ಸಿಕಾಡಾ (Cicada) ಪ್ಯಾನ್ ಇಂಡಿಯಾ ಚಿತ್ರದ ಕನ್ನಡದ ಫಸ್ಟ್ ಲುಕ್ ಪೋಸ್ಟರ್ (First Look) ಬಿಡುಗಡೆಯನ್ನು ಸ್ಯಾಂಡಲ್‌ವುಡ್ ತಾರೆಯರಾದ ಮೇಘನಾ ರಾಜ್ (Meghana Raj) ಮತ್ತು ಪ್ರಜ್ವಲ್ ದೇವರಾಜ್ (Prajwal Devaraj) ರಿಲೀಸ್ ಮಾಡಿದ್ದಾರೆ. ಕರ್ನಾಟಕ ಮಾಜಿ ಕೃಷಿ ಸಚಿವ ಎನ್.ಎಚ್ ಶಿವಶಂಕರ ರೆಡ್ಡಿ ಅವರು ತಮ್ಮ ಹೃತ್ಪೂರ್ವಕ ಹಾರೈಕೆಗಳೊಂದಿಗೆ, ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಮತ್ತು ಸಿಕಾಡಾ ಚಿತ್ರತಂಡಕ್ಕೆ ಉತ್ತಮ ಯಶಸ್ಸನ್ನು ಕೋರುವ ಮೂಲಕ ತಂಡವನ್ನು ಬೆಂಬಲಿಸಿದರು.
Advertisement
ಸಿಕಾಡಾ ತೆರೆಯಲ್ಲಿ ಹೊಸ ಮುಖಗಳು, ತಾಜಾ ಪ್ರತಿಭೆಗಳು ಮತ್ತು ಉತ್ತಮ ಅನುಭವದಿಂದ ತುಂಬಿದೆ. ಸಿಕಾಡಾ ನಿರ್ದೇಶಕರಾಗಿ ಶ್ರೀಜಿತ್ ಎಡವನ ಅವರ ಚೊಚ್ಚಲ ಚಿತ್ರ. ತಿರ್ನಾ ಫಿಲ್ಮ್ಸ್ ಮತ್ತು ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ವಂದನಾ ಮೆನನ್ ಮತ್ತು ಗೋಪಕುಮಾರ್ ಪಿ ನಿರ್ಮಿಸಿರುವ ಈ ಚಿತ್ರದಲ್ಲಿ ರಜಿತ್ ಸಿ.ಆರ್, ಗಾಯತ್ರಿ ಮಯೂರ, ಜೈಸ್ ಜೋಸ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಬೆಂಗಳೂರು, ಅಟ್ಟಪಾಡಿ, ವಾಗಮೋನ್, ಕೊಚ್ಚಿ ಮುಂತಾದೆಡೆ ಚಿತ್ರೀಕರಣ ನಡೆದಿದೆ.
Advertisement
Advertisement
ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಈ ಸಿನಿಮಾ ಮೂಡಿಬಂದಿದೆ. ‘ಸಿಕಾಡಾ’ ಚಿತ್ರದ ಒಂದು ವಿಶೇಷತೆಯೆಂದರೆ, ಪ್ರತಿ ಅವತರಣಿಕೆಯ ಚಿತ್ರಕ್ಕೂ ಪ್ರತ್ಯೇಕ ಟ್ಯೂನ್ ಗಳನ್ನು ಕಂಪೋಸ್ ಮಾಡಲಾಗಿದೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ನಾಲ್ಕು ಭಾಷೆಗಳಲ್ಲಿ ಆ ಭಾಷೆಯ ನೇಟಿವಿಟಿಗೆ ಹೊಂದುವಂತಹ ಟ್ಯೂನ್ ಗಳನ್ನು ಸಂಯೋಜಿಸಲಾಗಿವೆ. ನಾಲ್ಕು ಭಾಷೆಯ ಅವತರಣಿಕೆಗಳಿಗೆಂದೇ ಒಟ್ಟು 24 ಹೊಸ ಹಾಡುಗಳನ್ನು ಕಂಪೋಸ್ ಮಾಡಿರುವುದು ವಿಶೇಷ. ಇದು ಸಿಕಾಡಾದ ವಿಶಿಷ್ಟ ಲಕ್ಷಣವಾಗಿದೆ.
Advertisement
ಶ್ರೀಜಿತ್ ಎಡವನ ಸಂಗೀತ ಸಂಯೋಜಕರೂ ಹೌದು. ಅವರು ‘ಪ್ರೀತಿ ನನ್ನ ಕವಿಯೆ’ ಮತ್ತು ‘ನೆಂಜೋಡು ಚೆರ್ತು’ ನಂತಹ ಸಂಗೀತ ಹಿಟ್‌ಗಳನ್ನು ಸಂಯೋಜಿಸುವ ಮೂಲಕ ತಮಿಳು ಮತ್ತು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದರು. ಈ ಚಿತ್ರದ ಹಾಡುಗಳಿಗೆ ಅದ್ಭುತವಾದ ಸಾಹಿತ್ಯವನ್ನು ರವಿತೇಜ ಅಮರನಾರಾಯಣ ಬರೆದಿದ್ದಾರೆ. ನವೀನ್ ರಾಜ್ ಚಿತ್ರಕ್ಕೆ ಸಿನಿಮಾಟೋಗ್ರಾಫರ್ ಆಗಿದ್ದು, ಶೈಜಿತ್ ಕುಮಾರನ್ ಸಂಕಲನ ಮಾಡಿದ್ದಾರೆ.
Web Stories