ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಕರ್ನಾಟಕ ಸಾರಿಗೆ ಬಸ್‍ಗಳನ್ನ ತಡೆದು ಮಹಾರಾಷ್ಟ್ರ ಎಂದು ನಾಮಫಲಕ ಹಾಕಿ ಚಾಲಕರಿಗೆ ಧಮ್ಕಿ ಹಾಕಿದ್ದಾರೆ.
Advertisement
ಈ ಘಟನೆಯಿಂದ ಬೆಳಗಾವಿ ಮಹಾರಾಷ್ಟ್ರ ಸಂಚಾರ ಸಾರಿಗೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಹಾರಾಷ್ಟ್ರ ಪೊಲೀಸರ ಎದುರೇ ಶಿವಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಕರ್ನಾಟಕ ಸರ್ಕಾರವನ್ನು ತಲೆ ಕೆಳಗೆ ಕಾಲು ಮೇಲೆ ಮಾಡುತ್ತೇವೆ. ಮಹಾರಾಷ್ಟ್ರದಲ್ಲಿ ಎಂದಾದ್ರೂ ಶಾಂತಿಭಂಗವಾದರೆ ಅದಕ್ಕೆ ಕರ್ನಾಟಕ ಸರ್ಕಾರವೇ ಕಾರಣ ಎಂದು ಘೋಷಣೆ ಕೂಗಿದ್ದಾರೆ.
Advertisement
Advertisement
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಸಂಘಟನೆಯವರು ಕರ್ನಾಟಕ ವಿರೋಧಿ ಹೇಳಿಕೆ ನೀಡಿದ್ದಾರೆ. ಮಾಜಿ ಮೇಯರ್ ಸರೀತಾ ಪಾಟೀಲ್ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯೆ ಸರಸ್ವತಿ ಮತ್ತೆ ನಾಡ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ.
Advertisement
ಕೆಲವು ದಿನಗಳ ಹಿಂದೆ ಸಚಿವ ರೋಷನ್ ಬೇಗ್ ಪಾಲಿಕೆಯಲ್ಲಿ ನಾಡವಿರೋಧಿ ಚಟುವಟಿಕೆ ನಡೆಸಿದರೆ ಸದಸ್ಯತ್ವ ರದ್ದು ಮಾಡುವುದಾಗಿ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ನಾಯಕಿಯರು ರಾಜ್ಯ ಸರ್ಕಾರ ಸದಸ್ಯತ್ವ ರದ್ದು ಮಾಡಿದ್ರೂ ನಾವು ಜೈ ಮಹಾರಾಷ್ಟ್ರ ಅಂತಲೇ ಹೇಳುತ್ತೇವೆ. ನಾವು ಮಹಾರಾಷ್ಟ್ರದವರು ನಮ್ಮ ರಕ್ತ ಹರಿದರೂ ಚಿಂತೆಯಿಲ್ಲ ಜೈ ಮಹಾರಾಷ್ಟ್ರ ಅಂತಲೇ ಹೇಳುತ್ತೇವೆ ಅನ್ನುವ ಮೂಲಕ ಪುಂಡಾಟಿಕೆ ಮೆರೆದಿದ್ದಾರೆ. ಈ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟಿದ್ದು, ಈಗ ಇದು ವೈರಲ್ ಆಗಿದೆ.