ವಾಷಿಂಗ್ಟನ್: ಟ್ವಿಟ್ಟರ್‌ನಲ್ಲಿ (Twitter) ದಿನನಿತ್ಯದ ಪೋಸ್ಟ್‌ಗಳನ್ನ ಓದಲು ಮುಖ್ಯಸ್ಥ ಎಲೋನ್ ಮಸ್ಕ್ ಮಿತಿ ವಿಧಿಸಿದ ಬೆನ್ನಲ್ಲೇ ಟ್ವಿಟ್ಟರ್‌ಗೆ ಪರ್ಯಾಯವಾಗಿ ʻಥ್ರೆಡ್ಸ್ʼಮೈಕ್ರೋಬ್ಲಾಗಿಂಗ್ ಅಪ್ಲಿಕೇಶನ್ (Threads Microblogging App) ಪ್ರಾರಂಭಿಸಲು ಮೆಟಾ (Meta) ಪ್ಲ್ಯಾನ್ ಮಾಡಿದೆ.
ಹೌದು. ಕಳೆದ ವರ್ಷದಿಂದ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗದುಕೊಂಡ ನಂತರ ಆಗುತ್ತಿರುವ ಸಮಸ್ಯೆಗಳ ಲಾಭ ಪಡೆಯಲು ಮೆಟಾ ಪ್ರಯತ್ನಿಸುತ್ತಿದೆ. ಟ್ವಿಟ್ಟರ್ ಬಳಕೆದಾರರು ಪರ್ಯಾಯ ವೇದಿಕೆಗಳನ್ನು ಹುಡುಕಲು ಪ್ರೇರೇಪಿಸಲು ಮುಂದಾಗುತ್ತಿದೆ. ಇದನ್ನೂ ಓದಿ: ಜಸ್ಟ್ 999 ರೂ.ಗೆ ಜಿಯೋ ಭಾರತ್ 4ಜಿ ಫೋನ್ ಬಿಡುಗಡೆ – ಗುಣ ವೈಶಿಷ್ಟ್ಯಗಳೇನು?
Advertisement
Rate limits increasing soon to 8000 for verified, 800 for unverified & 400 for new unverified https://t.co/fuRcJLifTn
— Elon Musk (@elonmusk) July 1, 2023
Advertisement
ಇದೀಗ ʻಥ್ರೆಡ್ಸ್ʼಎಂದು ಕರೆಯಲ್ಪಡುವ ಈ ಅಪ್ಲಿಕೇಶನ್ ಟ್ವಿಟ್ಟರ್ ನಂತೆಯೇ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಪಠ್ಯ ಆಧಾರಿತ ಪೋಸ್ಟ್‌ಗಳನ್ನ ಓದಬಹುದು, ಟ್ವಿಟ್ಟರ್‌ನಂತೆಯೇ ಲೈಕ್, ಕಾಮೆಂಟ್ ಹಾಗೂ ಶೇರ್ ಕೂಡ ಮಾಡಬಹುದು. ಜೊತೆಗೆ ನೆಚ್ಚಿನ ಬಳಕೆದಾರರನ್ನ ಫಾಲೋ ಮಾಡಬಹುದು. ಥ್ರೆಡ್ಸ್ ಮೈಕ್ರೋಬ್ಲಾಗಿಂಗ್ ಅಪ್ಲಿಕೇಶನ್ ಇದೇ ಗುರುವಾರ (ಜುಲೈ 6) ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಆಪಲ್‌ನ ಆ್ಯಪ್ ಸ್ಟೋರ್‌ಪಟ್ಟಿ ತಿಳಿಸಿದೆ.
Advertisement
ಈ ಥ್ರೆಡ್ಸ್ ಅಪ್ಲಿಕೇಶನ್ ನಲ್ಲಿ (Threads App) ಟ್ವಿಟ್ಟರ್‌ನಂತೆಯೇ ಚರ್ಚಿಸಲು ಅವಕಾಶವಿದೆ. ಇಂದಿನ ಕಾಳಜಿ ವಹಿಸುವ ವಿಷಯಗಳಿಂದ ಹಿಡಿದು, ನಾಳೆ ಟ್ರೆಂಡ್ ಆಗುವ ಎಲ್ಲಾ ವಿಷಯಗಳನ್ನ ಚರ್ಚಿಸಬಹುದಾಗಿದೆ. ಶೀಘ್ರದಲ್ಲೇ ಈ ಆ್ಯಪ್ ಬಿಡುಗಡೆಯಾಗಲಿದ್ದು, ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಆಪಲ್‌ನ ಆ್ಯಪ್ ಸ್ಟೋರ್ ಪಟ್ಟಿ ತಿಳಿಸಿದೆ.
Advertisement
ಕಳೆದ ಎರಡು ದಿನಗಳ ಹಿಂದೆಯಷ್ಟೇ ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್ ಒಂದು ದಿನಕ್ಕೆ ಟ್ವಿಟ್ಟರ್‌ನಲ್ಲಿ ಇಂತಿಷ್ಟೇ ಪೋಸ್ಟ್‌ಗಳನ್ನ ಓದಬಹುದು ಎಂಬ ಮಿತಿ ವಿಧಿಸಿ, ನಂತರ ಮತ್ತೆ ಹೆಚ್ಚಿಸಿದ್ದರು.
ಕಳೆದ ಶನಿವಾರ ವಿಶ್ವದಾದ್ಯಂತ ಕೆಲಕಾಲ ಟ್ವಿಟ್ಟರ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಜನ ಅಸಮಾಧಾನ ಹೊರಹಾಕಿದ್ದರು. ಬಳಿಕ ಮಸ್ಕ್ ಬದಲಾವಣೆಯ ಅಸ್ತ್ರ ಹೂಡಿದ್ದರು. ಅನಗತ್ಯ ಡೇಟಾ ಬಳಕೆ ಮಾಡೋದನ್ನ ತಪ್ಪಿಸುವುದು, ಕೆಲ ಪೋಸ್ಟ್‌ಗಳ (Twitter Posts) ಮೂಲಕ ಕೆರಳಿಸುವ ಪ್ರಯತ್ನ ಮಾಡುತ್ತಿರುವುದು ಸೇರಿದಂತೆ ಹಲವು ವಿಷಯಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಟ್ವಿಟ್ಟರ್ ಪ್ರತಿದಿನದ ಪೋಸ್ಟ್ ಓದಲು ಮಿತಿ ವಿಧಿಸಿತ್ತು. ಇದು ತಾತ್ಕಾಲಿಕ ಕ್ರಮವಾಗಿದೆ. ಮುಂದೆ ಟ್ವಿಟ್ಟರ್ ಬಳಕೆದಾರರ ಪ್ರತಿಕ್ರಿಯೆ ನೋಡಿಕೊಂಡು ಬದಲಾವಣೆ ತರುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು.
ಮೊದಲಿಗೆ ವೆರಿಫೈ ಆದ ಖಾತೆಗಳಿಗೆ (Twitter Verified Accounts) ದಿನಕ್ಕೆ 6,000 ಪೋಸ್ಟ್ ಮಾತ್ರ ಓದಲು ಅವಕಾಶವಿತ್ತು. ವೆರಿಫೈ ಆಗದ ಖಾತೆಗಳಿಗೆ ದಿನಕ್ಕೆ 600 ಹಾಗೂ ವೆರಿಫೈ ಆಗದ ಹೊಸ ಖಾತೆಗಳ ಬಳಕೆದಾರರು ದಿನಕ್ಕೆ 300 ಪೋಸ್ಟ್‌ಗಳನ್ನು ಓದಲು ಮಿತಿ ಇರುತ್ತದೆ ಎಂದು ಹೇಳಿದ್ದ ಮಸ್ಕ್ ಒಂದು ದಿನದ ನಂತರ ತಮ್ಮ ನಿಲುವನ್ನು ಬದಲಿಸಿದ್ದರು. ಇದನ್ನೂ ಓದಿ: Twitter ನಲ್ಲಿ ಪೋಸ್ಟ್ ಓದುವ ಮಿತಿ ಹೆಚ್ಚಳ – ಮಹತ್ವದ ಬದಲಾವಣೆ ಘೋಷಿಸಿದ ಮಸ್ಕ್
ಮತ್ತೊಂದು ಟ್ವೀಟ್ ಮಾಡಿ ಓದುವಿಕೆ ಮಿತಿಯಲ್ಲಿ ಕೊಂಚ ಮಾರ್ಪಾಡು ಮಾಡುವುದಾಗಿ ಘೋಷಿಸಿದರು. ವೆರಿಫೈ ಖಾತೆಗಳ ಮಿತಿಯನ್ನು 8,000 ಪೋಸ್ಟ್ ಮಾತ್ರ ಓದಲು ಅವಕಾಶವಿತ್ತು. ವೆರಿಫೈ ಆಗದ ಖಾತೆಗಳಿಗೆ ದಿನಕ್ಕೆ 800 ಹಾಗೂ ವೆರಿಫೈ ಆಗದ ಹೊಸ ಖಾತೆಗಳ ಮಿತಿಯನ್ನು 400ಕ್ಕೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದಾರೆ. ಈಗ 10k, 1k ಮತ್ತು 0.5k ಎಂದು ಮಸ್ಕ್ ಮತ್ತೊಂದು ಟ್ವೀಟ್ ಮಾಡಿದ್ದರು.
Web Stories