– 2023ರಲ್ಲಿ ಭಾರತದಲ್ಲಿ 1,200 ಕೋಟಿ ರೂ. ಪಾಕ್ ಕಾರ್ನ್ ಸೇಲ್
– 2024ರಲ್ಲಿ ವಿಶ್ವಾದ್ಯಂತ 8 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ವ್ಯಾಪಾರ
ಜೈಪುರ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ನೇತೃತ್ವದಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆದ 55ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ, ಪಾಪ್ ಕಾರ್ನ್ (Popcorn) ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ ತೆರಿಗೆ ವಿಚಾರದಲ್ಲಿ ಹಲವು ಬದಲಾವಣೆ ಮಾಡುವ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ.
Advertisement
ರುಚಿಗೆ ಅನುಗುಣವಾಗಿ ಜಿಎಸ್‌ಟಿಯ (GST On Popcorn) ವಿವಿಧ ಸ್ಲ್ಯಾಬ್‌ಗಳಲ್ಲಿ ಪಾಪ್‌ಕಾರ್ನ್ ಅನ್ನು ಸೇರಿಸುವ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಇದರಿಂದ ಚಿತ್ರಮಂದಿರಗಳಲ್ಲಿ ಪಾಪ್ ಕಾರ್ನ್ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಇದನ್ನೂ ಓದಿ: Maharashtra | ನೂತನ ಸಚಿವರಿಗೆ ಖಾತೆ ಹಂಚಿಕೆ, ಗೃಹಖಾತೆ ತನ್ನಲ್ಲೇ ಉಳಿಸಿಕೊಂಡ ಬಿಜೆಪಿ – ಇಲ್ಲಿದೆ ಕಂಪ್ಲೀಟ್ ಲಿಸ್ಟ್!
Advertisement
ಹೌದು. ಶನಿವಾರ ನಡೆದ 55ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ (GST Council Meet), ಪಾಪ್ ಕಾರ್ನ್‌ಮೇಲೆ ಒಂದಲ್ಲ ಮೂರು ರೀತಿಯ ಜಿಎಸ್‌ಟಿ ದರಗಳನ್ನ ವಿಧಿಸಲು ಕೌನ್ಸಿಲ್ ಸೂಚಿಸಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಪಾಪ್ ಕಾರ್ನ್‌ಗಳನ್ನು ರುಚಿಗೆ ತಕ್ಕಂತೆ ವರ್ಗೀಕರಿಸಿ ವಿವಿಧ ಸ್ಲ್ಯಾಬ್‌ಗಳಲ್ಲಿ ತೆರಿಗೆಯನ್ನು ವಿಧಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು – ಪುಣೆ ದಶಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅತಿ ಶೀಘ್ರ: ಟಿ.ಬಿ ಜಯಚಂದ್ರ
Advertisement
Advertisement
ಯಾವುದು ಹಗ್ಗ? ಯಾವುದು ದುಬಾರಿ?
ಪಾಪ್ ಕಾರ್ನ್ ಮೇಲೆ ಜಿಎಸ್‌ಟಿ ವಿಧಿಸುವ ಪ್ರಸ್ತಾವನೆಗೆ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಅದರಂತೆ ಪಾಪ್‌ಕಾರ್ನ್ ಸೇರಿದಂತೆ ಮೊದಲೇ ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಿದ ರೆಡಿ-ಟು-ಈಟ್ ತಿಂಡಿಗಳು 12% ಜಿಎಸ್‌ಟಿಗೆ ಒಳಪಟ್ಟಿರುತ್ತವೆ. ಏತನ್ಮಧ್ಯೆ, ಕ್ಯಾರಮೆಲೈಸ್ಡ್ ಪಾಪ್‌ಕಾರ್ನ್ (ಸಕ್ಕರೆಯಿಂದ ತಯಾರಿಸಿದ ಪಾಪ್ ಕಾರ್ನ್) ಮೇಲೆ 18% ಜಿಎಸ್‌ಟಿ, ಉಪ್ಪು ಮತ್ತು ಮಸಾಲೆಯುಕ್ತ ಪ್ಯಾಕ್ ಮಾಡದ ಮತ್ತು ಲೇಬಲ್ ಮಾಡದ ಪಾಪ್‌ಕಾರ್ನ್‌ಗೆ 5% ಜಿಎಸ್‌ಟಿ ಅನ್ವಯಿಸುತ್ತದೆ.
ಒಂದೇ ವರ್ಷದಲ್ಲಿ 1,200 ಕೋಟಿ ರೂ. ವ್ಯಾಪಾರ
ಪಾಪ್‌ಕಾರ್ನ್ ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ದೊಡ್ದ ಉದ್ಯಮವಾಗಿ ಬೆಳೆದಿದೆ. ಕಳೆದ ವರ್ಷದ ಭಾರತದಲ್ಲಿ 1,200 ಕೋಟಿ ರೂ. ನಷ್ಟು ಪಾಪ್‌ಕಾರ್ನ್ ವ್ಯಾಪಾರವಾಗಿದೆ. ಪ್ರಸಕ್ತ ವರ್ಷದಲ್ಲಿ ಈವರೆಗೆ ವಿಶ್ವಾದ್ಯತಂತ ಮಾರುಕಟ್ಟೆಯಲ್ಲಿ 8 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಯ ವ್ಯಾಪಾರವಾಗಿದೆ ಎಂದು ಸಭೆಯಲ್ಲಿ ಚರ್ಚಿಸಿರುವುದಾಗಿ ವರದಿಗಳು ತಿಳಿಸಿವೆ. ಇದನ್ನೂ ಓದಿ: ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿ ಸಾವು – ಮುಖ್ಯಶಿಕ್ಷಕ ಸೇರಿ 6 ಶಿಕ್ಷಕರು ಅಮಾನತು
ಅಲ್ಲದೇ ಇನ್ನೂ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ವಿಮೆಯಲ್ಲಿ ಜಿಎಸ್‌ಟಿ ವಿನಾಯತಿ ನೀಡುವ ವಿಚಾರದಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಇನ್ನಷ್ಟು ಸಮಯಾವಕಾಶ ಬೇಕು ಎಂದು ಸಭೆಯ ನಂತರ, ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.