂದು ಇಶಾನಿ ಹೇಳಿದ್ದಾರೆ. ಅದು ನನ್ನಿಂದ ಸಿಗಲಿದೆ ಎಂದು ಮೈಕಲ್ ಒಪ್ಪಿಕೊಂಡಿದ್ದಾರೆ. ಹಾಗಾಗಿ ನಮ್ಮಿಬ್ಬರಿಗೆ ಮೂರು ಮಕ್ಕಳು ಬೇಕು ಎಂದು ಮೈಕಲ್ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅದು ನಿಜ ಆಗತ್ತೋ ಇಲ್ಲವೋ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಈ ಮಾತು ಗಿರಕಿ ಹೊಡೆಯುತ್ತಿದೆ.
ಇಶಾನಿ ಮತ್ತು ಮೈಕಲ್ ಯಾವಾಗಲೂ ಅಂಟಿಕೊಂಡೆ ಇರುತ್ತಾರೆ. ಜೀವನದ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಖಾಸಗಿ ವಿಚಾರಗಳನ್ನೂ ಮಾತಾಡಿದ್ದಾರೆ. ನಿಜವಾಗಿ ಇವರು ಪ್ರೀತಿ ಮಾಡುತ್ತಿದ್ದಾರಾ ಅನ್ನುವ ಅನುಮಾನ ವ್ಯಕ್ತವಾಗಿದೆ. ಮದುವೆಗೂ ಮುನ್ನವೇ ಮಕ್ಕಳ ಬಗ್ಗೆಯೂ ಯೋಚಿಸಿದ್ದಾರೆ ಅಂದರೆ, ಈ ಲವ್ ಕಂಟಿನ್ಯೂ ಆಗತ್ತಾ ಕಾದು ನೋಡಬೇಕು.
ಈ ಇಶಾನಿ ಹಿಂದೆ ಮೊದ ಮೊದಲು ತುಕಾಲಿ ಸಂತು ಬಿದ್ದಿದ್ದರು, ಆನಂತರ ಸ್ನೇಹಿತ ಜೊತೆ ಫ್ರೆಂಡ್ ಶಿಪ್ ಬೆಳೆಯಿತು. ಇದೀಗ ಮೈಕಲ್ ಅಂಟಿಕೊಂಡಿದ್ದಾರೆ. ಇದು ತಮಾಷೆ ಅಲ್ಲ, ಕ್ಷಣಿಕ ಆಕರ್ಷಣೆಯೂ ಅಲ್ಲ. ಇವರಿಬ್ಬರ ಮಧ್ಯ ಏನೋ ನೆಡೀತಾ ಇದೆ. ಅದು ಮುಂದುವರೆಯತ್ತೋ ಇಲ್ಲವೋ ಗೊತ್ತಿಲ್ಲ. ಆದರೂ ಮಕ್ಕಳವರೆಗೂ ಕನಸು ಬಿತ್ತಿದ್ದಾರೆ. ಅದು ನಿಜವಾಗಲಿ ಎನ್ನೋದೇ ಎಲ್ಲರ ಆಶಯ.
Web Stories