ನವದೆಹಲಿ: ಯಾವುದೇ ಜಾಹಿರಾತನ್ನು ಪ್ರಕಟಿಸದೇ ಮೆಸೇಂಜಿಂಗ್ ಅಪ್ಲಿಕೇಶನ್ ವಾಟ್ಸಪ್ 6.84 ಕೋಟಿ ರೂ. ಆದಾಯ ಗಳಿಸಿದೆ.
ರಿಜಿಸ್ಟ್ರಾರ್ ಆಫ್ ಕಂಪನಿಗೆ ವಾಟ್ಸಪ್ ಸಲ್ಲಿಸಿರುವ ದಾಖಲಾತಿಗಳ ಪ್ರಕಾರ, 2019 ರಲ್ಲಿ ಕಂಪನಿ 6.84 ಕೋಟಿ ರೂ. ಆದಾಯ ಮತ್ತು 57 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. 2018ರ ಹಣಕಾಸು ವರ್ಷದಲ್ಲಿ ವಾಟ್ಸಪ್ ಯಾವುದೇ ಆದಾಯಗಳಿಸದೇ 5 ಲಕ್ಷ ರೂ. ನಷ್ಟ ಅನುಭವಿಸಿತ್ತು.
Advertisement
Advertisement
ವಾಟ್ಸಪ್ ಒಟ್ಟು ಹಣಕಾಸು ವರ್ಷದಲ್ಲಿ ವ್ಯವಹಾರ ನಡೆಸಲು 5.99 ಕೋಟಿ ರೂ. ಖರ್ಚು ಮಾಡಿದೆ. ಇದರಲ್ಲಿ 3.43 ಕೋಟಿ ರೂ. ಹಣವನ್ನು ಉದ್ಯೋಗಿಗಳ ಸಂಬಳಕ್ಕೆ ಖರ್ಚು ಮಾಡಿದರೆ 1.3 ಕೋಟಿ ರೂ. ಹಣವನ್ನು ಪ್ರಚಾರಕ್ಕೆ ವಿನಿಯೋಗಿಸಿದೆ. ಇದನ್ನೂ ಓದಿ: ವಾಟ್ಸಪ್ ಯೂ ಟರ್ನ್ – ಇನ್ನು ಮುಂದೆ ಬರುತ್ತೆ ಜಾಹೀರಾತು!
Advertisement
ಆದಾಯಗಳಿಸಿದ್ದು ಹೇಗೆ?
ವಾಟ್ಸಪ್‍ನಲ್ಲಿ ಯಾವುದೇ ಜಾಹೀರಾತು ಪ್ರಕಟಗೊಳ್ಳುವುದಿಲ್ಲ. ಆದರೆ ಭಾರತದಲ್ಲಿ ತನ್ನ ಬಿಸಿನೆಸ್ ಆಪ್ ಮೂಲಕ ಆದಾಯಗಳಿಸಿದೆ. 15 ತಿಂಗಳ ಹಿಂದೆ ವಾಟ್ಸಪ್ ಈ ಅಪ್ಲಿಕೇಶನ್ ಬಿಡುಗಡೆ ಮಾಡಿತ್ತು. ವಿಶ್ವದಲ್ಲಿ ಒಟ್ಟು 50 ಲಕ್ಷ ಮಂದಿ ಬಿಸಿನೆಸ್ ಆ್ಯಪ್ ಬಳಸುತ್ತಿದ್ದರೆ ಭಾರತದಲ್ಲಿ ಒಟ್ಟು 10 ಲಕ್ಷಕ್ಕೂ ಹೆಚ್ಚು ಮಂದಿ ಬಿಸಿನೆಸ್ ಆ್ಯಪ್ ಬಳಸುತ್ತಿದ್ದಾರೆ. ಭಾರತದಲ್ಲಿ ಒಟ್ಟು 40 ಕೋಟಿ ಜನ ವಾಟ್ಸಪ್ ಬಳಸುತ್ತಿದ್ದಾರೆ.