ಬಿಗ್ ಬಾಸ್ ಮನೆಗೆ (Bigg Boss Kannada 10) ಕಾಲಿಟ್ಟಾಗ ಮೈಕಲ್ ಅಜಯ್‌ಗೆ (Michael Ajay) ಸರಿಯಾಗಿ ಕನ್ನಡ ಬರುತ್ತಿರಲಿಲ್ಲ. ದೊಡ್ಮನೆಗೆ ಬಂದ ಮೇಲೆಯೇ ಮೈಕಲ್ ಕನ್ನಡ ಕಲಿತು ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದರು. ಮೈಕಲ್ ನಡೆಗೆ ಕನ್ನಡದ ಮಣ್ಣಿನ ಮಗ ಎಂದೇ ಹೈಲೆಟ್ ಆದರು. ಆದರೆ ಈಗ ಮೈಕಲ್ ವರ್ತನೆ ಬದಲಾಗಿದೆ. ಎಲ್ಲದ್ದಕ್ಕೂ ಡೋಂಟ್ ಕೇರ್ ಅನ್ನುವ ಗುಣ ಅವರದ್ದಾಗಿದೆ. ಬಿಗ್ ಬಾಸ್ ರೂಲ್ಸ್ ವಿರುದ್ಧ ಮೈಕಲ್ ನಡೆದುಕೊಂಡಿದ್ದಾರೆ. ಪ್ರಶ್ನಿಸಿದ ಕ್ಯಾಪ್ಟನ್ ತನಿಷಾ (Tanisha Kuppanda) ಜೊತೆ ವಾಗ್ವಾದ ಮಾಡಿದ್ದಾರೆ. ಇದನ್ನೂ ಓದಿ:ನಿಮ್ಮ ಬದುಕಲ್ಲಿ ಹೊಸ ವ್ಯಕ್ತಿಯ ಆಗಮನ- ನಮ್ರತಾಗೆ ಗುರೂಜಿ ಭವಿಷ್ಯ

ಅಡುಗೆ ಮಾಡಲು ಪಾತ್ರೆಗಳನ್ನು ತೊಳೆದಿರಲಿಲ್ಲ. ಇದನ್ನು ಮಾಡುವ ಕೆಲಸ ಮೈಕಲ್ ಅವರದ್ದಾಗಿತ್ತು. ಆದರೆ, ತನಿಷಾ ಅವರು ಪದೇ ಪದೇ ಬಂದು ಮನವಿ ಮಾಡಿಕೊಂಡರೂ ಪಾತ್ರೆ ತೊಳೆಯಲು ಅವರು ಮುಂದಾಗಲೇ ಇಲ್ಲ. ಕೊನೆಗೂ ಅವರು ಸಿಂಕ್ ಬಳಿ ಬಂದು ನಿಧಾನಕ್ಕೆ ಪಾತ್ರೆ ತೊಳೆಯಲು ಆರಂಭಿಸಿದರು. ನನ್ನಿಷ್ಟ ಬಂದಾಗ ಮಾಡ್ತೀನಿ. ಇದೆಲ್ಲ ಮಾಡಬೇಕು ಎಂದು ಎಲ್ಲಿ ಬರೆದಿದೆ. ನನಗೆ ಮಾಡೋಕೆ ಇಷ್ಟವೇ ಇಲ್ಲ ಎಂದರು ಮೈಕಲ್. ಮಲಗಿದ್ದಕ್ಕೆ ನಿಮಗೆ ಶಿಕ್ಷೆ ನೀಡಿದೆ. ಅದನ್ನು ಮಾಡದೇ ನೀವು ದುರಹಂಕಾರ ತೋರಿಸಿದಿರಿ. ಅದಕ್ಕೆ ನಾನೇನು ಮಾಡೋಕೆ ಆಗಲ್ಲ. ನೀವು ನಿದ್ದೆ ಮಾಡ್ತಾ ಇದ್ರೆ ಇನ್ನಷ್ಟು ನಿದ್ದೆ ಮಾಡಿ ಎಂದು ಹೇಳಬೇಕಾ ಎಂದು ತನಿಷಾ ಪ್ರಶ್ನಿಸಿದರು.
ಅದಕ್ಕೆ ಮೈಕಲ್ ತಿರುಗಿ ಮಾತನಾಡಿದ್ದರು. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಮೂರು ಬಾಲ್ ಹಾಕಿದೀಯಾ ಅಷ್ಟೇ. ನೀನು ದೊಡ್ಡ ಸಾಧನೆ ಮಾಡಿಲ್ಲ. ನಿನ್ನ ಧ್ವನಿಯನ್ನು ಕೇಳಿ ಮೊದಲಿನಿಂದಲೂ ಇರಿಟೇಷನ್ ಆಗುತ್ತಿದೆ ಎಂದು ಮೈಕಲ್ ಸಿಟ್ಟಲ್ಲೇ ಹೇಳಿದರು.
ಈ ಹಿಂದೆ ವಾರಾಂತ್ಯದ ಮಾತುಕತೆಯಲ್ಲಿ ಕ್ಯಾಪ್ಟನ್‌ಗೆ ಗೌರವ ನೀಡಬೇಕು ಎಂದು ಸುದೀಪ್ (Sudeep) ಈ ಮೊದಲೇ ಹೇಳಿದ್ದರು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಸೂಚಿಸಿದ್ದರು. ಆದರೆ, ಮೈಕಲ್ ಹಾಗೂ ವಿನಯ್ ಇಬ್ಬರೂ ಇದನ್ನು ಫಾಲೋ ಮಾಡಿಲ್ಲ. ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರು ಇಬ್ಬರಿಗೂ ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ. ಎಲ್ಲದ್ದಕ್ಕೂ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ.



