ಮೆಕ್ಸಿಕೋ ಸಿಟಿ: ಮಳೆ ಬರುವ ಸಲುವಾಗಿ ದೇವರಿಗೆ ಹರಕೆ ಹೊರುತ್ತಾರೆ, ಕತ್ತೆ ಮದುವೆ, ಗೊಂಬೆಗಳ ಮದುವೆ, ಕಪ್ಪೆಗಳ ಮದುವೆ ಹೀಗೆ ಹಲವಾರು ಪ್ರಾಣಿಗಳಿಗೆ ಮದುವೆ ಮಾಡಿಸಿ ಮೆರವಣಿಗೆ ಮಾಡಿಸಿದ್ದನು ಎಲ್ಲರಿಗೂ ಗೊತ್ತು. ಆದರೆ ವಿದೇಶಗಳಲ್ಲೂ ಮಳೆ ಬರುವ ಸಲುವಾಗಿ ಈ ವಿಚಿತ್ರ ಆಚರಣೆಗೆ ಅಲ್ಲಿಯ ಮೇಯರ್ ತೊಡಗಿಕೊಂಡಿದ್ದಾರೆ.
Advertisement
ಹೌದು, ಮೆಕ್ಸಿಕೋದ ಓಕ್ಸಾಕ ನಗರದ ಕೆಲವು ಭಾಗಗಲ್ಲಿ ಇಂತಹ ವಿಚಿತ್ರ ಆಚರಣೆಗಳು ಇಂದಿಗೂ ಜೀವಂತವಾಗಿವೆ. ಮೆಕ್ಸಿಕನ್ ಮೇಯರ್ ಎಂಬವರು ಮೀನುಗಾರರಿಗೆ ಒಳ್ಳೆಯದಾಗಲಿ ಎಂದು ಮೊಸಳೆಯನ್ನು ಮದುವೆಯಾಗಿದ್ದಾರೆ.
Advertisement
ಈ ಸಮಾರಂಭದಲ್ಲಿ ಮೊಸಳೆಗೆ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ಆ ಮೊಸಳೆಗೆ ಬಾಯಿಯನ್ನು ಕಟ್ಟಿ ಹಾಕಲಾಗಿತ್ತು. ಈ ಮೊಸಳೆ ಮದುವೆ ಮುನುಷ್ಯರ ಮದುವೆಗಿಂತ ಅದ್ಧೂರಿಯಾಗಿ ನಡೆಯಿತು.
Advertisement
Advertisement
ಅಲ್ಲಿರುವ ಮೇಯರ್ ಅವರು ಮೊಸಳೆಯನ್ನು ಮದುವೆಯಾದ್ರೆ ಮಧುಮಗಳು ಶಾಂತಿ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸುತ್ತಾಳೆ ಎನ್ನುವುದು ಇವರ ನಂಬಿಕೆ. ಈ ಧಾರ್ಮಿಕ ಸಂಪ್ರದಾಯ ಹಿಂದಿನ ಕಾಲದಿಂದ ಅಂದರೆ 1781 ರಿಂದಲೂ ನಡೆದುಕೊಂಡು ಬಂದಿದೆ ಅಂತೆ.