ಸ್ಕಿನ್ ಲಿಫ್ಟ್ ಥೆರಪಿ ಮೊರೆ ಹೋದ ಶಿವರಾಜ್‌ಕುಮಾರ್ ನಾಯಕಿ ಮೆಹ್ರೀನ್ ಫಿರ್ಜಾದ

ಚಿತ್ರರಂಗದಲ್ಲಿ ಪ್ರತಿಭೆ ಎಷ್ಟು ಮುಖ್ಯವೋ ಅಂದ ಅಷ್ಟೇ ಮುಖ್ಯ ಅಂತಾ ನಟಿಮಣಿಯರು ಸೌಂದರ್ಯ ವೃದ್ಧಿಗೆ ಹೊಸ ಹೊಸ ಪ್ರಯೋಗಗಳನ್ನ ಮಾಡುತ್ತಾರೆ. ಇದೀಗ ಇಂತಹದ್ದೇ ಪ್ರಯೋಗಕ್ಕೆ ಶಿವರಾಜ್‌ಕುಮಾರ್ (Shivarajkumar) ನಟನೆಯ 124ನೇ ಸಿನಿಮಾ `ನೀ ಸಿಗೋವರೆಗೂ’ ಚಿತ್ರದ ನಾಯಕಿ ಮೆಹ್ರೀನ್ ಫಿರ್ಜಾದ(Mehreen Pirzadaa) ಕೈ ಹಾಕಿದ್ದಾರೆ. ಸ್ಕಿನ್ ಲಿಫ್ಟ್ ಥೆರಪಿಗೆ ಮೇಹ್ರೀನ್ ಮೊರೆ ಹೋಗಿದ್ದಾರೆ.
View this post on Instagram
ಅಕ್ಯು ಸ್ಕಿನ್ ಲಿಫ್ಟ್ ಹೆಸರಿನ ಟ್ರೀಟ್‌ಮೆಂಟ್ ಮಾಡಿಸಿಕೊಂಡಿದ್ದಾರೆ ಮೆಹ್ರೀನ್. ಇದಕ್ಕಾಗಿ ಅವರು ವಿದೇಶದಲ್ಲಿ ಖ್ಯಾತ ವೈದ್ಯರೊಬ್ಬರನ್ನು ಭೇಟಿ ಮಾಡಿದ್ದಾರೆ. ಅಕ್ಯು ಸ್ಕಿನ್ ಲಿಫ್ಟ್ ಥೆರಪಿ ಮಾಡಿಸಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮೆಹ್ರೀನ್ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ನಟಿಯ ಕೆನ್ನೆ, ಹಣೆ ಭಾಗಕ್ಕೆಲ್ಲ ಸೂಜಿಗಳನ್ನು ಚುಚ್ಚಲಾಗಿದೆ. ಇದನ್ನು ನೋಡಿ ಫ್ಯಾನ್ಸ್‌ಗೆ ನೋವಾಗಿದೆ. ಇದನ್ನೂ ಓದಿ: ಮುಂದುವರಿದ ಸಂಘರ್ಷ -ʼಕಾಂತಾರʼ ಪರ ತೀರ್ಪು ನೀಡಿದ್ದ ಜಿಲ್ಲಾ ಕೋರ್ಟ್ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ
View this post on Instagram
ಅಷ್ಟೊಂದು ಸೂಜಿ ಚುಚ್ಚಿಸಿಕೊಂಡಿದ್ದೀರಿ. ನಿಮಗೆ ನೋವಾಗುವುದಿಲ್ಲವೇ ಇಂತಹ ರಿಸ್ಕ್ ಏಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಒಂದನ್ನು ಮಾಡಲು ಹೋಗಿ ಮತ್ತೊಂದು ಆದೀತು ಎನ್ನುವ ಎಚ್ಚರಿಕೆ ನೀಡಿದ್ದಾರೆ. ಸದ್ಯ ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಬಗೆಬಗೆಯಲ್ಲಿ ಕಾಮೆಂಟ್‌ಗಳು ಬರುತ್ತಿವೆ.
ತೆಲುಗು, ತಮಿಳು ಸಿನಿಮಾಗಳಲ್ಲಿ ಮೋಡಿ ಮಾಡಿದ್ದ ನಟಿ ಇದೀಗ ಶಿವಣ್ಣಗೆ ನಾಯಕಿಯಾಗುವ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ.