ಬೆಂಗಳೂರು: ನಮ್ಮದು ವ್ಯಕ್ತಿ ಚಿಂತನೆ ಅಲ್ಲ. ನಮ್ಮದು ಜನರ ಚಿಂತನೆ, ಜನರ ಬದುಕಿಗಾಗಿ ಹೋರಾಟ ಮಾಡುತ್ತೇನೆ. ಜೀವ ಇದ್ದರೆ ಜೀವನ ಎಂದು ಪರಿಸರವಾದಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರಗೇಟು ನೀಡಿದರು.
ಗುರುವಾರ ನರ್ಮದಾ ಬಚಾವ್ ಆಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್, ನಟ ಚೇತನ್ ಸೇರಿದಂತೆ ಇನ್ನಿತರ ಪರಿಸರವಾದಿಗಳು ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
Advertisement
Advertisement
ಈ ವಿಚಾರಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, ಮೇಧಾ ಪಾಟ್ಕರ್ ಅವರು ಅವರದ್ದೇ ಆದ ಚಿಂತನೆಯಲ್ಲಿ ಹೋರಾಟವನ್ನು ಮಾಡುತ್ತಿದ್ದಾರೆ. ಆದರೆ ನಮ್ಮದು ಜನರ ಚಿಂತನೆಯಾಗಿದೆ. ಮೇಧಾ ಪಾಟ್ಕರ್‌ಗೆ ನಾನು ಯಾಕೆ ಉತ್ತರ ಕೊಡಲಿ? ಅದಕ್ಕೆ ಸಿಎಂ ಸರ್ಕಾರ ಉತ್ತರ ಕೊಡುತ್ತಾರೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಎಸ್‌ಪಿ ಕಚೇರಿಯಲ್ಲಿ ಕೋವಿಡ್ ರೂಲ್ಸ್ ಬ್ರೇಕ್ – 2,500 ಮಂದಿ ವಿರುದ್ಧ ಎಫ್‌ಐಆರ್
Advertisement
Advertisement
ಮೇಕೆದಾಟು ಯೋಜನೆ ಜಾರಿ ಸಂಬಂಧ ಕಾಂಗ್ರೆಸ್ ಆಯೋಜಿಸಿದ್ದ ಪಾದಯಾತ್ರೆಗೆ ಕಲಾವಿದರಾದ ದುನಿಯಾ ವಿಜಯ್, ಸಾಧುಕೋಕಿಲಾ, ಉಮಾಶ್ರೀ ಬೆಂಬಲ ನೀಡಿದ್ದರು. ಇದನ್ನೂ ಓದಿ: ಇನ್ಫಿ ನಾರಾಯಣ ಮೂರ್ತಿ ಅಳಿಯ ಮುಂದಿನ ಬ್ರಿಟನ್ ಪ್ರಧಾನಿ?
ಮಾಧ್ಯಮಗಳ ಜೊತೆ ಮಾತನಾಡಿದ್ದ ಮೇಧಾ ಪಾಟ್ಕರ್, ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಮೂರು ಪಕ್ಷಗಳು ಮೇಕೆದಾಟು ಯೋಜನೆ ನೆಪದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಕರ್ನಾಟಕ ಜನತೆಯನ್ನು ದಾರಿ ತಪ್ಪಿಸಿ ನೂರಾರು ಎಕರೆ ನಾಶವಾಗಿ ಕೋಟಿ ಕಾಂಟ್ರಾರ್ಕ್ಟರ್ ಮತ್ತು ರಾಜಕೀಯ ವ್ಯಕ್ತಿಗಳ ಜೋಬು ತುಂಬಲಿದೆ. ಈ ಯೋಜನೆಯಿಂದ ಯಾರಿಗೂ ಅನುಕೂಲವಾಗುವುದಿಲ್ಲ ಎಂದು ಕಿಡಿಕಾರಿದ್ದರು.