ವಾಷಿಂಗ್ಟನ್: ಫೇಸ್‌ಬುಕ್ ಒಡೆತನದ ಮೆಟಾ ತನ್ನ ಉದ್ಯೋಗಿಗಳಿಗೆ ಉಚಿತ ಲಾಂಡ್ರಿ ಹಾಗೂ ಡ್ರೈ ಕ್ಲೀನಿಂಗ್ ಸೇವೆಯನ್ನು ಒದಗಿಸುತ್ತಿತ್ತು ಎಂಬುದು ನಿಮಗೆ ತಿಳಿದಿತ್ತಾ? ತಿಳಿದಿಲ್ಲವೆಂದಾದರೂ ಇದೀಗ ಈ ಸೌಲಭ್ಯವನ್ನು ಮೆಟಾ ಕಡಿತಗೊಳಿಸುತ್ತಿದೆ.
ಹೌದು, ಫೇಸ್‌ಬುಕ್ ಎಂದರೆ ಈಗಿನ ಮೆಟಾ ಈ ಹಿಂದೆ ತನ್ನ ಉದ್ಯೋಗಿಗಳಿಗೆ ಕಂಪನಿಯ ಪರವಾಗಿ ಉಚಿತ ಲಾಂಡ್ರಿ, ವ್ಯಾಲೆಟ್ ಸೇವೆ ಹಾಗೂ ಡ್ರೈ ಕ್ಲೀನಿಂಗ್ ಸೇವೆಯನ್ನು ಒದಗಿಸುತ್ತಿತ್ತು. ಆದರೆ ಇದೀಗ ಮೆಟಾ ತನ್ನ ಉದ್ಯೋಗಿಗಳಿಗೆ ಈ ಸೇವೆಯನ್ನು ಕಡಿತಗೊಳಿಸುತ್ತಿದೆ ಎಂದು ಈ-ಮೇಲ್ ಮೂಲಕ ತಿಳಿಸಿದೆ. ಇದನ್ನೂ ಓದಿ: ದೆಹಲಿ ಡಿಸಿಪಿ ಕಾರಿಗೆ ಡಿಕ್ಕಿ ಹೊಡೆದಿದ್ದ Paytm ಸಿಇಒ – ಜಾಮೀನಿನ ಮೇಲೆ ಬಿಡುಗಡೆ
Advertisement
Advertisement
ಮೆಟಾ ಉಚಿತ ಲಾಂಡ್ರಿ, ವ್ಯಾಲೆಟ್ ಸೇವೆ ಹಾಗೂ ಡ್ರೈ ಕ್ಲೀನಿಂಗ್‌ನೊಂದಿಗೆ ತನ್ನ ಉದ್ಯೋಗಿಗಳಿಗೆ ಉಚಿತ ಊಟದ ಸವಲತ್ತನ್ನೂ ನೀಡುತ್ತಿತ್ತು. ಈ ಹಿಂದೆ ಸಂಜೆ 6 ಗಂಟೆಯ ಬಳಿಕ ನೀಡುತ್ತಿದ್ದ ಈ ಸೇವೆಯನ್ನು ಮೆಟಾ ಮುಂದೂಡಿದೆ. ಬದಲಿಗೆ ಸಂಜೆ 6:30ರ ಬಳಿಕ ಈ ಸೇವೆ ತನ್ನ ಉದ್ಯೋಗಿಗಳಿಗೆ ಲಭ್ಯವಾಗಿಸಿದೆ. ಇದನ್ನೂ ಓದಿ: ಉಕ್ರೇನ್‍ಗೆ 200 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡಿದ ಅಮೆರಿಕ
Advertisement
ಮೆಟಾ ತನ್ನ ಉದ್ಯೋಗಿಗಳನ್ನು ಮಾರ್ಚ್ 28ಕ್ಕೆ ಕಂಪನಿಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ. ಉದ್ಯೋಗಿಗಳು ಕಂಪನಿಗೆ ಮರಳುವ ಮೊದಲು ಕೋವಿಡ್‌ನ ಬೂಸ್ಟರ್ ಡೋಸ್ ಪಡೆಯುವುದು ಅಗತ್ಯ ಎಂದು ಸೂಚನೆ ನೀಡಿದೆ. ಮೆಟಾ ಕೆಲ ಉದ್ಯೋಗಿಗಳಿಗೆ ಶಾಶ್ವತವಾಗಿ ವರ್ಕ್ ಫ್ರಂ ಹೋಮ್‌ಗೆ ಅವಕಾಶವನ್ನೂ ನೀಡಿದೆ.