ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಅವರು ಒಂದಲ್ಲಾ ಒಂದು ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಆದರೆ ಇದೀಗ ಅವರು ಜಿಮ್‍ಗೆ ಸೇರಿದ್ದು ಬೆವರು ಹರಿಸುತ್ತಿರುವ ಫೋಟೋ ವೈರಲ್ ಅಗುತ್ತಿದೆ.
ಮೇಘನಾ ರಾಜ್ ಅವರು ತಾಯಿಯಾದ ಬಳಿಕ ಮಗುವಿನ ಆರೈಕೆಯಲ್ಲಿ ತೊಡಗಿಕೊಂಡಿದ್ದರು. ಇದೀಗ ಅವರು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಭಾನುವಾರ ಹೇಗೆ ಆದರ್ಶಪ್ರಾಯವಾಗಿ ಪ್ರಾರಂಭವಾಗುತ್ತದೆ. ಜಿಮ್‍ಗೆ ಪರಿಸರ ಸ್ನೇಹಿಯಾದ ಮ್ಯಾಟ್ ಮತ್ತು ಪಾದದ ರಕ್ಷೆ ಮತ್ತು ಕಲವು ವಸ್ತುಗಳನ್ನು ಸೇರಿಸುವುದು ಎಂದು ಬರೆದುಕೊಂಡು ಜಿಮ್‍ನಲ್ಲಿ ಕುಳಿತು ನೀರು ಕುಡಿಯುತ್ತಿದ್ದ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲು ಹಂಚಿಕೊಂಡಿದ್ದಾರೆ. ಮೇಘನಾ ರಾಜ್ ಅವರನ್ನು ಜಿಮ್‍ನಲ್ಲಿ ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಿರು, ಮೇಘನಾ ಪುತ್ರ ಈಗ ‘ರಾಯನ್ ರಾಜ್ ಸರ್ಜಾ’
View this post on Instagram
ರಾಯನ್ ರಾಜ್ ಸರ್ಜಾನ ಕ್ಯೂಟ್ ಫೋಟೋಗಳನ್ನು ಹಂಚಿಕೊಳ್ಳುತ್ತಾ, ತಾಯ್ತನದ ಕೆಲವು ಸಂತೋಷದ ಕ್ಷಣಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿದ್ದರು. ಇದೀಗ ಜಿಮ್‍ನಲ್ಲಿ ಬೆವರು ಸುರಿಸುತ್ತಿದ್ದಾರೆ. ಇಷ್ಟು ದಿನ ಮುದ್ದು ಮಗನ ಲಾಲನೆ ಪಾಲನೆಯಲ್ಲಿ ತೊಡಗಿದ್ದ ಮೇಘನಾ ರಾಜ್ ಇದೀಗ ಮತ್ತೆ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಪಾತ್ರಕ್ಕೆ ತಕ್ಕಂತೆ ಹೊಂದಿಕೊಳ್ಳಲು ಬೆವರು ಹರಿಸುತ್ತಿದ್ದಾರೆ. ಪನ್ನಗಾಭರಣ, ಹೊಸ ಪ್ರತಿಭೆ ನಿರ್ದೇಶಕ ವಿಶಾಲ್, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮುಂತಾದವರು ಸೇರಿ ಈ ಚಿತ್ರವನ್ನು ತಯಾರಿಸುತ್ತಿದ್ದಾರೆ. ಮೇಘನಾ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕಿನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ. ಮೇಘನಾ ರಾಜ್ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿ ಕಾದುಕೊಂಡಿದ್ದಾರೆ. ಇದನ್ನೂ ಓದಿ:ಜೂನಿಯರ್ ಚಿರುಗೆ 10 ತಿಂಗಳು ತುಂಬಿರುವ ಸಂಭ್ರಮ- ಮನಸಾರೆ ನಕ್ಕ ಮೇಘನಾ ರಾಜ್