ಮನೆಯಲ್ಲಿ ವಾರಕ್ಕೆ ಒಮ್ಮೆಯಾದರೂ ‘ತರಕಾರಿ ಸಾಂಬಾರ್’ ಮಾಡುತ್ತಿರುತ್ತೇವೆ. ಆದರೆ ನಾವು ದೇವಸ್ಥಾನಕ್ಕೆ ಹೋದಾಗ ಸಿಗುವ ಪ್ರಸಾದದ ಟೇಸ್ಟ್ ಬರುವುದು ಕಷ್ಟ. ಅದಕ್ಕೆ ಕೆಲವೊಮ್ಮೆ ನಾವು ‘ತರಕಾರಿ ಸಾಂಬಾರ್’ ಊಟ ಮಾಡಬೇಕಾದ್ರೆ ದೇವಸ್ಥಾನದ ಟೇಸ್ಟ್ ಬರುವುದಿಲ್ಲ ಎಂದು ಹೇಳುತ್ತಿರುತ್ತೇವೆ. ಅದಕ್ಕೆ ಇಂದು ನಿಮಗೆ ಸಿಂಪಲ್ ಆಗಿ ಹೇಗೆ ದೇವಸ್ಥಾನದ ಮಾದರಿಯಲ್ಲಿ ಸಾಂಬಾರ್ ಮಾಡಬಹುದು ಎಂದು ಹೇಳಿಕೊಡುತ್ತೇವೆ. ಇದೇ ರೀತಿ ಫಾಲೋ ಮಾಡಿ.
Advertisement
ಬೇಕಾಗಿರುವ ಪದಾರ್ಥಗಳು:
ಮಸಾಲೆಗೆ:
* ಎಣ್ಣೆ – 2 ಟೀಸ್ಪೂನ್
* ದಾನಿಯಾ ಬೀಜ – 1 ಟೇಬಲ್ಸ್ಪೂನ್
* ಜೀರಿಗೆ – ಅರ್ಧ ಟೇಬಲ್ಸ್ಪೂನ್
* ಕಡ್ಲೆ ಬೇಳೆ – 1 ಟೇಬಲ್ಸ್ಪೂನ್
* ಉದ್ದಿನ ಬೇಳೆ – 1 ಟೇಬಲ್ಸ್ಪೂನ್
* ಮೆಂತ್ಯ – 1 ಟೇಬಲ್ಸ್ಪೂನ್
* ಕರಿಬೇವಿನ ಎಲೆ – 5 ರಿಂದ 10
* ಒಣಗಿದ ಕೆಂಪು ಮೆಣಸಿನಕಾಯಿ – 4
* ತುರಿದ ತೆಂಗಿನಕಾಯಿ – 1 ಕಪ್
* ನೀರು – ಅರ್ಧ ಕಪ್
Advertisement
ಸಾಂಬಾರಿಗೆ:
* ಎಣ್ಣೆ – 2 ಟೇಬಲ್ಸ್ಪೂನ್
* ಕಟ್ ಮಾಡಿದ ಸೋರೆಕಾಯಿ – 1 ಕಪ್
* ಸಿಹಿ ಕುಂಬಳಕಾಯಿ ಹೋಳು – ಅರ್ಧ ಕಪ್
* ಬೀನ್ಸ್ – 5
* ಕಟ್ ಮಾಡಿದ ಟೊಮೆಟೊ – 1 ಕಪ್
* ನುಗ್ಗೆ ಕಾಯಿ – 1
* ಬದನೆಕಾಯಿ – 2
* ನೀರು – 5 ಕಪ್
* ಅರಿಶಿನ – ಅರ್ಧ ಟೀಸ್ಪೂನ್
* ಬೆಲ್ಲ – ಅರ್ಧ ಟೀಸ್ಪೂನ್
* ಹುಣಸೆಹಣ್ಣಿನ ಸಾರ – ಅರ್ಧ ಕಪ್
* ಉಪ್ಪು – 1 ಟೀಸ್ಪೂನ್
* ತೊಗರಿ ಬೇಳೆ – 1 ಕಪ್
ಒಗ್ಗರಣೆಗಾಗಿ:
* ಎಣ್ಣೆ – 3 ಟೀಸ್ಪೂನ್
* ಸಾಸಿವೆ – 1 ಟೀಸ್ಪೂನ್
* ಒಣಗಿದ ಕೆಂಪು ಮೆಣಸಿನಕಾಯಿ – 2
* ಕರಿಬೇವಿನ ಎಲೆಗಳು – 5 ರಿಂದ 8
Advertisement
Advertisement
ಮಾಡುವ ವಿಧಾನ:
ಸಾಂಬಾರ್ ಮಸಾಲ ತಯಾರಿಕೆ:
* ಮೊದಲನೆಯದಾಗಿ, ಗ್ಯಾಸ್ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ದಾನಿಯಾ ಬೀಜ, ಜೀರಿಗೆ, ಕಡ್ಲೆ ಬೇಳೆ, ಉದ್ದಿನ ಬೇಳೆ ಮತ್ತು ಮೇಥಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ಮಸಾಲೆಗಳು ಗೋಲ್ಡನ್ ಬ್ರೌನ್ ಆಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
* ಈಗ ಕರಿಬೇವಿನ ಎಲೆಗಳು, ಒಣಗಿದ ಕೆಂಪು ಮೆಣಸಿನಕಾಯಿ ಸೇರಿಸಿ ಕಡಿಮೆ ಉರಿಯಲ್ಲಿ ಹುರಿಯಿರಿ. ಮಸಾಲೆಗಳು ಪರಿಮಳ ಆಗುವವರೆಗೆ ಹುರಿಯಿರಿ. ಸಂಪೂರ್ಣವಾಗಿ ತಣ್ಣಗಾದ ಮೇಲೆ ಮಿಕ್ಸರ್‍ಗೆ ಹಾಕಿ ತೆಂಗಿನಕಾಯಿ ಹಾಕಿ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಪಕ್ಕಕ್ಕೆ ಇರಿಸಿ. ಇಲ್ಲಿಗೆ ಸಾಂಬಾರ್ ಮಸಾಲ ರೆಡಿಯಾಗುತ್ತೆ.
* ನಂತರ ದೊಡ್ಡ ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿಯಾದ ನಂತರ ಸೋರೆಕಾಯಿ, ಸಿಹಿ ಕುಂಬಳಕಾಯಿ, ಬೀನ್ಸ್, ಟೊಮೆಟೊ, ನುಗ್ಗೆಕಾಯಿ ಮತ್ತು 2 ಬದನೆಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ತರಕಾರಿಗಳು ಪರಿಮಳ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ಈಗ ನೀರು, ಕರಿಬೇವಿನ ಎಲೆಗಳು, ಅರಿಶಿನ ಮತ್ತು ಬೆಲ್ಲ ಸೇರಿಸಿ 10 ನಿಮಿಷ ಫ್ರೈ ಮಾಡಿ. ತರಕಾರಿಗಳನ್ನು ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿ.
* ಅದಕ್ಕೆ ಹುಣಸೆಹಣ್ಣು ರಸ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ. ಚೆನ್ನಾಗಿ ಬೆರೆಸಿ. 2 ನಿಮಿಷ ಅಥವಾ ಹುಣಸೆಹಣ್ಣಿನ ಹಸಿ ವಾಸನೆ ಹೋಗುವವರೆಗೆ ಕುದಿಸಿ. 1 ಕಪ್ ಬೇಯಿಸಿದ ತೊಗರೆ ಬೇಳೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 2 ನಿಮಿಷಗಳ ಕಾಲ ಅಥವಾ ಎಲ್ಲವನ್ನೂ ಚೆನ್ನಾಗಿ ಕುದಿಸಿ.
* ಈಗ ತಯಾರಾದ ಮಸಾಲೆ ಪೇಸ್‍ನ್ನು ಸೇರಿಸಿ ಚೆನ್ನಾಗಿ ಬೆರೆಸಿ. 4-5 ನಿಮಿಷ ಅಥವಾ ತೆಂಗಿನಕಾಯಿ ಹಸಿ ಪರಿಮಳ ಹೋಗುವವರೆಗೆ ಕುದಿಸಿ.
* ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ, ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳು ಸೇರಿಸಿ ಒಗ್ಗರಣೆ ತಯಾರಿಸಿ
– ಅಂತಿಮವಾಗಿ, ಬಿಸಿ ಅನ್ನದೊಂದಿಗೆ ಈ ದೇವಾಲಯದ ಶೈಲಿಯ ಸಾಂಬಾರ್ ಅನ್ನು ಆನಂದಿಸಿ.