ಮೆಕ್ಸಿಕೋ: ಚರ್ಚ್ ಲೀಡರ್‌ವೊಬ್ಬನ ಮೇಲೆ ಮಕ್ಕಳ ಅಶ್ಲೀಲ ಚಿತ್ರಗಳು ಮತ್ತು ಅಪ್ರಾಪ್ತ ವಯಸ್ಕರ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆರೋಪಗಳು ಕೇಳಿ ಬರುತ್ತಿತ್ತು. ಈ ಹಿನ್ನೆಲೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ವಿಶ್ವದಾದ್ಯಂತ ಸುಮಾರು 5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದೇನೆ ಎಂದು ಹೇಳಿಕೊಳ್ಳುವ ಮೆಕ್ಸಿಕೋ ಮೂಲದ ಇವಾಂಜೆಲಿಕಲ್ ಮೆಗಾಚರ್ಚ್‍ನ ಮುಖ್ಯಸ್ಥ ಮೂರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಮಕ್ಕಳ ಅಶ್ಲೀಲ ಫೋಟೋಗಳನ್ನು ತೆಗೆಯುತ್ತಿದ್ದಾನೆ ಎಂಬ ಆರೋಪ ಕೇಳಿ ಬರುತ್ತಿತ್ತು. ಈ ಹಿನ್ನೆಲೆ ಪೊಲೀಸರು ಮುಖ್ಯಸ್ಥನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದ್ದು, ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಕಾರಿನಲ್ಲೇ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್ – ಓರ್ವ ಅರೆಸ್ಟ್, ಆರೋಪಿಗಳ ಪೈಕಿ ಮೂವರು ಅಪ್ರಾಪ್ತರು
Advertisement
Advertisement
ಯಾರಿದು?
ಆರೋಪಿಯನ್ನು ಗ್ವಾಡಲಜಾರಾ ಮೂಲದ ಚರ್ಚ್ ಲಾ ಲುಜ್ ಡೆಲ್ ಮುಂಡೋದ ನಾಯಕ ಮತ್ತು ಧರ್ಮಪ್ರಚಾರಕ ನಾಸನ್ ಜೋಕ್ವಿನ್ ಗಾರ್ಸಿಯಾ ಎಂದು ಗುರುತಿಸಲಾಗಿದೆ. ಗಾರ್ಸಿಯಾನನ್ನು ವಿಚಾರಣೆ ವೇಳೆ, ನಾನು ಅಪ್ರಾಪ್ತ ವಯಸ್ಕ ಬಾಲಕಿಯರ ಜೊತೆ ಅಶ್ಲೀಲವಾಗಿ ವರ್ತಿಸಿರುವುದು ಮತ್ತು ಮಾನವ ಕಳ್ಳಸಾಗಣೆಯನ್ನು ಒಳಗೊಂಡ ಆರೋಪಗಳು ನಿಜ ಎಂದು ತಪ್ಪೊಪ್ಪಿಕೊಂಡಿದ್ದಾನೆ.
Advertisement
Advertisement
2019 ರಲ್ಲಿ ಎರಡನೇ ಸಹ-ಪ್ರತಿವಾದಿ ಅಲೋಂಡ್ರಾ ಒಕಾಂಪೊನನ್ನು ಸಹ ಅಪ್ರಾಪ್ತ ಮಕ್ಕಳೊಂದಿಗೆ ಲೈಂಗಿಕ ಸಂಬಂಧವೊಂದಿದ್ದಕ್ಕೆ ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.