ಲಕ್ನೋ: ಫಾರ್ಮ್‌ಹೌಸ್‌ನಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮೇಘಾಲಯದ ಉಪಾಧ್ಯಕ್ಷ ಬೆರ್ನಾಡ್ ಎನ್ ಮರಕ್ ಅವರನ್ನು ಉತ್ತರಪ್ರದೇಶದಲ್ಲಿ ಬಂಧಿಸಲಾಗಿದೆ.
ಶನಿವಾರ ಪೊಲೀಸರು ನಡೆಸಿದ ದಾಳಿಯಲ್ಲಿ ಮರಕ್ ಅವರ ಫಾರ್ಮ್‌ಹೌಸ್‌ನಿಂದ 6 ಅಪ್ರಾಪ್ತರನ್ನು ರಕ್ಷಿಸಿ, 73 ಜನರನ್ನು ಬಂಧಿಸಲಾಗಿತ್ತು. ಘಟನೆಯ ಬೆನ್ನಲ್ಲೇ ಮರಕ್ ಪರಾರಿಯಾಗಿದ್ದರು. ಅವರನ್ನು ತನಿಖೆಗೆ ಸಹಕರಿಸುವಂತೆ ಕೇಳಿಕೊಳ್ಳಲಾಯಿತಾದರೂ ತನಿಖಾಧಿಕಾರಿಗಳಿಂದ ಅವರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಇದನ್ನೂ ಓದಿ: ಪ್ರತಿಭಟನೆ ವೇಳೆ ಕಾಂಗ್ರೆಸ್ ಮುಖಂಡನ ಕೂದಲು ಹಿಡಿದು ಜೀಪಿನೊಳಗೆ ದಬ್ಬಿದ ಪೊಲೀಸರು
Advertisement
Advertisement
ಸೋಮವಾರ ತುರಾ ನ್ಯಾಯಾಲಯ ಮರಕ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಇಂದು ಮೇಘಾಲಯ ಪೊಲೀಸರು ಅವರಿಗೆ ಲುಕ್‌ಔಟ್ ನೋಟಿಸ್ ನೀಡಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ಅವರನ್ನು ಉತ್ತರಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಹಗರಣ – ಚಟರ್ಜಿ ಆಪ್ತೆಯ ಮನೆಯಲ್ಲಿ ಸ್ಫೋಟಕ ಮಾಹಿತಿಯಿರುವ ಡೈರಿ ಪತ್ತೆ
Advertisement
ಪೊಲೀಸರು ಫಾರ್ಮ್‌ಹೌಸ್‌ನಿಂದ 47 ಯುವಕರು ಹಾಗೂ 26 ಮಹಿಳೆಯರನ್ನು ಬಂಧಿಸಿದ್ದರು. 6 ಅಪ್ರಾಪ್ತರನ್ನು ಕೊಳಕಾದ ಕೊಠಡಿಯಲ್ಲಿ ಕೂಡಿ ಹಾಕಲಾಗಿತ್ತು. 30 ಸಣ್ಣ ಕೊಠಡಿಗಳಿದ್ದ ಫಾರ್ಮ್‌ಹೌಸ್ ಅನ್ನು ಅಕ್ರಮವಾಗಿ ವೇಶ್ಯಾವಾಟಿಕೆಗೆ ಬಳಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.