– ಸಿಟಿಗೆ ಹೋಗಿ ನೆಲೆಸೋಣ ಅಂತ ಹಠ ಹಿಡಿದಿದ್ದ ಮೇಘನಾ
– ಕಾಟ ಕೊಟ್ರೆ ಸಾಯ್ತೀನಿ ಅಂದ್ರೂ ಕ್ಯಾರೆ ಎಂದಿರಲಿಲ್ಲ ಪತ್ನಿ
ತುಮಕೂರು: ಪ್ರೀತಿಗೆ ಕಣ್ಣಿಲ್ಲ ಎನ್ನುವ ಮಾತಿಗೆ ಹೇಳಿ ಮಾಡಿಸಿದಂತೆ ಇದ್ದ ಜೋಡಿ ತುಮಕೂರಿನ ಶಂಕರಣ್ಣ- ಮೇಘನಾ. ಈ ಜೋಡಿ ಮದುವೆಯಾಗಿ ಹೊಸ ಬಾಳಿಗೆ ಕಾಲಿಟ್ಟಿದ್ದು ಮಾತ್ರ ಸಖತ್ ಸುದ್ದಿಯಾಗಿತ್ತು. ಆದರೆ ಇದೀಗ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಹೌದು. 5 ತಿಂಗಳ ಹಿಂದೆ ಮದುವೆಯಾಗಿದ್ದ ಶಂಕರಣ್ಣ ಮತ್ತು ಮೇಘನಾ ಮಧ್ಯೆ ವಯಸ್ಸಿನ ಅಂತರ ಇರುವುದರಿಂದ ಹಲವು ಟೀಕೆಗಳಿಗೆ ಗುರಿಯಾದರು. ಆದರೂ ಈ ಜೋಡಿ ಮಧ್ಯೆ ಇರುವ ನಂಬಿಕೆ, ಪ್ರೀತಿ ಮಾತ್ರ ಬಲವಾಗಿತ್ತು. ಹೀಗಾಗಿ ಇಬ್ಬರು ಸಾಮರಸ್ಯದ ಜೀವನವನ್ನು ಬರೋಬ್ಬರಿ 6 ತಿಂಗಳು ಕಳೆದರು. ಆದರೆ ಅದೇನಾಯ್ತೋ ಶಂಕರಣ್ಣ ಇಂದು ಹಲಸಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚೌಡನಕುಪ್ಪೆ ನಿವಾಸಿಯಾಗಿರುವ ಶಂಕರಣ್ಣ ಕಳೆದ ವರ್ಷ 25ರ ಯುವತಿ ಮೇಘನಾಳನ್ನು ವರಿಸಿದ್ದರು. ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯದ ಶಂಕರಣ್ಣ ಮತ್ತು ಮೇಘನಾ ಅವರ ಮದುವೆ ನಡೆದಿತ್ತು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ಮದುವೆಯಾದ ಐದು ತಿಂಗಳಿನಲ್ಲಿಯೇ ಶಂಕರಣ್ಣ ಅವರು ಸಾವಿಗೆ ಶರಣಾಗಿರುವುದು ದುರಂತವೇ ಸರಿ.
ನಡೆದಿದ್ದೇನು?: ಶಂಕರಣ್ಣ, ಮೇಘನಾ ಮದುವೆಯಾದ ಹೊಸತರಲ್ಲಿ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಇಬ್ಬರ ಮಧ್ಯೆ ವಯಸ್ಸಿನ ಅಂತರವಿತ್ತು. ಆದರೂ ಇಬ್ಬರು ಹೊಂದಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಮನೆಯಲ್ಲಿ ಅತ್ತೆ, ಸೊಸೆ ಮಧ್ಯೆ ಕಲಹ ಉಂಟಾಗಿತ್ತು. ಹೀಗಾಗಿ ಮೇಘನಾ, ಶಂಕರಣ್ಣನನ್ನು ಮೈಸೂರು ಅಥವಾ ಬೆಂಗಳೂರಿಗೆ ಹೋಗಿ ವಾಸಿಸೋಣ ಎಂದು ಪಟ್ಟು ಹಿಡಿದು ಕುಳಿತಿದ್ದಳು. ಇದಕ್ಕೆ ಶಂಕರಣ್ಣ ಮತ್ತು ಅವರ ತಾಯಿ ಒಪ್ಪಿಕೊಂಡಿರಲಿಲ್ಲ. ಇದನ್ನೂ ಓದಿ: ಶಂಕರಣ್ಣನ ಬಳಿ ಹೋಗಿ ಮದುವೆ ಆಗ್ತೀರಾ ಎಂದು ಕೇಳಿದ್ದ ಮೇಘನಾ
ಇತ್ತ ಮೇಘನಾ ಮಾತ್ರ ಊರಿನಲ್ಲಿರುವ ಜಮೀನು ಮಾರಿ ಸಿಟಿಗೆ ಹೋಗೊಣ ಎಂದು ಶಂಕರಣ್ಣನ ಮೇಲೆ ಒತ್ತಡ ಹೇರುತ್ತಿದ್ದಳು. ಈ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಲೇ ಇತ್ತು. 2.5 ಎಕರೆ ಜಮೀನು ಮಾರಾಟ ಮಾಡುವುದು ಬೇಡ. ತಾಯಿ ಜೊತೆಗೆ ಹಳ್ಳಿಯಲ್ಲಿ ಇರೋಣ ಎಂದು ಹೇಳುತ್ತಾ ಮೇಘನಾ ಮನವೊಲಿಸಲು ಶಂಕರಣ್ಣ ಪ್ರಯತ್ನಿಸುತ್ತಿದ್ದರು. ಆದರೆ ಮೇಘನಾ ಮಾತ್ರ ಯಾವುದಕ್ಕೂ ಒಪ್ಪಿರಲಿಲ್ಲ. ತನ್ನ ತಾಯಿಗೆ ಬಿಟ್ಟು ಹೋಗಲ್ಲ, ನೀನು ಹೀಗೆ ಗಲಾಟೆ, ಕಾಟ ಕೊಟ್ಟರೆ ನಾನು ಸಾಯುತ್ತೇನೆ ಎಂದು ಹಲವು ಬಾರಿ ಮೇಘನಾ ಬಳಿ ಹೇಳಿಕೊಂಡಿದ್ದನು. ಸಾಯ್ತೀನಿ ಎಂದರೂ ಮೇಘನಾ ಮಾತ್ರ ತಲೆಕೆಡಿಸಿಕೊಂಡಿರಲಿಲ್ಲ. ನಿನ್ನೆ ಮೇಘನಾ ಮತ್ತು ಶಂಕರಣ್ಣ ತಾಯಿ ನಡುವೆ ಜಗಳವಾಗಿದೆ. ಈ ವಿಚಾರವಾಗಿ ಶಂಕರಣ್ಣ ಮನಸ್ಸಿಗೆ ನೋವುಂಟಾಗಿತ್ತು ಎಂಬ ವಿಚಾರ ತಿಳಿದುಬಂದಿದೆ.
ಇಂದು ಬೆಳ್ಳಂಬೆಳಗ್ಗೆ ಎದ್ದ ಶಂಕರಣ್ಣ ಹೊಲಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಗೆ ಬಂದಿದ್ದಾರೆ. ತೋಟಕ್ಕೆ ತೆರಳಿ ಹಲಸಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಂಕರಣ್ಣ ಮೃತದೇಹದ ಬಳಿ ಮೇಘನಾ ಮತ್ತು ಆತನ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಅತ್ತೆ, ಸೋಸೆ ಗಲಾಟೆ ಶಂಕರಣ್ಣನ ಪ್ರಾಣಕ್ಕೆ ಕುತ್ತು ತಂದಿತ್ತು ಎಂದು ಕೆಲವು ಸ್ಥಳೀಯರು ಗುಸುಗುಸು ಎನ್ನುತ್ತಿದ್ದಾರೆ. ಸದ್ಯ ಕುಣಿಗಲ್ ತಾಲೂಕಾ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.
ಅತ್ತೆ, ಸೊಸೆ ಗಲಾಟೆ ಮನೆಯಲ್ಲಿ ಹೆಚ್ಚಾಗಿತ್ತು. ಮೇಘನಾಗೆ ಬೆಂಗಳೂರಿನಲ್ಲಿ ಹೋಗಿ ಜೀವನ ನಡೆಸಬೇಕು ಎನ್ನವ ಆಸೆ ಇತ್ತು. ಆದರೆ ಅತ್ತೆ, ಗಂಡ ಮಾತ್ರ ಮೇಘನಾಗೆ ನಿರ್ಧಾರಕ್ಕೆ ಒಪ್ಪಿರಲಿಲ್ಲ ಎಂದು ಹಲವು ಊಹಾಪೋಹಗಳು ಹರಿದಾಡುತ್ತಿವೆ. ಒಟ್ಟಿನಲ್ಲಿ ಶಂಕರಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಪೊಲೀಸರ ತನಿಖೆಯಿಂದಷ್ಟೇ ನಿಖರ ಕಾರಣ ತಿಳಿದು ಬರಬೇಕಾಗಿದೆ.