BelgaumKarnatakaLatestMain Post

ಮರಾಠಿ ಬೋರ್ಡ್ ಹಾಕಿ ಇಲ್ಲದಿದ್ದರೆ ಕನ್ನಡ ನಾಮಫಲಕ ಇರಲ್ಲ ಎಂದು MES ಪುಂಡಾಟ – ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು

ಬೆಳಗಾವಿ: ಜೂ. 27ರೊಳಗಾಗಿ ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕಬೇಕು. ಇಲ್ಲದಿದ್ದರೆ ಒಂದೇ ಒಂದು ಕನ್ನಡ ಬೋರ್ಡ್ ಇರಲು ಬಿಡುವುದಿಲ್ಲ ಎಂದು ಪೋಸ್ಟ್ ಹಾಕಿದ್ದ ಎಂಇಎಸ್ ಪುಂಡನನ್ನು ಪೊಲೀಸರು ಬಂಧಿಸಿದ್ದಾರೆ.

KANNADA FLAG

ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಪದೇ ಪದೇ ಗಡಿ – ಭಾಷಾ ವಿಚಾರ ಇಟ್ಟುಕೊಂಡು ಕನ್ನಡಿಗರು ಮತ್ತು ಮರಾಠಿಗರ ಭಾವನೆಗೆ ದಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಎಂಇಎಸ್ ಪುಂಡರು ಸಾಮಾಜಿಕ ಜಾಲತಾಣದಲ್ಲಿ ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕಬೇಕು. ಇಲ್ಲದಿದ್ದರೆ ಒಂದೇ ಒಂದು ಕನ್ನಡ ಬೋರ್ಡ್ ಇರಲು ಬಿಡುವುದಿಲ್ಲ ಇದು ನಮ್ಮ ಮನವಿ ಅಲ್ಲ ಎಚ್ಚರಿಕೆ ಎಂದು ಪೋಸ್ಟ್ ಮಾಡಿದ್ದ. ಇದನ್ನೂ ಓದಿ: ಸತೀಶ್ ಪಾಟೀಲ್ ಹತ್ಯೆಗೆ ಪೊಲೀಸರ ವೈಫಲ್ಯವೇ ಕಾರಣ: ಸತೀಶ್ ಜಾರಕಿಹೊಳಿ

ಈ ಕುರಿತು ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಿಸಿಕೊಂಡ ಪೊಲೀಸರು ರಾಯಲ್ ಬೆಳಗಾವಕರ್ ಎಂಬ ಹೆಸರಿನ ಖಾತೆದಾರನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಇನ್‍ಸ್ಟಾಗ್ರಾಂನಲ್ಲಿ ಕನ್ನಡಿಗರಿಗೆ, ಕರ್ನಾಟಕ ಸರ್ಕಾರಕ್ಕೆ ಬೆದರಿಕೆ ಹಾಕಿದ್ದ ಎಂದು ಪೊಲೀಸರು ಸ್ವಯಂ ಪೇರಿತ ಕೇಸ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಕ್ರಮ ಸಂಬಂಧ ಶಂಕೆ – 5 ಮಕ್ಕಳ ತಾಯಿಯನ್ನೇ ಹತ್ಯೆಗೈದ ತಂದೆ

Live Tv

Leave a Reply

Your email address will not be published.

Back to top button