ರಾಜ್‍ಕೋಟ್: ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ತನ್ನ ಇಬ್ಬರು ಹೆಣ್ಣುಮಕ್ಕಳು ಹಾಗೂ ಅತ್ತೆ ಮಾವನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ತಾನೂ ಅತ್ಮಹತ್ಯೆಗೆ ಶರಣಾಗಿರುವ ಘಟನೆ ಗುಜರಾತ್‍ನ ರಾಜ್‍ಕೋಟ್‍ನಲ್ಲಿ ನಡೆದಿದೆ.
30 ವರ್ಷದ ಭಾವನಾ ಪರ್ಮರ್ ತನ್ನ ನಾಲ್ವರು ಕುಟುಂಬಸ್ಥರನ್ನು ಕೊಲ್ಲಲು ಯತ್ನಿಸಿದ ಮಹಿಳೆ. ಇಲ್ಲಿನ ಭೀಮ್‍ನಗರನಲ್ಲಿನ ಮನೆಯಲ್ಲಿ ಶುಕ್ರವಾರದಂದು ಎಲ್ಲರೂ ಮಲಗಿದ್ದ ವೇಳೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದು, ನಂತರ ತಾನೂ ಬೆಂಕಿ ಹಂಚಿಕೊಂಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.
Advertisement
ಭಾವನಾ ಹಾಗೂ ಆಕೆಯ ಪುತ್ರಿಯರಾದ 11 ವರ್ಷದ ಜ್ಯೋತಿ, 9 ವರ್ಷದ ನಿಕಿತಾ, ಅತ್ತೆ ನಂದುಬೆನ್(55) ಮಾವ ಮೇರುಭಾಯ್(60) ಎಲ್ಲರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಭಾವನಾ ಸಾವನ್ನಪ್ಪಿದ್ದು, ಉಳಿದ ನಾಲ್ವರಿಗೆ ಸುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಭಾವನಾ ಮಾನಸಿಕ ಅಸ್ವಸ್ಥರಾಗಿದ್ದು, ಮನೋವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಸಬ್ ಇನ್ಸ್ ಪೆಕ್ಟರ್ ಎಸ್‍ಆರ್ ವಾರು ಹೇಳಿದ್ದಾರೆ.
Advertisement
ಕೋಣೆಯೊಂದರಲ್ಲಿ ಮಲಗಿದ್ದ ನಾಲ್ವರ ಮೇಲೆ ಸೀಮೆಎಣ್ಣೆ ಸುರಿದು ನಂತರ ತಾನೂ ಸೀಮೆಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಮಹಿಳೆಯ ಪತಿ ರಾಜೇಶ್ ಪರ್ಮರ್ ತನ್ನ 5 ವರ್ಷದ ಮಗಳೊಂದಿಗೆ ಪಕ್ಕದ ಕೋಣೆಯಲ್ಲಿ ಮಲಗಿದ್ದರು. ಅವರು ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಭಾವನಾ ಸಾವನ್ನಪ್ಪಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.