ಋತುಚಕ್ರದಿಂದಾಗಿ (Period) ಮಹಿಳೆಯರಿಗೆ ದೈನಂದಿನ ಚಟುವಟಿಕೆಯಲ್ಲಿ ಅನೇಕ ತೊಡಕುಗಳು ಉಂಟಾಗುತ್ತದೆ. ಅಷ್ಟೇ ಅಲ್ಲದೇ ಹೊಟ್ಟೆ ನೋವು, ಬೆನ್ನು ನೋವು ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಈ ಸಂದರ್ಭದಲ್ಲಿ ಕೆಲವು ಸುಲಭ ಮನೆ ಮದ್ದುಗಳು (Home Remedies) ಇಲ್ಲಿವೆ.
ಹೊಟ್ಟೆಗೆ ಶಾಖ ಕೊಡಿ: ಬಿಸಿ ನೀರಿನ ಬಾಟಲಿ ಅಥವಾ ವಾಟರ್ ಬ್ಯಾಗ್ (Water Bag) ಅನ್ನು ಹೊಟ್ಟೆಯ ಮೇಲೆ ಇಟ್ಟುಕೊಳ್ಳುವುದರಿಂದ ಸ್ನಾಯುಗಳಿಗೆ ವಿಶ್ರಾಂತಿ ದೊರೆಕಿದ ಹಾಗಾಗುತ್ತದೆ. ಜೊತೆಗೆ ನಿಮಗೆ ಬೆನ್ನು ಹಾಗೂ ಸೊಂಟ ನೋವು ಸೇರಿದಂತೆ ಎಲ್ಲೆಲ್ಲಿ ನೋವು ಇರುತ್ತದೆಯೋ ಅಲ್ಲಿ ಸುಮಾರು 30 ನಿಮಿಷಗಳ ಕಾಲ ಶಾಖ ನೀಡಿ ಇದರಿಂದಾಗಿ ಸ್ನಾಯು ಸೆಳೆತವನ್ನು ಕಡಿಮೆ ಮಾಡಬಹುದು.
Advertisement
Advertisement
ಹೆಚ್ಚು ನೀರು ಕುಡಿಯಿರಿ: ಋತುಚಕ್ರದ ಸಮಯದಲ್ಲಿ ಹೆಚ್ಚು ನೀರು ಕುಡಿಯಿರಿ. ಇದರಿಂದಾಗಿ ದೇಹವು ನಿರ್ಜಲೀಕರಣಗೊಳ್ಳುವುದನ್ನು ತಡೆಯಬಹುದು. ನೀರನ್ನು ಕಡಿಮೆ ಕುಡಿಯುವುದರಿಂದ ದೈಹಿಕ ಹಾಗೂ ಮಾನಸಿಕ ಒತ್ತಡವು ಹೆಚ್ಚಾಗಬಹುದು.
Advertisement
Advertisement
ಹೊಟ್ಟೆಗೆ ಮಸಾಜ್ ಮಾಡಿ: ಋತುಚಕ್ರದ ಸಮಯದಲ್ಲಿ ಹೊಟ್ಟೆಯನ್ನು ಮಸಾಜ್ ಮಾಡುವುದು ಒಳ್ಳೆಯದು. ಇದರಿಂದಾಗಿ ಉತ್ತಮ ಪರಿಹಾರವನ್ನು ಕಾಣಬಹುದು. ಕಿಬ್ಬೊಟ್ಟೆಯ ಮಸಾಜ್ಗಾಗಿ ಹರಳೆಣ್ಣೆಯನ್ನು ಹಚ್ಚಿ ಮಸಾಜ್ ಮಾಡಬೇಕು. ಹೀಗೆ ಮುಟ್ಟಿನ ಸಮಯದಲ್ಲಿ ಮಾಡುವುದರಿಂದ ಅನೇಕ ರೀತಿಯ ಪ್ರಯೋಜನವನ್ನು ಕಾಣಬಹುದು.
ಇಂಗು ಮತ್ತು ತುಪ್ಪ: ಋತುಚಕ್ರದ ಸಮಯದಲ್ಲಿ ಇಂಗು ಸ್ವಲ್ಪ ಬಳಕೆ ಮಾಡಿದರೇ ಹೊಟ್ಟೆ ನೋವು ಕಡಿಮೆ ಆಗುತ್ತದೆ. ಒಂದು ಸಣ್ಣ ಸೌಟು ಅಥವಾ ಒಗ್ಗರಣೆ ಮಾಡುವ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ 1 ಚಮಚ ತುಪ್ಪ ಹಾಕಿ, 2 ಚಿಟಿಕೆ ಇಂಗು ಹಾಕಿ ಚೆನ್ನಾಗಿ ಫ್ರೈ ಮಾಡಿ. 2 ನಿಮಿಷ ಅದನ್ನು ಮಿಕ್ಸ್ ಮಾಡಿದ ನಂತರ ತಣ್ಣಗಾದ ಮೇಲೆ ತಿಂದರೆ ನಿಮ್ಮ ಹೊಟ್ಟೆ ನೋವಿಗೆ ಬೈ ಬೈ ಹೇಳಬಹುದು. ಇದನ್ನೂ ಓದಿ: ಆರೋಗ್ಯ ಹೆಚ್ಚಿಸುವ ಬೆಟ್ಟದ ನೆಲ್ಲಿಕಾಯಿ
ಶುಂಠಿ ಟೀ: ಶುಂಠಿ ಟೀ ಅಥವಾ ಶುಂಠಿ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಮುಟ್ಟು ವಿಳಂಬವಾಗುವುದನ್ನು ತಡೆಯಬಹುದು. ಹಾಗೆಯೇ ಸ್ನಾಯು ಸೆಳೆತವನ್ನು ತಡೆಯುತ್ತದೆ. ದೇಹದ ಆಂತರಿಕ ಅಂಗಗಳ ಉರಿಯೂತವು ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಸಂಭವಿಸುತ್ತದೆ. ಅದನ್ನು ಸರಿಪಡಿಸಲು ಇದು ಉಪಯುಕ್ತವಾಗಿದೆ. ಒಂದು ಕಪ್ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ಕತ್ತರಿಸಿದ ಶುಂಠಿ ತುಂಡುಗಳನ್ನು ಹಾಕಿ ಕುದಿಸಿ ಸೋಸಿ ಕುಡಿಯಿರಿ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k