AutomobileLatestMain PostNational

ಆ.15ಕ್ಕೆ ಓಲಾ ಎಲೆಕ್ಟ್ರಿಕ್‌ ಕಾರು ಬಿಡುಗಡೆ?

ನವದೆಹಲಿ: ಬೆಂಗಳೂರು ಮೂಲದ ಎಲೆಕ್ಟ್ರಿಕ್‌ ವಾಹನ ತಯಾರಿಕಾ ಸಂಸ್ಥೆ ಓಲಾ ಸ್ವಾತಂತ್ರ್ಯ ದಿನಾಚರಣೆಯಂದು ಎಲೆಕ್ಟ್ರಿಕ್‌ ಕಾರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಓಲಾ ಕಂಪನಿ ಸಿಇಒ ಭವೀಶ್‌ ಅಗರ್‌ವಾಲ್‌ ಟ್ವೀಟ್‌ ಮಾಡಿ, ಸ್ನೇಹಿತರೇ ಸಿನಿಮಾ ಇನ್ನೂ ಬಾಕಿ ಇದೆ. ಆ.15ರ ಮಧ್ಯಾಹ್ನ 2 ಗಂಟೆಗೆ ಭೇಟಿಯಾಗೋಣ ಎಂದು ಕಾರ್ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ವೀಡಿಯೋದಲ್ಲಿ ಕೆಂಪು ಕಾರು ರಸ್ತೆಯಲ್ಲಿ ಸಂಚರಿಸುತ್ತಿದ್ದು, ಹಿಂದುಗಡೆ ಚಕ್ರ ಮಾತ್ರ ಕಾಣುತ್ತಿದೆ. ಓಲಾ ಕಂಪನಿ ಈಗಾಗಲೇ ಎಲೆಕ್ಟ್ರಿಕ್‌ ಸ್ಕೂಟರ್ ಬಿಡುಗಡೆ ಮಾಡಿದೆ. ಈಗ ಕಾರು ಬಿಡುಗಡೆ ಮಾಡಿದರೆ ಎಲೆಕ್ಟ್ರಿಕ್‌ ಕಾರುಗಳ ಮಧ್ಯೆ ಮತ್ತಷ್ಟು ಸ್ಪರ್ಧೆ ನಡೆಯಲಿದೆ.

Live Tv

Leave a Reply

Your email address will not be published.

Back to top button