ಬೆಳಗಾವಿ: ಎಂಇಎಸ್ ಮುಖಂಡನ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗಾವಿ ಬಂದ್‍ಗೆ ಎಂಇಎಸ್ ಕರೆ ನೀಡಿದೆ.
- Advertisement 2-
ಎಂಇಎಸ್ ಮಾಜಿ ಶಾಸಕ ಮನೋಹರ್ ಕಿಣೇಕರ್ ಬಂದ್‍ಗೆ ಕರೆ ನೀಡಿದ್ದು, ಘಟನೆಯನ್ನು ಮಹಾರಾಷ್ಟ್ರ ನಾಯಕರ ಗಮನಕ್ಕೆ ತರಲು ನಿರ್ಧರಿಸಿದ್ದೇವೆ. ಈ ವಿಚಾರವನ್ನು ಶಿವಸೇನೆ, ಎನ್.ಸಿ.ಪಿ ಹಾಗೂ ಕಾಂಗ್ರೆಸ್ ನಾಯಕರ ಗಮನಕ್ಕೆ ತರಲು ನಿರ್ಧರಿಸಲಾಗಿದೆ ಎಂದರು. ಮಹಾಮೇಳಾವ್ ಮುಗಿದ ಬಳಿಕ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ಎಂಇಎಸ್ ಮುಖಂಡರು ನಿರ್ಧರಿಸಿದ್ದಾರೆ.
- Advertisement 3-
- Advertisement 4-
ಅಲ್ಲದೆ ನಾಳೆಯ ಬಂದ್ ಯಶಸ್ವಿ ಮಾಡಲು ಕಾರ್ಯಕರ್ತರಿಗೆ ಕರೆ ನೀಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಆಧಾರದ ಮೇಲೆ ಮಹಾಮೇಳಾವ್ ಆಚರಣೆ ಮಾಡುತ್ತಿದ್ದೇವೆ. ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ತಿರುಗೇಟು ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕನ್ನಡ ಕಾರ್ಯಕರ್ತರಿಂದ MES ಮುಖಂಡನ ಮುಖಕ್ಕೆ ಮಸಿ
ಬಂದ್‍ಗೆ ಅವಕಾಶ ನೀಡಲ್ಲ: ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಎಂಇಎಸ್‍ನವರ ಮಹಾಮೇಳಾವ್ ಆಯೋಜನೆಗೆ ಅನುಮತಿ ನೀಡಿರಲಿಲ್ಲ ಎಂದರು.
ಚಳಿಗಾಲದ ಅಧಿವೇಶನ ಇರುವ ಹಿನ್ನೆಲೆಯಲ್ಲಿ ನಾಳೆ ಬೆಳಗಾವಿ ಬಂದ್‍ಗೆ ನಾವು ಅವಕಾಶ ನೀಡಲ್ಲ. ಬಂದ್‍ಗೆ ಕರೆ ನೀಡಿದವರ ಜೊತೆ ಮಾತನಾಡಿ ಮನವೊಲಿಸುತ್ತೇವೆ. ನಮ್ಮಲ್ಲಿ ಸಿಬ್ಬಂದಿ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ತವರು ಜಿಲ್ಲೆಯ ಅಧಿವೇಶನಕ್ಕೂ ಬರಲಿಲ್ಲ ರಮೇಶ್ ಜಾರಕಿಹೊಳಿ!
ಮಹಾನಗರ ಪಾಲಿಕೆ ಸಿಬ್ಬಂದಿಗೆ ಎಂಇಎಸ್ ಮುಖಂಡರ ಆವಾಜ್ ಹಾಕಿರುವ ಬಗ್ಗೆ ಮಹಾನಗರ ಪಾಲಿಕೆ ಸಿಬ್ಬಂದಿ ದೂರು ನೀಡಿದ್ರೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.