ಬೆಳಗಾವಿ: ನಾಡದ್ರೋಹಿ ಎಂಇಎಸ್‍ನಿಂದ (MES) ಮತ್ತೆ ಗಡಿ ಖ್ಯಾತೆ ಆರಂಭವಾಗಿದ್ದು, ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು (Kannada Rajyotsava) ಎಂಇಎಸ್ ಮುಖಂಡರು ಕರಾಳ ದಿನಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನಾಡದ್ರೋಹಿಗಳು ಕರಾಳ ದಿನ ಆಚರಿಸುವ ಕುರಿತಾಗಿ ಪೋಸ್ಟ್ ಹಾಕಿದ್ದಾರೆ.
Advertisement
ನವೆಂಬರ್ 1ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಅದರಲ್ಲೂ ಕುಂದಾನಗರಿ ಬೆಳಗಾವಿಯಲ್ಲಿ (Belagavi) ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ರಾಜ್ಯದ ಮೂಲೆಮೂಲೆಗಳಿಂದ ಕನ್ನಡ ರಾಜ್ಯೋತ್ಸವ ನೋಡಲು ಜನರು ಬೆಳಗಾವಿಗೆ ಆಗಮಿಸುತ್ತಾರೆ. ಆದ್ರೆ, ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಎಂಇಎಸ್ ಮುಂದಾಗಿದೆ. ಚಳಿಗಾಲದ ಅಧಿವೇಶನದ ಮೊದಲ ದಿನವೇ ಮಹಾಮೇಳಾವ್ ನಡೆಯಲು ಸಿದ್ಧತೆ ಹಾಗೂ ನವೆಂಬರ್ 1 ರಂದು ಎಂಇಎಸ್‍ನಿಂದ ಕರಾಳ ದಿನಕ್ಕೆ ನಡೆಸಲು ಉದ್ದೇಶಿಸಲಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನಾಡದ್ರೋಹಿಗಳು ಕರಾಳ ದಿನದ ಬಗ್ಗೆ ಪೋಸ್ಟ್ ಹಾಕುತ್ತಿದ್ದಾರೆ. ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಫೇಸ್‍ಬುಕ್ ಪೇಜ್‍ನಲ್ಲಿ ನಾಡದ್ರೋಹಿಗಳಿಂದ ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಬಸವಲಿಂಗ ಶ್ರೀ ವೀಡಿಯೋ ಕಾಲ್ ವೈರಲ್- ಮೂವರು ಮಹಿಳೆಯರ ಪ್ರತ್ಯೇಕ ವಿಚಾರಣೆ
Advertisement
Advertisement
ಇದಲ್ಲದೇ ಡಿಸೆಂಬರ್‌ನಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಚಳಿಗಾಲ ಅಧಿವೇಶನದ ಮೊದಲ ದಿನವೇ ಮಹಾಮೇಳಾವ್ ಮಾಡಲು ಎಂಇಎಸ್ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಅಧಿವೇಶನದ ಸಂದರ್ಭದಲ್ಲಿ ಗಡಿ ಖ್ಯಾತೆ ತೆಗೆಯಲು ಎಂಇಎಸ್ ಪ್ಲಾನ್ ಮಾಡಿಕೊಂಡಿದೆ. ಚುನಾವಣಾ ವರ್ಷ ಆಗಿದ್ದರಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹುನ್ನಾರ ನಡೆಸಲಾಗುತ್ತಿದೆ. ಎಂಇಎಸ್‍ನ ಮಾಜಿ ಶಾಸಕ ಮನೋಹರ ಕಿಣೇಕರ ನೇತೃತ್ವದ ಎಂಇಎಸ್ ಮುಖಂಡರಿಂದ ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಾಗಿದೆ. ಇದನ್ನೂ ಓದಿ: ವೀರಗಾಸೆ, ಕರಗ ವಿವಾದ : ಕ್ಷಮೆ ಕೇಳಿದ ‘ಹೆಡ್ ಬುಷ್’ ಸಿನಿಮಾ ತಂಡ
Advertisement
ಕಳೆದ ಹಲವಾರು ವರ್ಷಗಳಿಂದ ಎಂಇಎಸ್‍ನವರು ಕರಾಳ ದಿನಾಚರಣೆ, ಮಹಾಮೇಳಾವ್ ನಡೆಸುತ್ತಿದ್ದರು. ಈವರೆಗೂ ಯಾವುದೇ ಸರ್ಕಾರ ಕೂಡ ಬ್ರೇಕ್ ಹಾಕಿಲ್ಲ. ಈ ಬಾರಿಯಾದರೂ ರಾಜ್ಯ ಸರ್ಕಾರ ಬ್ರೇಕ್ ಹಾಕುತ್ತಾ ಕಾದು ನೋಡಬೇಕಿದೆ. ಪ್ರತಿವರ್ಷವೂ ರಾಜ್ಯೋತ್ಸವ, ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಎಂಇಎಸ್‍ನಿಂದ ಪುಂಡಾಟ ಪ್ರದರ್ಶನ ಮಾಡುತ್ತಿದೆ.