ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ (Meghanaraj) ಅವರು ಗಣೇಶ ಹಬ್ಬದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಶ್ರೀನಗರ ಕಿಟ್ಟಿಗೆ (Srinagar Kitty) ನಾಯಕಿಯಾಗುವ ಮೂಲಕ ಮೇಘನಾ ಬಿಗ್ ಅಪ್‌ಡೇಟ್ ನೀಡಿದ್ದಾರೆ.
‘ತತ್ಸಮ ತದ್ಭವ’ ಚಿತ್ರ ಇತ್ತೀಚೆಗೆ ರಿಲೀಸ್ ಆಗಿ, ಉತ್ತಮ ಪ್ರಶಂಸೆ ಪಡೆಯಿತು. ಈ ಬೆನ್ನಲ್ಲೇ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ವಿನಯ್ ಪ್ರಿತಮ್, ಗುರು ಹೆಗ್ಡೆ ನಿರ್ದೇಶನದ ‘ಅಮರ್ಥ’ (Amartha) ಎಂಬ ವಿಭಿನ್ನ ಸಿನಿಮಾದಲ್ಲಿ ಲೀಡಿಂಗ್ ಲೇಡಿಯಾಗಿ ನಟಿಸಲಿದ್ದಾರೆ.
View this post on Instagram
ಮೊದಲ ಬಾರಿಗೆ ಶ್ರೀನಗರ ಕಿಟ್ಟಿಯೊಂದಿಗೆ ಹೀರೋಯಿನ್ ಆಗಿ ಮೇಘನಾ ರಾಜ್ ತೆರೆ ಹಂಚಿಕೊಳ್ತಿದ್ದಾರೆ. ಟೈಟಲ್ ಕೂಡ ಭಿನ್ನವಾಗಿದ್ದು, ಸಿನಿಮಾ ವಿಭಿನ್ನವಾಗಿರಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ:ದೊಡ್ಮನೆ ಹೀರೋಗೆ ಮೇಘಾ ಶೆಟ್ಟಿ ಹೀರೋಯಿನ್
ಗಣೇಶ್ ಹಬ್ಬದಂದು ಹೊಸ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಶ್ರೀನಗರ ಕಿಟ್ಟಿ, ಶರ್ಟ್-ಪಂಚೆ-ಶಲ್ಯ ಧರಿಸಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ಮೇಘನಾ ಸೀರೆಯುಟ್ಟು ಕಂಗೊಳಿಸಿದ್ದಾರೆ. ಸದ್ಯ ಈ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ. ಸದ್ಯದಲ್ಲೇ ಸಿನಿಮಾದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.