ಶಿಲ್ಲಾಂಗ್: ಧರ್ಮದ ಹೆಸರಿನಲ್ಲಿ ದೇಶ ವಿಭಜನೆಯಾದ ಬಳಿಕ ಪಾಕಿಸ್ತಾನ ತನ್ನನ್ನು ಮುಸ್ಲಿಂ ರಾಷ್ಟ್ರ ಎಂದು ಕರೆದುಕೊಂಡಿದೆ. ಆದರೆ ಭಾರತ ಮಾತ್ರ ಜ್ಯಾತ್ಯಾತೀತ ರಾಷ್ಟ್ರ ಎಂದು ಕರೆದುಕೊಳ್ಳುತ್ತಿದೆ. ಆದರೆ ಭಾರತವನ್ನ ಹಿಂದೂ ರಾಷ್ಟ್ರ ಎಂದು ಕರೆಯಬೇಕೆಂದು ಮೇಘಾಲಯ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಆರ್ ಸೇನ್ ಅಭಿಪ್ರಾಯ ಪಟ್ಟಿದ್ದಾರೆ.
ರಾಣಾ ಎಂಬುವವರಿಗೆ ರಾಜ್ಯ ಸರ್ಕಾರ ನಿವಾಸ ಪ್ರಮಾಣ ಪತ್ರ ನಿರಾಕರಿಸಿದ ಪ್ರಕರಣದ ತೀರ್ಪು ನೀಡಿದ ಸಂದರ್ಭದಲ್ಲಿ ನ್ಯಾ. ಸೇನ್ ಅವರು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ಜಗತ್ತಿನ ಅಥವಾ ಭಾರತದಲ್ಲಿ ಪ್ರಳಯ ಸಂಭವಿಸಿದ ಹೊರತು ಯಾರು ಭಾರತವನ್ನು ಮತ್ತೊಂದು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸಬೇಡಿ. ಇಂದಿಗೂ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಲ್ಲಿ ಉಳಿದಿರುವ ಹಿಂದೂ, ಸಿಖ್, ಜೈನ್, ಬೌದ್ದ, ಕ್ರೈಸ್ತ, ಪಾರ್ಸಿ ಸೇರಿದಂತೆ ವಿವಿಧ ಧರ್ಮದ ಜನರಿಗೆ ಅಲ್ಲಿ ಚಿತ್ರ ಹಿಂಸೆ ನೀಡಲಾಗುತ್ತಿದೆ. ಅಲ್ಲದೇ ವಿಭಜನೆಯ ವೇಳೆ ಪಾಕಿಸ್ತಾನ ತೊರೆದು ಬಂದ ಹಿಂದೂಗಳಿಗೆ ಇಲ್ಲಿ ವಿದೇಶಿಯರಂತೆ ನೋಡಲಾಗುತ್ತಿದೆ. ಇದು ನನ್ನ ಪ್ರಕಾರ ನೈಸರ್ಗಿಕ ನ್ಯಾಯಾಂಗ ತತ್ವಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.
Advertisement
Advertisement
ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಿಂದ ಬಂದ ಹಿಂದೂಗಳು, ಸಿಖ್, ಬೌದ್ಧರು, ಪಾರ್ಸಿಗಳು ಯಾವುದೇ ದಾಖಲೆ ನೀಡದೇ ಇದ್ದರೂ ಅವರಿಗೆ ಭಾರತದ ಪೌರತ್ವ ನೀಡಬೇಕು ಎಂದು ನ್ಯಾ.ಸೇನ್ ಅವರು ಪ್ರಧಾನಿ ಮೋದಿಗೆ ಆದೇಶ ರೂಪದ ಮನವಿಯನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ಇದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾತ್ರ ಆರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
Advertisement
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು. ಭಾರತದ ಕಾನೂನು ಮತ್ತು ಸಂವಿಧಾನವನ್ನ ಗೌರವಿಸದ ಯಾರೇ ಆಗಲಿ ಅವರನ್ನು ಭಾರತದ ನಾಗರಿಕ ಎಂದು ಗುರುತಿಸಬಾರದು ಎಂದು ತಮ್ಮ 37 ಪುಟಗಳ ಆದೇಶಲ್ಲಿ ಉಲ್ಲೇಖಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv