ಡಿಸ್ಪುರ್: ಯುವತಿಯೊಬ್ಬಳು ಮಾಜಿ ಪ್ರಿಯತಮ ತನ್ನ ಅರೆನಗ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಕ್ಕೆ ಗ್ರಾಮದವರೇ ಆಕೆಗೆ ದಂಡ ವಿಧಿಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಅಸ್ಸಾಂನ ಗುವಾಹಟಿಯಲ್ಲಿ ಈ ಘಟನೆ ನಡೆದಿದೆ. ಸದ್ಯಕ್ಕೆ ಯುವತಿ ನೀಡಿದ ದೂರಿ ಆಧಾರದ ಮೇರೆಗೆ ಮೇಘಾಲಯದ ಗೈರೋಂಗ್ ಗ್ರಾಮದ ನಿವಾಸಿ ಆರೋಪಿ ಮಾನ್ಸ್ ರಂಗ್ ಸಂಗ್ಮಾನನ್ನು ಬಂಧಿಸಲಾಗಿದೆ. ಆದರೆ ಯುವತಿ ಪಾಪ ಮಾಡಿದ್ದಾಳೆ ಎಂದು ಗ್ರಾಮದ ಹಿರಿಯರು ಆಕೆಗೆ 3000 ರೂ. ದಂಡ ವಿಧಿಸಿದ್ದಾರೆ.
Advertisement
Advertisement
ಸಂಗ್ಮಾ ಮತ್ತು ನಾನು ಪರಸ್ಪರ ಪ್ರೀತಿಸುತ್ತಿದ್ದೇವು. ಈ ವೇಳೆ ಅವನ ಜೊತೆ ಕಳೆದ ಏಕಾಂತ ಕ್ಷಣಗಳನ್ನು ನನಗೆ ತಿಳಿಯದಂತೆ ವಿಡಿಯೋ ಮಾಡಿಕೊಂಡಿದ್ದಾನೆ. ಈ ಬಗ್ಗೆ ನನಗೆ ತಿಳಿದಾಗ ವಿಡಿಯೋ ಡಿಲೀಟ್ ಮಾಡುವಂತೆ ಹೇಳಿದ್ದೆ. ಆದರೆ ಆರೋಪಿ ಇದ್ದಕ್ಕೆ ಒಪ್ಪಿರಲಿಲ್ಲ.
Advertisement
ಈಗ ನಮ್ಮಿಬ್ಬರ ಪ್ರೀತಿ ಸಂಬಂಧ ಮುರಿದು ಬಿದ್ದಿದೆ. ಆದ್ದರಿಂದ ನನ್ನ ಮೇಲಿನ ದ್ವೇಷಕ್ಕೆ ತನ್ನ ಅರೆ ನಗ್ನ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾನೆ ಎಂದು ಸಂತ್ರಸ್ತ ಯುವತಿ ಮೆಂಡಿಪತರ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
Advertisement
ಈ ಕುರಿತು ದೂರು ದಾಖಲಿಸಿರುವ ಪೊಲೀಸರು ಆರೋಪಿ ಮಾನ್ಸ್ ರಂಗ್ ಸಂಗ್ಮಾನನ್ನು ಬಂಧಿಸಿದ್ದಾರೆ. ಆದರೆ ಯುವತಿಯ ಗ್ರಾಮದ ಮುಖಂಡರು ಈಕೆ ಪಾಪ ಮಾಡಿದ್ದಾಳೆ ಎಂದು 3000 ರೂ. ದಂಡ ವಿಧಿಸಿದ್ದಾರೆ. ಬಳಿಕ ಅಲ್ಲಿನ ಸಮುದಾಯವದರು ಮತ್ತೊಮ್ಮೆ ಸಭೆ ನಡೆಸಿ 3000 ರೂ. ದಂಡದ ಹಣವನ್ನು 1,500 ರೂ.ಗೆ ಕಡಿಮೆ ಮಾಡಿದ್ದಾರೆ.
ಸದ್ಯಕ್ಕೆ ಸಿವಿಲ್ ಸೊಸೈಟಿ ಮಹಿಳಾ ಸಂಸ್ಥೆ ಯುವತಿಯನ್ನು ರಕ್ಷಣೆ ಮುಂದಾಗಿದ್ದು, ಆಕೆಗೆ ನ್ಯಾಯ ಕೊಡಿಸಿವುದಾಗಿ ಭರವಸೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv