ವಾಷಿಂಗ್ಟನ್: ಭಾರತ ಇದೀಗ 75ನೇ ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದು, ದೇಶ ವಿದೇಶಗಳಿಂದ ಶುಭಹಾರೈಕೆಯ ಸಂದೇಶಗಳು ಬರುತ್ತಲೇ ಇವೆ. ಆದರೆ ಈ ಒಂದು ಸಂದೇಶ ಬಾಹ್ಯಾಕಾಶದಿಂದ ಬಂದಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಗನಯಾತ್ರಿ ಸಮಂತಾ ಕ್ರಿಸ್ಟೋಫೋರೆಟ್ಟಿ ಭಾರತ ಆಚರಿಸುತ್ತಿರುವ ಐತಿಹಾಸಿಕ ಕ್ಷಣಕ್ಕೆ ಅಭಿನಂದಿಸಿದ್ದಾರೆ.
ವೀಡಿಯೋ ಸಂದೇಶದಲ್ಲಿ ಮಾತನಾಡಿದ ಗಗನಯಾತ್ರಿ, ಭಾರತದ 75ನೇ ವರ್ಷದ ಸ್ವಾತಂತ್ರ‍್ಯಕ್ಕೆ ಅಭಿನಂದಿಸಲು ಸಂತೋಷವಾಗಿದೆ. ದಶಕಗಳಿಂದ ಅಂತಾರಾಷ್ಟ್ರೀಯ ಏಜೆನ್ಸಿಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜೊತೆಗೆ ಅನೇಕ ಬಾಹ್ಯಾಕಾಶ ಮತ್ತು ವಿಜ್ಞಾನ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಿದೆ ಎಂದು ಹೇಳಿದರು.
Advertisement
Thank you @NASA, @esa, and all the partners of the International Space Station???? @Space_Station for the wishes on #AzadiKaAmritMahotsav ???????? pic.twitter.com/2r0xuwdSQ4
— ISRO (@isro) August 13, 2022
Advertisement
ನಾಸಾ ಮತ್ತು ಇಸ್ರೋ ಜಂಟಿಯಾಗಿ ಅಭಿವೃದ್ಧಿ ಪಡಿಸುತ್ತಿರುವ ಸಾರ್ ಮಿಷನ್ ಬಗ್ಗೆ ಮಾತನಾಡಿದ ಸಮಂತಾ, ಇಸ್ರೋ ಮುಂಬರುವ ಎನ್‌ಐಎಸ್‌ಎಆರ್ ಅರ್ಥ್ ಸೈನ್ಸ್ ಮಿಷನ್‌ನ ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತಿದೆ. ಭಾರತ ತನ್ನ ಸಹಕಾರ ನೀಡುವುದನ್ನು ಇಂದಿಗೂ ಮುಂದುವರೆಸಿದೆ. ನಮಗೆ ವಿಪತ್ತುಗಳನ್ನು ಪತ್ತೆಹಚ್ಚಲು ಹಾಗೂ ಬದಲಾಗುತ್ತಿರುವ ಹವಾಮಾನದ ಬಗ್ಗೆ ಮಾಹಿತಿ ಪಡೆಯಲು ಸಹಾಯ ಮಾಡುತ್ತಿದೆ ಎಂದರು. ಇದನ್ನೂ ಓದಿ: ದೇಶದ ಅಭಿವೃದ್ಧಿಗಾಗಿ ಶ್ರಮಿಸೋಣ: ಥಾವರ್ ಚಂದ್ ಗೆಹ್ಲೋಟ್
Advertisement
ಗಗನ್‌ಯಾನ್ ಮಿಷನ್ ಬಗ್ಗೆ ಮಾತನಾಡಿ, ಇದು ಮುಂದಿನ ವರ್ಷ ತನ್ನ ಮೊದಲ ಸಿಬ್ಬಂದಿರಹಿತ ಕಕ್ಷೆಯ ಹಾರಾಟವನ್ನು ನಡೆಸುವ ಸಾಧ್ಯತೆಯಿದೆ. ನಾಸಾ, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಹಾಗೂ ಇತರ ಎಲ್ಲಾ ಏಜೆನ್ಸಿಗಳ ಪರವಾಗಿ, ಇಸ್ರೋ ಗಗನ್‌ಯಾನ್ ಮಿಷನ್‌ಗೆ ಶುಭ ಹಾರೈಸುತ್ತೇನೆ ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ.
Advertisement
ಇಸ್ರೋ ಜೊತೆಗಿನ ಪಾಲುದಾರಿಕೆಯನ್ನು ವಿಸ್ತರಿಸುವುದು ಹಾಗೂ ಬ್ರಹ್ಮಾಂಡವನ್ನು ಒಟ್ಟಾಗಿ ಅನ್ವೇಷಿಸುವುದು ನಮ್ಮೆಲ್ಲರ ಹಾಗೂ ಭವಿಷ್ಯದ ಬಾಹ್ಯಾಕಾಶ ಪರಿಶೋಧನೆಯ ಗುರಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಆ.15ಕ್ಕೆ ಓಲಾ ಎಲೆಕ್ಟ್ರಿಕ್ ಕಾರು ಬಿಡುಗಡೆ?
ಭಾರತ ಗಗನ್‌ಯಾನ್ ಮಿಷನ್ ಪರೀಕ್ಷಿಸಲು ಅಂತಿಮ ಹಂತದ ತಯಾರಿಯಲ್ಲಿದೆ.