ಗಾಂಧಿನಗರ: ಬಾಹ್ಯಾಕಾಶದಿಂದ ಚೆಂಡಿನಾಕಾರದ ಕಪ್ಪು ಲೋಹದ ವಸ್ತುವೊಂದು ನೆಲಕ್ಕೆ ಅಪ್ಪಳಿಸಿದ್ದು, ಗುಜರಾತ್‌ನ ಆನಂದ್ ಜಿಲ್ಲೆಯ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಲೋಹದ ವಸ್ತು ಬಿದ್ದ ರಭಸಕ್ಕೆ ಇಲ್ಲಿನ 3 ಗ್ರಾಮಗಳಲ್ಲಿ ಭೂಮಿ ಕಂಪಿಸಿದ್ದು, ಶಬ್ಧದಿಂದ ಉಂಟಾದ ಭಯಕ್ಕೆ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ.
Advertisement
ಈ ಕುರಿತು ತನಿಖೆ ನಡೆಸಲು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಕರೆಸಿದ್ದು ಅವರು, ಸ್ಥಳದಲ್ಲಿ ಬಿದ್ದ ವಸ್ತುವನ್ನು ಉಲ್ಕಾಶಿಲೆ (ಉಪಗ್ರಹದ ಅವಶೇಷ) ಎಂದು ಶಂಕಿಸಿದ್ದಾರೆ. ಈ ಲೋಹದ ವಸ್ತುವನ್ನು ಗುರುತ್ವಾಕರ್ಷಣೆಯ ಅನುಪಸ್ಥಿತಿಯಲ್ಲಿ ಬಾಹ್ಯಾಕಾಶದಲ್ಲಿ ಉಪಗ್ರಹದ ಆವೇಗವನ್ನು ಕಾಪಾಡಿಕೊಳ್ಳಲು ಬಳಸುವ ಬಾಲ್ ಬೇರಿಂಗ್‌ಗಳು ಎಂದು ತೋರುತ್ತದೆ. ಇದನ್ನೂ ಓದಿ: ಇಂದು 156 ಕೇಸ್ – ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ
Advertisement
ಆನಂದನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ರಾಜಿಯನ್ ಈ ಕುರಿತು ಮಾಹಿತಿ ನೀಡಿದ್ದು, ಬಾಹ್ಯಾಕಾಶದಿಂದ ನೆಲಕ್ಕೆ ಚೆಂಡಿನಂತಹ ವಸ್ತುಗಳು ಅಪ್ಪಳಿಸಿದ್ದು, ಗ್ರಾಮಸ್ಥರಿಗೆ ಭೂಕಂಪದ ಭೀತಿ ಆವರಿಸಿತ್ತು. ನಿನ್ನೆ ಸಂಜೆ 4:45ರ ಸುಮಾರಿಗೆ, 5 ಕೆಜಿ ತೂಕದ ಮೊದಲ ದೊಡ್ಡ ಕಪ್ಪು ಲೋಹದ ಚೆಂಡು ಭಲೇಜ್‌ನಲ್ಲಿ ಬಿದ್ದಿತು ಮತ್ತು ನಂತರ ಖಂಭೋಲಾಜ್ ಮತ್ತು ರಾಂಪುರದಲ್ಲಿ ಬಿದ್ದಿತು. 3 ಸ್ಥಳಗಳು ಪರಸ್ಪರ 15 ಕಿಲೋಮೀಟರ್ ಪರಿಮಿತಿಯಲ್ಲಿದೆ. ಲೋಹದ ಚೆಂಡುಗಳು ಉಪಗ್ರಹಗಳ ಅವಶೇಷಗಳೆಂದು ತಜ್ಞರು ಶಂಕಿಸಿದ್ದು, ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.
Advertisement
Advertisement
ಮೊದಲ ಲೋಹದ ಚೆಂಡು ಸಂಜೆ 4.45 ರ ಸುಮಾರಿಗೆ ಬಿದ್ದಿತು. ಇದಾದ ಸ್ವಲ್ಪ ಸಮಯದಲ್ಲೇ ಬೇರೆ ಬೇರೆ ಸ್ಥಳಗಳಲ್ಲಿ ಇನ್ನೂ ಎರಡು ಚೆಂಡುಗಳು ಬಿದ್ದಿರುವುದು ತಿಳಿದು ಬಂದಿತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಒಂದು ಗ್ರಾಮದಲ್ಲಿ ಮನೆಗಳಿಂದ ದೂರ ಬಿದ್ದಿದ್ದರೆ, ಉಳಿದ ಎರಡರಲ್ಲಿ ತೆರೆದ ಪ್ರದೇಶದಲ್ಲಿ ಬಿದ್ದಿವೆ. ಇದು ಯಾವ ರೀತಿಯ ಬಾಹ್ಯಾಕಾಶ ಅವಶೇಷ ಎಂದು ನಮಗೆ ಖಚಿತವಾಗಿಲ್ಲ. ಆದರೆ ಗ್ರಾಮಸ್ಥರ ಪ್ರಕಾರ ಆಕಾಶದಿಂದ ಬಿದ್ದಿವೆ ಎಂದು ಕೇಳಿಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಮಸ್ಕ್
ವಸ್ತುಗಳನ್ನು ಗುರುತಿಸಲು ನಾವು ಅಹಮದಾಬಾದ್ ಮತ್ತು ಗಾಂಧಿನಗರದಿಂದ ವಿಧಿವಿಜ್ಞಾನ ತಜ್ಞರನ್ನು ಕರೆಸಿದ್ದೇವೆ ಎಂದು ರಾಜಯಾನ್ ಹೇಳಿದ್ದಾರೆ.
Mysterious metal balls fall from space in Gujarat, pics surface https://t.co/6EUJAOE968
-via @inshorts. STRANGE
— Syed Qadri (@SyedQad22698550) May 13, 2022
ನಿಗೂಢ ಘಟನೆ ಹಿಂದೆಯೂ ನಡೆದಿತ್ತು: ವರದಿಗಳ ಪ್ರಕಾರ ಇಲ್ಲಿ ಹಿಂದೆಯೂ ಇಂತಹ ನಿಗೂಢ ಘಟನೆಗಳು ನಡೆದಿತ್ತು. ಈ ವರ್ಷ ಏಪ್ರಿಲ್‌ನಲ್ಲಿ ಮಹಾರಾಷ್ಟ್ರದಲ್ಲಿ `ಉಲ್ಕಾಶಿಲೆ’ ಆಕಾಶದಲ್ಲಿ ಕಾಣಿಸಿಕೊಂಡ ನಂತರ ಇದೇ ರೀತಿಯ ಘಟನೆ ಸಂಭವಿಸಿತ್ತು. ಏರೋಪ್ಲೇನ್‌ನಂತೆ ಸದ್ದು ಮಾಡಿದ ಶಬ್ದದ ನಂತರ ದೊಡ್ಡ ಸ್ಫೋಟ ಸಂಭವಿಸಿತ್ತು. ಆ ಉತ್ಕಾಶಿಲೆಯನ್ನು ನ್ಯೂಜಿಲೆಂಡ್‌ನಿಂದ ಉಡಾವಣೆಯಾದ ಉಪಗ್ರಹದ ತುಣುಕುಗಳು ಎಂದು ಮೂಲಗಳು ಖಚಿತಪಡಿಸಿದ್ದವು.