MeToo-ಸ್ಯಾಂಡಲ್ ವುಡ್ ಮೇಲೆ ಮತ್ತೆ ಸಿಡಿದ ‘ಮೀಟು’ ಬಾಂಬ್: ಬಾ ಬಾರೋ ರಸಿಕ ನಟಿ ಹೇಳಿದ ಕಹಿ ಸತ್ಯ

Public TV
2 Min Read
Ashitha 1

ಖ್ಯಾತ ನಟಿ ಶ್ರುತಿ ಹರಿಹರನ್ (Shruti Hariharan) ಸೇರಿದಂತೆ ಹಲವು ನಟಿಯರು ಈಗಾಗಲೇ ಸ್ಯಾಂಡಲ್ ವುಡ್ (Sandalwood) ಮೇಲೆ ಮೀಟು (Metto) ಬಾಂಬ್ ಸಿಡಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಈ ಪ್ರಕರಣಗಳು ಕೋರ್ಟ್ ಮೆಟ್ಟಿಲು ಕೂಡ ಹತ್ತಿದ್ದವು. ಸ್ಯಾಂಡಲ್ ವುಡ್ ಕರಾಳ ಮುಖಗಳನ್ನೂ ಬಿಚ್ಚಿಟ್ಟಿದ್ದವು. ಇದೀಗ ಮತ್ತೆ ಚಂದವನದಲ್ಲಿ ಮೀಟು ಸದ್ದು ಕೇಳಿ ಬರುತ್ತಿದೆ. ರೋಡ್ ರೋಮಿಯೋ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ, ಇದೀಗ ಸಿನಿಮಾ ರಂಗದಿಂದಲೇ ದೂರವಾಗಿರುವ ಆಶಿತಾ (Ashita) ತಮಗಾದ ಕಹಿ ಅನುಭವಗಳನ್ನು ನಿರ್ದೇಶಕ ರಘುರಾಮ್ ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

Ashitha 3

ಬಾ ಬಾರೋ ರಸಿಕ, ಆಕಾಶ್ (Akash), ತವರಿನ ಸಿರಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಆಶಿತಾ, ತಮಗಾದ ಕಹಿ ಅನುಭವಗಳ ಕಾರಣದಿಂದಾಗಿಯೇ ಚಿತ್ರರಂಗದಿಂದ ದೂರವಾಗಿದ್ದಾರಂತೆ. ಸಿನಿಮಾದಲ್ಲಿ ಅವಕಾಶ ಸಿಗಲು, ಸಲುಗೆ ಇಂದ ಇರು, ನಾವು ಹೇಳಿದಂತೆ ಕೇಳು ಎನ್ನುವ ಪದಗಳು ಅವರಿಗೆ ಹೇಸಿಗೆ ತರಿಸಿದ ಕಾರಣದಿಂದಾಗಿ ಚಿತ್ರರಂಗವನ್ನೇ ತೊರೆಯಬೇಕಾಯಿತು ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ. ನಾಚಿಕೆ ಇಲ್ಲದೇ ನೇರವಾಗಿಯೇ ಕೇಳಿದ ನಿರ್ದೇಶಕನ ಅಸಹ್ಯ ಪ್ರವೃತ್ತಿಯನ್ನು ಅವರು ತೆರೆದಿಟ್ಟಿದ್ದಾರೆ. ಇದನ್ನೂ ಓದಿ:ನಾಗಚೈತನ್ಯ- ಸಮಂತಾ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಾರ್ಜುನ್

Ashitha 2

ಸಿನಿಮಾ ರಂಗದಿಂದ ದೂರವಾಗಿದ್ದಕ್ಕೆ ನನಗೇನೂ ಬೇಸರವಿಲ್ಲ. ಆದರೆ, ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ಮೇಲೂ ನನಗೆ ಕೆಟ್ಟ ಅನುಭವಗಳು ಆದವು. ಆದರೆ, ನಾನು ಅದಕ್ಕೆ ಆಸ್ಪದ ಕೊಡಲಿಲ್ಲ. ನನಗೆ ಅಂತಹ ಅವಕಾಶವೂ ಬೇಕಾಗಿರಲಿಲ್ಲ. ಆ ನಿರ್ದೇಶಕರ (Director) ಹೆಸರು ಹೇಳುವುದು ಬೇಡ, ಅವರು ತಮ್ಮೊಂದಿಗೆ ನನ್ನನ್ನು ಸಲುಗೆಯಿಂದ ಇರಲು ಹೇಳಿದರು. ಅದಕ್ಕೆ ಒಪ್ಪದಾಗ ಏನಲ್ಲ ಅವಮಾನಗಳನ್ನು ಮಾಡಿದ್ದರು. ಟೇಕ್ ಚೆನ್ನಾಗಿ ಬಂದರೂ, ಮತ್ತೆ ರಿಟೇಕ್ ಮಾಡಿಸುತ್ತಿದ್ದರು. ಇದೆಲ್ಲದರಿಂದ ನಾನು ಬೇಸತ್ತಿದ್ದೆ ಎಂದು ಅವರು ಮಾತನಾಡಿದ್ದಾರೆ.

Ashitha 4

ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ನನ್ನಂತವಳಿಗೆ ಹೀಗಾದರೂ, ಹೊಸ ಹುಡುಗಿಯರು ಇನ್ನೆಷ್ಟು ಸಂಕಟ ಪಟ್ಟಿದ್ದಾರೋ ಗೊತ್ತಿಲ್ಲ. ಈಗಲೂ ನನಗೆ ನಟಿಸುವುದಕ್ಕೆ ಆಸಕ್ತಿ ಇದೆ. ಆದರೆ, ನನಗೆ ಟೀಮ್ ಇಷ್ಟವಾಗಬೇಕು ಮತ್ತು ನನಗೊಪ್ಪುವ ಪಾತ್ರ ಸಿಗಬೇಕು ಎಂದು ಹೇಳುವ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ವಾಪಸ್ಸಾಗುವ ಕುರಿತು ಅವರು ಮಾತನಾಡಿದ್ದಾರೆ. ಇಷ್ಟೆಲ್ಲ ಮಾತನಾಡಿದರೂ, ತಮಗೆ ಕಿರುಕುಳ ಕೊಟ್ಟವರ ಹೆಸರನ್ನು ಮಾತ್ರ ಆಶಿತಾ ಬಹಿರಂಗ ಪಡಿಸಿಲ್ಲ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *