ಮುಂಬೈ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಬೃಹತ್ ವೃತ್ತಕಾರದಲ್ಲಿರುವ ಲೋಹದ ವಸ್ತು ಮತ್ತು ಸಿಲಿಂಡರ್‌ನಂತಿರುವ ವಸ್ತು ಪತ್ತೆಯಾಗಿದೆ. ಏಕಾಏಕಿ ಪ್ರತ್ಯಕ್ಷವಾದ ವಸ್ತುಗಳನ್ನು ಗಮನಿಸಿದ ಗ್ರಾಮಸ್ಥರಲ್ಲಿ ಕುತೂಹಲ ಮೂಡಿದೆ.
ಕಳೆದ ರಾತ್ರಿ ಆಕಾಶದಲ್ಲಿ ಬೆಂಕಿಯಂತೆ ಉರಿಯುತ್ತಿದ್ದ ವಸ್ತುವನ್ನು ನೋಡಿರುವುದಾಗಿ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಇದಾದ ಬೆನ್ನಲ್ಲೇ ಲೋಹದ ವಸ್ತುಗಳು ಪತ್ತೆಯಾಗಿವೆ.
Advertisement
Maharashtra | Yesterday night we received information about a 3-metre ring being found in a village in Sindewahi. Ring was hot & seemed like it has fallen from sky while spherical object was found in another village today morning: Ganesh Jagdale, Tehsildar, Sindewahi, Chandrapur pic.twitter.com/WhHl8c7257
— ANI (@ANI) April 3, 2022
Advertisement
ಶನಿವಾರ ರಾತ್ರಿ ಸಿಂಧೇವಾಹಿಯ ಹಳ್ಳಿಯಲ್ಲಿ 3 ಮೀಟರ್ ಅಗಲವಿರುವ ವೃತ್ತಕಾರದ ವಸ್ತು ಪತ್ತೆಯಾಗಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಈ ವಸ್ತು ಬಿಸಿಯಾಗಿದ್ದು, ಆಕಾಶದಿಂದ ಬಿದ್ದಿರುವಂತೆ ಮೇಲ್ನೋಟಕ್ಕೆ ತಿಳಿಯುತ್ತದೆ. ಭಾನುವಾರ ಬೆಳಗ್ಗೆ ಮತ್ತೊಂದು ಗ್ರಾಮದಲ್ಲಿ ಗೋಲಾಕಾರದ ವಸ್ತು ಪತ್ತೆಯಾಗಿದೆ ಎಂದು ಚಂದ್ರಾಪುರ ತಹಸೀಲ್ದಾರ್ ಗಣೇಶ್ ಜಗದಾಲೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರನ್ನು ಇನ್ನು ಯಾರಿಂದಲೂ ಓಡಿಸಲು ಸಾಧ್ಯವಿಲ್ಲ: ಮೋಹನ್ ಭಾಗವತ್
Advertisement
ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಆಗಮಿಸಿ ಲೋಹದ ವಸ್ತುಗಳನ್ನು ಪರೀಕ್ಷೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಈ ಘಟನೆಯ ಬಳಿಕ ತಜ್ಞರು ಲೋಹದ ವಸ್ತುಗಳು ಉಪಗ್ರಹಗಳ ತುಣುಕು ಇರಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಶನಿವಾರ ನ್ಯೂಜಿಲೆಂಡಿನ ಮಹಿಯಾ ಪೆನ್ಸುಲಾದಿಂದ 2 ಉಪಗ್ರಹಗಳನ್ನು ಹಾರಿಸಲಾಗಿತ್ತು. ಉಪಗ್ರಹ ಉಡಾವಣೆಗೆ ಬಳಸಲಾದ ರಾಕೆಟ್‌ನ ತುಣುಕು ಇರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನೊಂದೆಡೆ ಚೀನಾದ ರಾಕೆಟ್ ಒಂದರ ತುಣುಕು ಇರಬಹುದು ಎಂಬ ಸಂಶಯವೂ ತಜ್ಞರಲ್ಲಿ ಇದೆ. 2017ರ ಫೆಬ್ರವರಿಯಲ್ಲಿ ಹಾರಿಸಲಾಗಿದ್ದ ರಾಕೆಟ್‌ನ ತುಣುಕುಗಳು ಭೂಮಿಗೆ ಬಿದ್ದಿರಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಕೋವ್ಯಾಕ್ಸಿನ್ ಲಸಿಕೆ ಪೂರೈಕೆ ಸ್ಥಗಿತಗೊಳಿಸಿದ WHO
#WATCH | Maharashtra: In what appears to be a meteor shower was witnessed over the skies of Nagpur & several other parts of the state. pic.twitter.com/kPUfL9P18R
— ANI (@ANI) April 2, 2022
ಕಳೆದ ರಾತ್ರಿ ಆಕಾಶದಲ್ಲಿ ಉರಿಯುತ್ತಿದ್ದ ವಸ್ತುವನ್ನು ಕಂಡ ಜನರು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದದ್ದರು. ಆಕಾಶದಲ್ಲಿ ಉರಿಯುತ್ತಿದ್ದ ವಸ್ತು ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಗೋಚರಿಸಿದೆ ಎನ್ನಲಾಗಿದೆ.